ETV Bharat / bharat

ಸಿಎಎ ಕಾಯ್ದೆ: ಇನ್ನೂ ಸಿದ್ಧವಾಗದ ನಿಯಮಗಳು!

author img

By

Published : Mar 8, 2022, 10:54 AM IST

ಈ ನಿಮಯಗಳ ರೂಪಿಸಿ, ಭಾರತದ ಗೆಜೆಟ್​ನಲ್ಲಿ ಪ್ರಕಟಿಸುವ ಸಂಬಂಧ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳಿಗೆ ಕೇಂದ್ರ ಗೃಹ ಸಚಿವಾಲಯವು 2021ರ ಏಪ್ರಿಲ್​ 9ರವರೆಗೆ ಸಮಯ ಕೋರಿತ್ತು. ಬಳಿಕ ಜುಲೈವರೆಗೂ ಕಾಲಾವಕಾಶ ಪಡೆಯಲಾಗಿತ್ತು. ಆದರೂ, ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ ಎಂದು 'ಈಟಿವಿ ಭಾರತ'ಕ್ಕೆ ಮೂಲಗಳು ಖಚಿತ ಪಡಿಸಿವೆ.

CAA
CAA

ನವದೆಹಲಿ: ದೇಶದಲ್ಲಿ ಸಾಕಷ್ಟು ವಿವಾದ ಮತ್ತು ವಿರೋಧಕ್ಕೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ಇನ್ನೂ ಅನಿಶ್ಚಿತತೆಯಿಂದ ಕೂಡಿದೆ. ಈ ಕಾಯ್ದೆಯಡಿ ರೂಪಿಸಬೇಕಾದ ನಿಯಮಗಳು ಇನ್ನೂ ಕೇಂದ್ರ ಸರ್ಕಾರ ಅಂತಿಮಗೊಳಿಸಿಲ್ಲ. ಈ ನಿಯಮಗಳ ರೂಪಿಸಲು ಮತ್ತುಷ್ಟ ಕಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಿಎಎ ಕಾಯ್ದೆಯು 2019ರ ಡಿಸೆಂಬರ್​ 11ರಂದು ಸಂಸತ್ತಿನಲ್ಲಿ ಅಂಗೀಕರವಾಗಿತ್ತು. ಇದರ ಮರು ದಿನವೇ ಅಂದರೆ 12ರಂದು ರಾಷ್ಟ್ರಪತಿ ರಮಾನಾಥ ಕೋವಿಂದ್​ ಒಪ್ಪಿಗೆ ಸೂಚಿಸಿದ್ದರು. 2020ರ ಜನವರಿ 1ರಿಂದಲೇ ಈ ಕಾಯ್ದೆ ಜಾರಿ ಬಂದಿದೆ. ಆದರೆ, ಈ ಕಾಯ್ದೆ ಅನ್ವಯದ ನಿಯಮಗಳು ಇನ್ನೂ ರೂಪಿಸಿಲ್ಲ.

ಈ ನಿಮಯಗಳ ರೂಪಿಸಿ, ಭಾರತದ ಗೆಜೆಟ್​ನಲ್ಲಿ ಪ್ರಕಟಿಸುವ ಸಂಬಂಧ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿಗಳಿಗೆ ಕೇಂದ್ರ ಗೃಹ ಸಚಿವಾಲಯವು 2021ರ ಏಪ್ರಿಲ್​ 9ರವರೆಗೆ ಸಮಯ ಕೋರಿತ್ತು. ಬಳಿಕ ಜುಲೈವರೆಗೂ ಕಾಲಾವಕಾಶವನ್ನು ಪಡೆಯಲಾಗಿತ್ತು. ಆದರೂ, ಇನ್ನೂ ಕಾರ್ಯ ಪೂರ್ಣಗೊಂಡಿಲ್ಲ ಎಂದು 'ಈಟಿವಿ ಭಾರತ'ಕ್ಕೆ ಮೂಲಗಳು ಖಚಿತ ಪಡಿಸಿವೆ.

ವಿಳಂಬ ಯಾಕೆ?: ಕೋವಿಡ್​ನಿಂದಾಗಿ ಸಿಎಎ ಕಾಯ್ದೆ ಅನ್ವಯ ನಿಮಯಗಳ ರೂಪಿಸುವಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಕಾಯ್ದೆ ಅನುಷ್ಠಾನಗೊಳ್ಳುವ ಮೊದಲು ಅದಕ್ಕೆ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿರುತ್ತದೆ. ಹೀಗಾಗಿ ಈ ನಿಯಮಗಳನ್ನು ರೂಪಿಸುವ ಸಮಯ ಖಂಡಿತವಾಗಿಯೂ ವಿಸ್ತರಿಸಬಹುದು ಎಂದು ಅಧೀನ ಕಾನೂನು ಸಂಸದೀಯ ಸಮಿತಿಯ ಅಧ್ಯಕ್ಷ ಪ್ರತಾಪ್ ಸಿಂಗ್ ಬಾಜ್ವಾ ಹೇಳಿದ್ದಾರೆ. ಅಲ್ಲದೇ, ಈ ಸಂಬಂಧ ಗೃಹ ಸಚಿವಾಲಯದಿಂದ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಸಂಪರ್ಕಿಸಿದಾಗ, ನಿಯಮಗಳ ರೂಪಿಸಲು ಸಚಿವಾಲಯವು ಇತ್ತೀಚೆಗೆ ಇನ್ನೂ ಮೂರು ತಿಂಗಳ ಕಾಲಾವಕಾಶವನ್ನು ಕೋರಿದೆ. ಜತೆಗೆ ಸಚಿವಾಲಯವು ಈ ಸಂಬಂಧಪಟ್ಟ ಎಲ್ಲರೊಂದಿಗೂ ಸಮಾಲೋಚನೆ ನಡೆಸುತ್ತಿದೆ. ಕೋವಿಡ್​ ಹಾವಳಿಯಿಂದಾಗಿಯೂ ಬೇಗ ನಿಯಮಗಳ ರೂಪಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಗ್ನಿ ಅನಾಹುತಕ್ಕೆ ಎಂಟು ತಿಂಗಳ ಮಗು ಸೇರಿ ಐವರು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.