ETV Bharat / bharat

ವಾರದ ರಾಶಿ ಭವಿಷ್ಯ: ಉತ್ತಮ ಫಲ, ವಿವಾಹಿತರಿಗೆ ಸಂತಸ, ಆದಾಯ ಹೆಚ್ಚಳ ಸಾಧ್ಯತೆ..

author img

By ETV Bharat Karnataka Team

Published : Sep 17, 2023, 3:05 AM IST

Etv Bharat
Etv Bharat

Weekly Horoscope: ಈ ವಾರದ ಶುಭ ದಿನಗಳು ಹಾಗೂ ಯಾರಿಗೆಲ್ಲ ಯಶಸ್ಸು ಸಿಗಲಿದೆ.. ಈ ಕುರಿತ ವಾರದ ರಾಶಿ ಭವಿಷ್ಯ ತಿಳಿಯಿರಿ..

ಮೇಷ: ಈ ವಾರದ ಆರಂಭದಲ್ಲಿ ನೀವು ಒಂದಷ್ಟು ಎಚ್ಚರಿಕೆ ವಹಿಸಬೇಕು. ಆದರೆ ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಪ್ರೇಮವು ವೃದ್ಧಿಸಲಿದೆ. ಇದು ಅವರಿಗೆ ಸಂತಸ ನೀಡಲಿದೆ. ಆದರೆ ಜೀವನ ಸಂಗಾತಿಯ ಆರೋಗ್ಯವು ಚಿಂತೆಗೆ ಕಾರಣವೆನಿಸಬಹುದು. ಪ್ರೇಮ ಜೀವನವು ಚೆನ್ನಾಗಿರಲಿದೆ. ಇದು ನಿಮಗೆ ಸಂತಸ ನೀಡಲಿದೆ. ಕಠಿಣ ಶ್ರಮದ ಮೂಲಕ ಕೆಲಸದಲ್ಲಿ ಭಡ್ತಿ ಪಡೆಯುವುದು ಸುಲಭವೆನಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಸಾಧಾರಣ ಫಲ ದೊರೆಯಲಿದೆ. ಒಂದು ಕಡೆ ನೀವು ಲಾಭವನ್ನು ಗಳಿಸಲಿದ್ದೀರಿ. ಇನ್ನೊಂದೆಡೆ ಕೆಲವು ಕೆಲಸಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಾನೂನಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಕುರಿತು ನೀವು ಗಮನ ಹರಿಸಬೇಕು. ನಿಮ್ಮ ಜಾಣ್ಮೆಯನ್ನು ಬಳಸಿ ಇನ್ನಷ್ಟು ಚೆನ್ನಾಗಿ ಕಲಿಯಲು ನಿಮಗೆ ಸಾಧ್ಯವಾಗಲಿದೆ. ಯಾವುದೇ ಗಾಯ ಉಂಟಾಗದಂತೆ ನೋಡಿಕೊಳ್ಳಿ. ಅಪಘಾತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಕರುಳಿನ ಆರೋಗ್ಯದ ಕುರಿತು ಕಾಳಜಿ ವಹಿಸಿ.

ವೃಷಭ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ. ಆದರೆ ನಿಮ್ಮ ಮಗುವಿನ ಆರೋಗ್ಯದ ಕುರಿತು ಒಂದಷ್ಟು ಚಿಂತೆ ನಿಮ್ಮನ್ನು ಕಾಡಬಹುದು. ಪ್ರೇಮದ ವಿಚಾರದಲ್ಲಿ ಸಮಯವು ಸಮಸ್ಯಾತ್ಮಕವಾಗಿದೆ. ನಿಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಯಾವುದೇ ರೀತಿಯ ವಾಗ್ವಾದ ಉಂಟಾದಂತೆ ಎಚ್ಚರಿಕೆ ವಹಿಸಿ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯ ಪ್ರಗತಿಯ ಕಾರಣ ಸಾಕಷ್ಟು ಸಂತಸ ಅನುಭವಿಸಲಿದ್ದಾರೆ. ನಿಮ್ಮ ಆದಾಯದಲ್ಲಿಯೂ ಈಗ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು ಸಂತಸ ಅನುಭವಿಸಲಿದ್ದೀರಿ. ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ಇವರು ಕೆಲಸದ ಒತ್ತಡದಿಂದ ಹೊರಬರಲಿದ್ದಾರೆ. ಆದರೆ ನಿಮ್ಮ ಬಾಸ್‌ ಜೊತೆಗೆ ಉತ್ತಮ ಬಾಂಧವ್ಯವನ್ನು ಕಾಪಾಡಿ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ಗಮನಭಂಗ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

