ETV Bharat / bharat

ಚೆನ್ನೈನಲ್ಲಿ ಹಣ ಸಾಗಿಸುತ್ತಿದ್ದ ಕಂಟೈನರ್​ ಸ್ಥಗಿತ.. ಪೊಲೀಸರಿಂದ ರಕ್ಷಣೆ

author img

By

Published : May 17, 2023, 8:50 PM IST

ಚೆನ್ನೈ ರಿಸರ್ವ್ ಬ್ಯಾಂಕ್ ಶಾಖೆಯಿಂದ ವಿಲ್ಲುಪುರಂ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಸಾಗಿಸುತ್ತಿದ್ದ ವಾಹನವೊಂದು ತಾಂಬರಂ ಬಳಿ ಕೆಟ್ಟು ನಿಂತು ಅರ್ಧಕ್ಕೆ ನಿಂತಿದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸುತ್ತಿದ್ದಾರೆ.

ಚೆನ್ನೈನಲ್ಲಿ ಹಣ ಸಾಗಿಸುತ್ತಿದ್ದ ಕಂಟೈನರ್​ ಸ್ಥಗಿತ.
ಚೆನ್ನೈನಲ್ಲಿ ಹಣ ಸಾಗಿಸುತ್ತಿದ್ದ ಕಂಟೈನರ್​ ಸ್ಥಗಿತ.

ಚೆನ್ನೈನಲ್ಲಿ ಹಣ ಸಾಗಿಸುತ್ತಿದ್ದ ಕಂಟೈನರ್​ ಸ್ಥಗಿತ.. ಪೊಲೀಸರಿಂದ ರಕ್ಷಣೆ

ಚೆನ್ನೈ (ತಮಿಳುನಾಡು): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆನ್ನೈ ಶಾಖೆಯಿಂದ ವಿಲ್ಲುಪುರಂ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ 535 ಕೋಟಿ ರೂ ಗಳನ್ನು ಸಾಗಿಸುತ್ತಿದ್ದ 2 ಕಂಟೈನರ್ ಟ್ರಕ್‌ಗಳಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದೆ.

ಇದಾದ ಬಳಿಕ ಕಾರ್ಮಿಕರು ಪೊಲೀಸ್ ರಕ್ಷಣೆಯಲ್ಲಿ ವಾಹನ ಸರಿಪಡಿಸಲು ಯತ್ನಿಸಿದರು. ಆದರೆ, ವಾಹನ ದುರಸ್ತಿಯಾಗದ ಕಾರಣ ಚೆನ್ನೈನಲ್ಲಿರುವ ಎರಡೂ ವಾಹನಗಳನ್ನು ಆರ್‌ಬಿಐಗೆ ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ, ಹಾನಿಗೊಳಗಾದ ವಾಹನವನ್ನು ಎಳೆಯಲು ರಿಕವರಿ ವಾಹನವನ್ನು ಸ್ಥಳಕ್ಕೆ ಕರೆದಿದ್ದಾರೆ.

ಕೆಟ್ಟು ಹೋದ ವಾಹನದಲ್ಲಿ ಸುಮಾರು 535 ಕೋಟಿ ನಗದು ಇತ್ತು. ಹೀಗಾಗಿ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಇದಾದ ಬಳಿಕ ತಾಂಬರಂ ಸಹಾಯಕ ಆಯುಕ್ತ ಶ್ರೀನಿವಾಸನ್ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇಂಜಿನ್ ವೈಫಲ್ಯದಿಂದ ಮತ್ತೊಂದು ವಾಹನವನ್ನೂ ನಿಲ್ಲಿಸಲಾಗಿದೆ: ದಿಢೀರ್ ಕೆಟ್ಟು ನಿಂತ ವಾಹನಕ್ಕೆ ವಿಪರೀತ ಪೊಲೀಸ್ ಭದ್ರತೆ ಹಾಕಿರುವುದರಿಂದ ಆ ಪ್ರದೇಶ ಪೊಲೀಸ್​ ಸಿಬ್ಬಂದಿಯಿಂದ ಗಿಜಿಗುಡುತ್ತಿದೆ. ಈ ಬಗ್ಗೆ ಚಾಲಕ ಪ್ರತಿಕ್ರಿಯಿಸಿದ್ದು, ಹಣ ಸಾಗಿಸುವುದು ನಿತ್ಯದ ಪರಿಪಾಠ. ಆದರೆ, ಒಂದು ವಾಹನದ ಇಂಜಿನ್ ವೈಫಲ್ಯದಿಂದ ಮತ್ತೊಂದು ವಾಹನವನ್ನು ಸಹ ನಿಲ್ಲಿಸಲಾಗಿದೆ ಎಂದರು. ಎರಡು ವಾಹನಗಳನ್ನು ಚೆನ್ನೈನ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಬೌಂಡ್ ಕರೆನ್ಸಿಯೊಂದಿಗೆ ರಸ್ತೆ ಮಧ್ಯದಲ್ಲಿ ವಾಹನಗಳು ನಿಂತಿದ್ದರಿಂದ ಸ್ಥಳದಲ್ಲಿ ಗದ್ದಲ ಉಂಟಾಗಿದೆ.

