ETV Bharat / bharat

ಅಮೆರಿಕ ನೇತೃತ್ವದಲ್ಲಿ ಕ್ವಾಡ್ ಶೃಂಗಸಭೆ: ಚೀನಾ ತೀವ್ರ ಖಂಡನೆ

author img

By

Published : Sep 15, 2021, 1:46 PM IST

ವಾಷಿಂಗ್ಟನ್​​ ಡಿಸಿಯಲ್ಲಿ ನಡೆಯಲಿರುವ 24 ಸೆಪ್ಟೆಂಬರ್ ರಂದು ಯುಎಸ್ ನೇತೃತ್ವದ ಕ್ವಾಡ್ ಶೃಂಗಸಭೆಯನ್ನು ಚೀನಾ ಮಂಗಳವಾರ ಬಲವಾಗಿ ಖಂಡಿಸಿದ್ದು, ವಿರೋಧ ವ್ಯಕ್ತಪಡಿಸಿದೆ.

ನವದೆಹಲಿ: ಕ್ವಾಡ್ ರಾಷ್ಟ್ರಗಳ ನಾಯಕರ ಮೊದಲ ಶೃಂಗಸಭೆಯನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಆಯೋಜಿಸಲಿದ್ದಾರೆ ಎಂದು ಶ್ವೇತಭವನ ಘೋಷಿಸಿದ ಬೆನ್ನಲ್ಲೇ ಚೀನಾದ ಪ್ರತಿಕ್ರಿಯೆ ಬಂದಿದ್ದು, ಈ ಸಭೆಯನ್ನು ಚೀನಾ ತೀವ್ರವಾಗಿ ಖಂಡಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್, ಇತರ ದೇಶಗಳನ್ನು ಗುರಿಯಾಗಿಸಿಕೊಂಡು ಮುಚ್ಚಿದ ಮತ್ತು ವಿಶೇಷವಾದ "ಗುಂಪುಗಳನ್ನು" ರಚಿಸುವುದು ನಿಯಮದ ವಿರುದ್ಧವಾಗಿದೆ ಎಂದಿದ್ದಾರೆ.

  • Any regional cooperation mechanism should follow the trend of peace&development and help promote trust&cooperation among countries. Forming closed&exclusive cliques targeting other countries runs counter to the trend of the times and the expectation of regional countries. pic.twitter.com/F8oMZq0bWB

    — Lijian Zhao 赵立坚 (@zlj517) September 14, 2021 " class="align-text-top noRightClick twitterSection" data=" ">

ವೈಯಕ್ತಿಕ ಕ್ವಾಡ್ ಶೃಂಗಸಭೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, "ಚೀನಾದ ಅಭಿವೃದ್ಧಿ ವಿಶ್ವ ಶಾಂತಿಗೆ ಒಂದು ಶಕ್ತಿ ಮತ್ತು ಪ್ರಾದೇಶಿಕ ಸಮೃದ್ಧಿ ಮತ್ತು ಅಭಿವೃದ್ಧಿಗೆ ವರದಾನವಾಗಿದೆ" ಎಂದು ಹೇಳಿದರು.

ದೇಶಗಳು ಸಂಕುಚಿತ ಮನಸ್ಸಿನ ಭೌಗೋಳಿಕ ರಾಜಕೀಯ ಗ್ರಹಿಕೆಯನ್ನು ತಿರಸ್ಕರಿಸಬೇಕು, ಚೀನಾದ ಅಭಿವೃದ್ಧಿಯನ್ನು ಸರಿಯಾಗಿ ನೋಡಬೇಕು ಮತ್ತು ಈ ಪ್ರದೇಶದಲ್ಲಿ ಜನರ ಆಕಾಂಕ್ಷೆಗಳನ್ನು ಗೌರವಿಸಬೇಕು ಮತ್ತು ಪ್ರಾದೇಶಿಕ ದೇಶಗಳ ಒಗ್ಗಟ್ಟು ಮತ್ತು ಸಹಕಾರಕ್ಕೆ ಅನುಕೂಲಕರವಾದ ಹೆಚ್ಚಿನದನ್ನು ಮಾಡಬೇಕು" ಎಂದು ಅವರು ಹೇಳಿದರು. ಈ ಹಿಂದೆ ಕ್ವಾಡ್ ಸಂವಾದವನ್ನು ಶೀತಲ ಸಮರದ ಸಿದ್ಧಾಂತದ ಆಧಾರದಲ್ಲಿ ಅಂತಾರಾಷ್ಟ್ರೀಯ ಕ್ರಮಕ್ಕೆ ಹಾನಿಕಾರಕ ಎಂದು ಚೀನಾ ವಿವರಿಸಿದೆ.

21ನೇ ಶತಮಾನದ ಸವಾಲುಗಳನ್ನು ಎದುರಿಸಲು ಹೊಸ ಬಹುಪಕ್ಷೀಯ ಸಂರಚನೆಗಳನ್ನು ಒಳಗೊಂಡಂತೆ ಇಂಡೋ - ಪೆಸಿಫಿಕ್‌ನಲ್ಲಿ ತೊಡಗಿಸಿಕೊಳ್ಳುವ ಬೈಡನ್​​ - ಹ್ಯಾರಿಸ್ ಆಡಳಿತ ಕ್ವಾಡ್‌ನ ನಾಯಕರನ್ನು ಹೋಸ್ಟ್ ಮಾಡುವ ಕುರಿತು ವೈಟ್ ಹೌಸ್ ಸೋಮವಾರ ಹೇಳಿದೆ.

24 ಸೆಪ್ಟೆಂಬರ್ ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಜಪಾನ್‌ನ ಪ್ರಧಾನ ಮಂತ್ರಿ ಯೋಶಿಹೈಡೆ ಸುಗಾ ಮತ್ತು ಯುಎಸ್ಎ ಅಧ್ಯಕ್ಷ ಜೋ ಬೈಡನ್​, ವಾಷಿಂಗ್ಟನ್ ಡಿಸಿಯಲ್ಲಿ ನಡೆಯುತ್ತಿರುವ ಕ್ವಾಡ್​ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.

ಈ ಮೊದಲು, ಮಾರ್ಚ್‌ನಲ್ಲಿ ಕ್ವಾಡ್ ನಾಯಕರ ಆನ್‌ಲೈನ್ ಸಭೆಗೆ ಚೀನಾ ತೀವ್ರವಾಗಿ ಪ್ರತಿಕ್ರಿಯಿಸಿತ್ತು, ತನ್ನ ಸೈದ್ಧಾಂತಿಕ ಪಕ್ಷಪಾತ ಮತ್ತು ಶೀತಲ ಸಮರದ ಮನಸ್ಥಿತಿಯನ್ನು ತ್ಯಜಿಸದಿದ್ದರೆ ಅದು ಎಲ್ಲಿಯೂ ಕೊನೆಗೊಳ್ಳುವುದಿಲ್ಲ ಎಂದು ಹೇಳಿತ್ತು. ಇದೀಗ ಮತ್ತೆ ಕ್ವಾಡ್​ ಸಭೆಗೆ ವಿರೋಧ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.