ETV Bharat / bharat

ರೈತರ ಮೇಲೆ ಲಾಠಿ ಚಾರ್ಜ್​ಗೆ ಆದೇಶಿಸಿದ್ದ ಅಧಿಕಾರಿಗೆ ಕಡ್ಡಾಯ ರಜೆ.. ಪ್ರತಿಭಟನೆ ಹಿಂಪಡೆದ ರೈತರು

author img

By

Published : Sep 11, 2021, 1:47 PM IST

ಆಗಸ್ಟ್ 28ರಂದು ಕರ್ನಾಲ್​​ನಲ್ಲಿ ನಡೆದಿದ್ದ ರೈತರ ಮೇಲಿನ ಲಾಠಿ ಚಾರ್ಜ್​​​​ ಸಂಬಂಧ ಐಎಎಸ್ ಅಧಿಕಾರಿ ಆಯೂಷ್ ಸಿನ್ಹಾ ಸರ್ಕಾರ ಶಿಕ್ಷೆ ನೀಡಿದೆ. ಆತನನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

farmers-call-off-protest-after-haryana-govt-orders-probe-in-august-28-incident
ರೈತರ ಮೇಲೆ ಲಾಠಿ ಚಾರ್ಜ್​ಗೆ ಆದೇಶಿಸಿದ್ದ ಅಧಿಕಾರಿಗೆ ಕಡ್ಡಾಯ ರಜೆ

ಕರ್ನಾಲ್​​ (ಹರಿಯಾಣ): ಕಳೆದ ಆಗಸ್ಟ್ 28ರಂದು ಕರ್ನಾಲ್​​​ನಲ್ಲಿ ರೈತರ ಮೇಲೆ ನಡೆದಿದ್ದ ಲಾಠಿ ಚಾರ್ಜ್ ಪ್ರಕರಣ​ ಸಂಬಂಧ ರೈತರ ಬೇಡಿಕೆಗೆ ಕೊನೆಗೂ ಹರಿಯಾಣ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆ ಅಂದು ರೈತರ ಮೇಲೆ ಲಾಠಿ ಚಾರ್ಜ್​​ಗೆ ಆದೇಶ ನೀಡಿದ್ದ ಐಎಎಸ್​ ಅಧಿಕಾರಿ ಆಯೂಷ್ ಸಿನ್ಹಾ ಅವರನ್ನ ರಜೆಯ ಮೇಲೆ ಕಳುಹಿಸಿದೆ.

ಆಗಸ್ಟ್ 28ರಂದು ಕರ್ನಾಲ್​​​ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಓರ್ವ ರೈತ ಮೃತಪಟ್ಟು ಹಲವು ರೈತರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಇದನ್ನು ವಿರೋಧಿಸಿ ರೈತರು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದರು.

ಈ ಘಟನೆ ಸಂಬಂಧ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರೈತ ನಾಯಕ ಗುರ್ನಾಮ್ ಚದುನಿ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆಯಾಗಬೇಕು. ಒಂದು ತಿಂಗಳೊಳಗೆ ಈ ತನಿಖೆ ಮುಗಿಯಬೇಕು. ಅಲ್ಲದೆ ಕರ್ನಾಲ್​​ನ ಮಾಜಿ ಉಪ ಜಿಲ್ಲಾಧಿಕಾರಿ ಸಿನ್ಹಾ ತನಿಖೆ ಮುಗಿಯುವರೆಗೂ ರಜೆ ಮೇಲೆ ತೆರಳಬೇಕು ಎಂದು ಆಗ್ರಹಿಸಿದ್ದರು.

ರೈತರು ಮಾತು ಕೇಳದಿದ್ದರೆ ಅವರ ತಲೆ ಒಡೆಯಿರಿ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಇದಾದ ಬಳಿಕ ಅಧಿಕಾರಿ ವಿರುದ್ಧ ಎಲ್ಲೆಡೆ ಆಕ್ರೋಶ ಕೇಳಿಬಂದಿತ್ತು. ಈ ಹಿನ್ನೆಲೆ ಅವರನ್ನ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿತ್ತು. ಅಲ್ಲದೆ ಸರ್ಕಾರಿ ಸಿಬ್ಬಂದಿ ಸೇರಿ ಐಎಎಸ್ ಅಧಿಕಾರಿ ವಿರುದ್ಧ ಎಫ್​ಐಆರ್ ಸಹ ದಾಖಲಾಗಿತ್ತು.

ಈ ಘಟನೆಯ ಬಳಿಕ ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರು. ಮೃತಪಟ್ಟ ರೈತನ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಅವರ ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ ಲಾಠಿ ಚಾರ್ಜ್​ ವೇಳೆ ಗಾಯಗೊಂಡ ರೈತರಿಗೆ ತಲಾ 2 ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: RSS - BJPಯಿಂದ ಕಾಶ್ಮೀರದ ಸಂಯೋಜಿತ ಸಂಸ್ಕೃತಿ ಒಡೆಯಲು ಯತ್ನ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.