ದರೋಡೆಕೋರರನ್ನು ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು: ಇನ್ನೊಂದೆಡೆ ಅಂತಾರಾಷ್ಟ್ರೀಯ ದರೋಡೆಕೋರರ ಗ್ಯಾಂಗ್​​ವೊಂದು ಮೊಬೈಲ್​ ತುಂಬಿಕೊಂಡು ಹೊರಟಿದ್ದ ಕಂಟೈನರ್​​ ತಡೆದು, ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ(ಆಗಸ್ಟ್​ 27-2023) ರಂದು ನಡೆದಿತ್ತು. ಈ ಕೃತ್ಯ ನಡೆದ ಕೇವಲ 24 ಗಂಟೆಯೊಳಗೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಮೊಬೈಲ್​ ಫೋನ್​ಗಳಿರುವ ಬಾಕ್ಸ್​​​​ ತುಂಬಿಕೊಂಡು ತಮಿಳುನಾಡಿನಿಂದ ಹರಿಯಾಣದ ಗುರುಗ್ರಾಮಕ್ಕೆ ಕಂಟೈನರ್​​ ಹೊರಟಿತ್ತು. ಈ ವೇಳೆ ಮಧ್ಯಪ್ರದೇಶದ ಸಾಗರ್​ ಎಂಬಲ್ಲಿ ನಾಲ್ವರು ದರೋಡೆಕೋರರು ಕಳ್ಳತನ ಮಾಡಿದ್ದರು. 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್​ ಬಾಕ್ಸ್​​ಗಳನ್ನು ಇನ್ನೊಂದು ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು. ಇದರ ಬಗ್ಗೆ ಮಾಹಿತಿ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕಳ್ಳರಿಗೆ ಬಲೆ ಬೀಸಿದ್ದರು. ಗಡಿ ಜಿಲ್ಲೆ ಹಾಗೂ ಇತರ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ, ಮಧ್ಯಪ್ರದೇಶದ ಇಂದೋರ್​​​ನ ಶಿಪ್ರಾ ಎಂಬಲ್ಲಿ ವಾಹನ ತಪಾಸಣೆ ವೇಳೆ ಲಾರಿ ಸಿಕ್ಕಿಬಿದ್ದಿತ್ತು. ಇದರ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಘಟನೆಯ ವಿವರ: ಆಗಸ್ಟ್​​​​ 25 ರಂದು ಮಧ್ಯಾಹ್ನ 1 ಗಂಟೆಗೆ ಪ್ರತಿಷ್ಠಿತ ಕಂಪನಿಯ ಮೊಬೈಲ್​ ತುಂಬಿಕೊಂಡು ತಮಿಳುನಾಡಿನಿಂದ ಗುರುಗ್ರಾಮಗೆ ಕಂಟೈನರ್​​​ ತೆರಳುತ್ತಿತ್ತು. ಈ ವೇಳೆ ಮಹಾರಾಜಪುರದಿಂದ ನಗರ ತಿರಹಾ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದರೋಡೆಕೋರರು ವಾಹನ ತಡೆದು ಮೊಬೈಲ್​​ ಕದ್ದಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಸಿನಿಮೀಯ ರೀತಿಯಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ ಇಂದೋರ್​ ಬಳಿಯ ಶಿಪ್ರಾ ಬಳಿ ಕದ್ದ ಸರಕುಗಳ ವಾಹನ ಪತ್ತೆಯಾಗಿತ್ತು. ನಂತರ ಆರೋಪಿಗಳು ಲಾರಿ ಬಿಟ್ಟು ಪರಾರಿಯಾಗಿದ್ದರು. ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಮೊಬೈಲ್​​ ತುಂಬಿದ್ದ ಕಂಟೈನರ್​​​ ಅನ್ನು ಪಶ್ಚಿಮ ಬಂಗಾಳದ ಚಾಲಕ ಮಿಥುನ್​ ಎಂಬಾತ ತೆಗೆದುಕೊಂಡು ಹೋಗುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಗೌರ್ಜಾಮರ್​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಭೇದಿಸಿದ್ದರು.

ಇದನ್ನೂ ಓದಿ: 12 ಕೋಟಿ ರೂ ಮೌಲ್ಯದ ಮೊಬೈಲ್​ ಕದ್ದ ದರೋಡೆಕೋರರು.. ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.