ಮಿಥುನ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜೋಡಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಜೀವನ ಸಂಗಾತಿಯ ಜೊತೆಗಿನ ಆಪ್ತತೆಯಲ್ಲಿ ಸುಧಾರಣೆ ಉಂಟಾಗಲಿದೆ. ಈ ವಾರದಲ್ಲಿ ಪ್ರೇಮ ಜೀವನವು ಸಾಮಾನ್ಯವಾಗಿರಲಿದೆ. ಆದರೂ ನಿಮ್ಮ ಕೋಪದ ಕುರಿತು ಕಾಳಜಿ ವಹಿಸಿ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕಾಗಿ ಸಾಕಷ್ಟು ಸಮಯ ಕಳೆಯಲಿದ್ದೀರಿ. ಯಾವುದಾದರೂ ನಿರ್ದಿಷ್ಟ ವಿಚಾರದ ಕುರಿತು ಕುಟುಂಬದ ಸದಸ್ಯರು ಚರ್ಚಿಸಬಹುದು. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಯಾವುದೇ ಆಸ್ತಿಯನ್ನು ಮಾರಲು ನೀವು ಇಚ್ಛಿಸುವುದಾದರೆ ಇದರ ಮಾರಾಟದಿಂದ ನಿಮಗೆ ಲಾಭ ಉಂಟಾಗಲಿದೆ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳಿಂದ ಸಾಕಷ್ಟು ನೆರವು ಪಡೆಯಲಿದ್ದಾರೆ. ಅವರು ನಿಮಗೆ ಸಹಕರಿಸಲಿದ್ದಾರೆ. ಇದರಿಂದಾಗಿ ಕೆಲಸದಲ್ಲಿ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿರಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಒತ್ತಡದಿಂದ ಹೊರ ಬರಲಿದೆ. ಅತ್ತೆ ಮಾವಂದಿರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಗೆಳೆಯರೊಬ್ಬರ ಸಹಾಯದಿಂದ ನಿಮ್ಮ ಪ್ರೇಮಿಗೆ ನೀವು ಪ್ರೇಮವನ್ನು ನಿವೇದಿಸಿಕೊಳ್ಳಬಹುದು ಹಾಗೂ ಅವರಿಗೆ ಅಚ್ಚರಿಯ ಅಥವಾ ಅದ್ಭುತ ಕೊಡುಗೆಯೊಂದನ್ನು ನೀಡಬಹುದು. ನಿಮ್ಮ ಮನಸ್ಸಿನಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಅಲ್ಲದೆ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಲು ನೀವು ಯತ್ನಿಸಲಿದ್ದೀರಿ. ಕುಟುಂಬದ ವಾತಾವರಣದಲ್ಲಿ ಶಾಂತಿ ನೆಲೆಸಲಿದೆ. ಕುಟುಂಬದ ಹಿರಿಯರ ಆಶೀರ್ವಾದದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹೀಗಾಗಿ ಮನೆಯಿಂದ ಹೊರ ಹೋಗುವ ಮೊದಲು ಹಿರಿಯರ ಆಶೀರ್ವಾದ ಪಡೆಯಿರಿ. ವ್ಯವಹಾರದ ವಿಚಾರದಲ್ಲಿ ಸಮಯವು ಏರುಪೇರಿನಿಂದ ಕೂಡಿರಲಿದೆ. ಆದರೆ ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ಮುಖ್ಯವಾಗಿ ವಾರದ ಆರಂಭದಲ್ಲಿ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಅನೇಕ ಬಾರಿ ಸಂಬಂಧದ ಕುರಿತು ನಿಮ್ಮ ನಡುವೆ ಮಾತುಕತೆ ನಡೆಯಲಿದೆ. ಅಲ್ಲದೆ ನೀವು ಪ್ರೇಮ ವಿವಾಹಕ್ಕಾಗಿ ಯತ್ನಿಸಲಿದ್ದೀರಿ. ಪರಸ್ಪರ ಕಿರಿಕಿರಿ ಉಂಟು ಮಾಡುವ ವರ್ತನೆಯು ಇದಕ್ಕೆಲ್ಲ ಕಾರಣವೆನಿಸಬಹುದು. ಸದ್ಯಕ್ಕೆ ನಿಮ್ಮ ಪ್ರಯತ್ನಗಳಿಗೆ ರೆಕ್ಕೆಗಳು ಗರಿಗೆದರಬಹುದು. ಅಲ್ಲದೆ ಏನಾದರೂ ಹೊಸತನ್ನು ಯತ್ನಿಸಲಿದ್ದೀರಿ. ಸಾಹಸ ಶಿಬಿರಕ್ಕೆ ಹೋಗುವ ಇಚ್ಛೆ ಉಂಟಾಗಬಹುದು. ಸದ್ಯಕ್ಕೆ ಒಂದಷ್ಟು ಖರ್ಚು ಉಂಟಾಗಬಹುದು. ಆದರೆ ಆದಾಯವೂ ಚೆನ್ನಾಗಿರಲಿದೆ. ಹೀಗಾಗಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಸದ್ಯಕ್ಕೆ ನಿಮ್ಮ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಆಹಾರ ಕ್ರಮಕ್ಕೆ ಸಂಪೂರ್ಣ ಗಮನ ನೀಡಿರಿ. ಈ ವಿಚಾರದಲ್ಲಿ ಯಾವುದೇ ಕುಂದುಕೊರತೆ ಬರದಂತೆ ನೋಡಿಕೊಳ್ಳಿ.

