ಪಂಚರಾಜ್ಯಗಳ ಭವಿಷ್ಯ ನಿರ್ಧಾರ.. ಸಂಜೆ ವೇಳೆಗೆ ಪೂರ್ಣ ಫಲಿತಾಂಶ

author img

By

Published : Mar 9, 2022, 8:02 PM IST

Updated : Mar 10, 2022, 6:07 AM IST

counting of votes

Five state Assembly Election results-2022 ತಿಂಗಳಿಂದ ನಡೆದ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್​, ಮಣಿಪುರ ಮತ್ತು ಗೋವಾ ವಿಧಾನಸಭೆಯ ಮತ ಎಣಿಕೆ ಪ್ರಕ್ರಿಯೆಯು ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಡಿಂದ್ದು, ಸಂಜೆ ವೇಳೆಗೆ ಎಲ್ಲ ರಾಜ್ಯಗಳ ಫಲಿತಾಂಶ ಹೊರಬೀಳಲಿದೆ.

ನವದೆಹಲಿ: ಇಡೀ ದೇಶದಲ್ಲಿಯೇ ಸದ್ದು ಮಾಡಿದ್ದ, 2 ತಿಂಗಳಿಂದ ಸುದೀರ್ಘವಾಗಿ ನಡೆದ ಪಂಚರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಯ ಬಹು ನಿರೀಕ್ಷಿತ ಫಲಿತಾಂಶ ಸಂಜೆ ವೇಳೆಗೆ ಹೊರ ಬೀಳಲಿದೆ. ಎಲ್ಲಾ 5 ರಾಜ್ಯಗಳ ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.

ಈ ಪಂಚರಾಜ್ಯಗಳಲ್ಲಿ 2 ತಿಂಗಳಿಗೂ ಹೆಚ್ಚು ಕಾಲ ಚುನಾವಣಾ ಪ್ರಚಾರ, ಮತದಾನ ನಡೆದಿದೆ. ಉತ್ತರಪ್ರದೇಶ (403 ಸ್ಥಾನಗಳು), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ಮತ್ತು ಗೋವಾದ(40) ಸ್ಥಾನಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆದಿತ್ತು.

ಫೆಬ್ರವರಿ 10 ರಂದು ಉತ್ತರಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನದಿಂದ ಹಿಡಿದು ಮಾರ್ಚ್​ 7 ರಂದು ನಡೆದ ಕೊನೆಯ ಮತ್ತು 7 ನೇ ಹಂತದ ಮತದಾನದವರೆಗೂ ಸುದೀರ್ಘ ಕಾಲ ನಡೆದ ಚುನಾವಣೆ ಇದಾಗಿದೆ. ಇದರ ಜೊತೆಗೆ ಉತ್ತರಾಖಂಡ, ಪಂಜಾಬ್​, ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆದರೆ, ಮಣಿಪುರ ವಿಧಾನಸಭೆಗೆ ಫೆಬ್ರವರಿ 27 ಮತ್ತು ಮಾರ್ಚ್​ 3 ರಂದು ಎರಡು ಹಂತದಲ್ಲಿ ಮತದಾನ ಜರುಗಿತ್ತು.

ಸಮೀಕ್ಷೆಗಳ ಲೆಕ್ಕಾಚಾರ ಏನು?: ಪಂಚರಾಜ್ಯಗಳ ಮತದಾನ ಮುಕ್ತಾಯದ ಬಳಿಕ ನಡೆದ ಸಮೀಕ್ಷೆಗಳಲ್ಲಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ದಾಖಲೆಯ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಅಲ್ಲದೇ ಮಣಿಪುರವೂ ಕೇಸರಿ ಪಡೆಯ ಪಾಲಾಗಲಿದೆ ಎಂದಿವೆ. ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಈ ಬಾರಿ ಅಧಿಕಾರ ನಡೆಸಲಿದೆ, ಉತ್ತರಾಖಂಡ ಮತ್ತು ಗೋವಾದಲ್ಲಿ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಿವೆ.

ಪಂಚರಾಜ್ಯಗಳ 690 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ವೀಕ್ಷಿಸಲು ಭಾರತೀಯ ಚುನಾವಣಾ ಆಯೋಗದ (ECI) ವೆಬ್‌ಸೈಟ್‌(results.eci.gov.in) ಗೆ ಲಾಗ್ ಇನ್ ಆಗಬಹುದು.

ಓದಿ: ಯುಪಿ ಮತ್ತೆ BJPಗೆ, AAP ಕೈಗೆ ಪಂಜಾಬ್: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ..

Last Updated :Mar 10, 2022, 6:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.