ಕನ್ಯಾ: ಈ ವಾರವು ನಿಮಗೆ ಪ್ರಯೋಜನಕಾರಿ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಒತ್ತಡವನ್ನು ತಗ್ಗಿಸಲು ಯತ್ನಿಸಲಿದ್ದಾರೆ. ತದನಂತರ ಎಲ್ಲವೂ ಸುಗಮವಾಗಿ ನಡೆಯಲಿದೆ. ಜೀವನ ಸಂಗಾತಿಯು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮಿಯ ಪ್ರತಿ ಚಟುವಟಿಕೆಯಲ್ಲಿ ನೀವು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಆಸ್ತಿಯಲ್ಲಿ ಮಾಡಿದ ಹೂಡಿಕೆಯಿಂದ ನೀವು ಲಾಭ ಗಳಿಸಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಇದೇನೂ ಚಿಂತೆಯ ವಿಷಯವಲ್ಲ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ನಿಮ್ಮ ಹಿರಿಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಉತ್ತಮ ಸಾಧನೆ ಮಾಡಲು ಇದು ನಿಮಗೆ ಸಹಕರಿಸಲಿದೆ. ನೀವು ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ದೊಡ್ಡ ಪ್ರಮಾಣದ ಆರ್ಡರ್‌ ನಿಮ್ಮ ಕೈಗೆ ಬರಲಿದೆ. ಇದು ಸಾಕಷ್ಟು ನಿರಾಳತೆಗೆ ಕಾರಣವೆನಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಸಂಪೂರ್ಣವಾಗಿ ಅನುಕೂಲಕರ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು.

ತುಲಾ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ವಿದೇಶಕ್ಕೆ ಹೋಗುವ ಅವಕಾಶ ಲಭಿಸಬಹುದು. ಪ್ರೇಮ ಜೀವನಕ್ಕೆ ಸಮಯವು ಅನುಕೂಲವಾಗಿದೆ. ನಿಮ್ಮ ಪ್ರೇಮಿಯು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ನೀವು ಅವರಿಗೆ ಸಹಾಯ ಮಾಡಲಿದ್ದೀರಿ. ಈ ವಾರ ನಿಮಗೆ ಕೆಲವೊಂದು ವೆಚ್ಚಗಳು ಉಂಟಾಗಬಹುದು. ನೀವು ಹೊಸ ವಾಹನ ಅಥವಾ ಭೂಮಿಯನ್ನು ಖರೀದಿಸಲು ಯೋಜನೆ ಹೂಡಬಹುದು. ಅದರಲ್ಲಿ ಯಶಸ್ಸು ದೊರೆಯಬಹುದು. ಮನೆಯ ವಾತಾವರಣವು ಚೆನ್ನಾಗಿರಲಿದೆ. ಮನೆಯಲ್ಲಿ ಸಂತಸ ಇರಲಿದೆ. ಹಿರಿಯರ ಆಶೀರ್ವಾದವನ್ನು ಪಡೆಯಲಿದ್ದೀರಿ. ಸರ್ಕಾರಿ ವಲಯದಿಂದ ಲಾಭ ದೊರೆಯಲಿದೆ. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಉತ್ತಮ ಸಾಧನೆ ಮಾಡಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಸವಾಲಿನಿಂದ ಕೂಡಿರಲಿದೆ. ಸಾಕಷ್ಟು ಗಮನ ನೀಡಿ ಹಾಗೂ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿ ನೀವೀಗ ಕಠಿಣ ಶ್ರಮ ಪಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಈ ಕುರಿತು ಗಮನ ಹರಿಸಿ.

ವೃಶ್ಚಿಕ: ಈ ವಾರವು ನಿಮಗೆ ಅನುಕೂಲಕರ. ವಿವಾಹಿತ ವ್ಯಕ್ತಿಗಳ ಪಾಲಿಗೆ ಸಮಯವು ಚೆನ್ನಾಗಿದ್ದು ತಮ್ಮ ಬದುಕನ್ನು ಅವರು ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು, ಏರುಪೇರಿನ ನಡುವೆಯೂ ಅನ್ಯೋನ್ಯತೆಯ ಭಾವನೆಯನ್ನು ಆಸ್ವಾದಿಸಲಿದ್ದು ಇದು ನಿಮ್ಮ ಸಂತಸವನ್ನು ಇಮ್ಮಡಿಗೊಳಿಸಲಿದೆ. ಹಠಾತ್‌ ಆಗಿ ಹಣವು ಎಲ್ಲಿಂದ ಆದರೂ ಬರಲಿದೆ. ಕೆಲಸದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ನಿಮಗೆ ಭಡ್ತಿ ದೊರೆಯಲಿದೆ. ನಿಮ್ಮ ವರ್ಚಸ್ಸು ಹೆಚ್ಚುವಂತೆ ಮಾಡಲಿದ್ದೀರಿ ಹಾಗೂ ಕಠಿಣ ಶ್ರಮದ ಮೂಲಕ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯವಹಾರದಲ್ಲಿಯೂ ಯಶಸ್ಸು ಗಳಿಸಲು ಎಲ್ಲಾ ಸಾಧ್ಯತೆಗಳಿವೆ. ಮುಂದೆ ಸಾಗಲು ನಿಮಗೆ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ನಿಮಗೆ ವಿದ್ಯಾರ್ಥಿವೇತನ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಧನು: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ಜೀವನ ಸಂಗಾತಿಯ ನಡುವಿನ ಅಂತರವು ಕಡಿಮೆಯಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನೀವು ಮತ್ತು ನಿಮ್ಮ ಪ್ರೇಮಿಯು ಪರಸ್ಪರ ಅರಿತುಕೊಳ್ಳಲು ಯತ್ನಿಸಿಲಿದ್ದೀರಿ. ಹೀಗಾಗಿ ಅವರ ಸಮಸ್ಯೆಗಳು ದೂರಗೊಳ್ಳಲಿವೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಸಂತಸದ ಭಾವನೆಯು ನಿಮ್ಮನ್ನು ಪುಳಕಗೊಳಿಸಲಿದೆ. ಈ ಸಂತಸದಲ್ಲಿ ಕುಟುಂಬದ ಸದಸ್ಯರು ಸಹ ಒಳಗೊಳ್ಳಲಿದ್ದಾರೆ. ದೊಡ್ಡದಾದ ಔತಣ ಕೂಟವನ್ನು ಆಯೋಜಿಸುವ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಒಳ್ಳೆಯ ಸಂಪರ್ಕವನ್ನು ನೀವು ಪಡೆಯಲಿದ್ದೀರಿ ಅಥವಾ ಒಳ್ಳೆಯ ಕೆಲಸವನ್ನು ನೀವು ಪಡೆಯಲಿದ್ದು ಈ ಕೆಲಸಕ್ಕೆ ಸೇರಲು ನೀವು ಹಿಂದೆ ಮುಂದೆ ನೋಡುವುದಿಲ್ಲ. ಹೂಡಿಕೆಯಿಂದ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲಿದ್ದಾರೆ. ಉನ್ನತ ಶಿಕ್ಷಣದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಆದರೆ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು.

ಮಕರ: ಈ ವಾರದಲ್ಲಿ, ಮುಂದೆ ಸಾಗುವುದಕ್ಕಾಗಿ ನೀವು ಅನೇಕ ಅವಕಾಶಗಳನ್ನು ಪಡೆಯಲಿದ್ದೀರಿ. ವೈವಾಹಿಕ ಬದುಕಿನಲ್ಲಿ ನಿಮ್ಮ ಜೀವನ ಸಂಗಾತಿಯ ಸಹಕಾರ ಮತ್ತು ಪ್ರೇಮದ ಕಾರಣ ಕೌಟುಂಬಿಕ ಬದುಕು ಮೆರುಗನ್ನು ಪಡೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಮನಸ್ಸಿನ ಭಾವನೆಗಳನ್ನು ಪ್ರೇಮಿಯಿಂದ ಅಡಗಿಸಿ ಇಟ್ಟುಕೊಳ್ಳಬೇಡಿ. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆರ್ಥಿಕ ಸಮಸ್ಯೆಗಳಿಂದ ಹೊರಬರಲು ನಿಮಗೆ ಅವಕಾಶ ದೊರೆಯಲಿದೆ. ಮಾನಸಿಕ ಒತ್ತಡವು ಕಡಿಮೆಯಾಗಲಿದೆ. ಮನೆಯ ವಾತಾವರಣವು ಚೆನ್ನಾಗಿರಲಿದೆ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಲಿವೆ. ಧಾರ್ಮಿಕ ಕೆಲಸದಲ್ಲಿ ನಂಬಿಕೆ ಉಂಟಾಗಲಿದೆ. ಕೆಲಸದಲ್ಲಿ ವರ್ಗಾವಣೆಯುಂಟಾಗಬಹುದು. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಒತ್ತಡವು ಸಮಸ್ಯೆಗಳನ್ನು ಉಂಟು ಮಾಡಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕುಂಭ: ಈ ವಾರದ ಆರಂಭದಲ್ಲಿ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಅಲ್ಲದೆ ನಿಮ್ಮ ಕೆಲಸವು ಬಾಕಿಯುಳಿಯಬಹುದು. ಆದರೆ ನಿರಾಶರಾಗಬೇಡಿ. ವಾರದ ನಡುವಿನ ದಿನಗಳಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಜೀವನ ಸಂಗಾತಿಯ ಜೊತೆಗೆ ಪ್ರೇಮದ ಮಾತುಗಳನ್ನಾಡಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ಅವರ ಮನಸ್ಸಿನಲ್ಲಿರುವ ಎಲ್ಲಾ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಅದು ಈಗ ನಿವಾರಣೆಗೊಳ್ಳಲಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ನೀವು ಸಾಕಷ್ಟು ಹೂಡಿಕೆ ಮಾಡಲಿದ್ದೀರಿ. ಇದೇ ವೇಳೆ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ನೀವು ಬಂಡವಾಳ ಹೂಡಿಕೆಯನ್ನು ಮಾಡಬೇಕು. ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನೀವು ಮಾಡಬೇಡಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ಅನ್ಯೋನ್ಯತೆಯಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಣ್ಣ ತಪ್ಪು ಸಹ ನಿಮ್ಮ ಪ್ರೇಮಿಗೆ ದೊಡ್ಡ ಪ್ರಮಾದವಾಗಿ ಕಾಣಿಸಿಕೊಳ್ಳಬಹುದು. ಅವರ ಮನವೊಲಿಸುವುದು ನಿಮ್ಮ ಪಾಲಿಗೆ ಕಷ್ಟಕರವೆನಿಸಬಹುದು. ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಉತ್ತಮ. ಆದರೆ ವಾರದ ಕೊನೆಗೆ ನಿಮಗೆ ಖರ್ಚುವೆಚ್ಚ ಉಂಟಾಗಬಹುದು. ಇದನ್ನು ನಿಯಂತ್ರಿಸುವುದು ಅಗತ್ಯ. ಈ ಕಾರಣದಿಂದಾಗಿ ಹಣಕಾಸಿನ ಉತ್ತಮ ನಿರ್ವಹಣೆಯ ಅಗತ್ಯವಿದೆ. ನೀವು ವ್ಯಾಪಾರೋದ್ಯಮದಲ್ಲಿ ತೊಡಗಿದ್ದರೆ, ಇದು ನಿಮಗೆ ಸಕಾಲ. ಉದ್ಯೋಗದಲ್ಲಿರುವವರು ಈ ಸಮಯದ ಸಂಪೂರ್ಣ ಲಾಭ ಪಡೆಯಬೇಕು. ಯಶಸ್ಸಿನ ಏಣಿಯನ್ನು ನೀವು ಏರಲಿದ್ದೀರಿ. ಈ ಉದ್ದೇಶಕ್ಕಾಗಿ ನೀವು ಕಠಿಣ ಶ್ರಮ ಪಡಬೇಕು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಅವರು ಯಾವುದೇ ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದರೆ ಅವರಿಗೆ ಯಶಸ್ಸು ಲಭಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.