ETV Bharat / bharat

ಡಿ. 31ಕ್ಕೆ ಸಿಬಿಎಸ್‌ಇ ಪರೀಕ್ಷಾ ವೇಳಾ ಪಟ್ಟಿ ಪ್ರಕಟ : ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್

author img

By

Published : Dec 27, 2020, 7:25 AM IST

ಪರಿಸ್ಥಿತಿಯನ್ನು ನೋಡಿಕೊಂಡು ಹಾಗೂ ತಜ್ಞರ ಜೊತೆ ಚರ್ಚೆ ನಡೆಸಿ, ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಳೆದ ಮಂಗಳವಾರ ನಿಶಾಂಕ್‌ ತಿಳಿಸಿದ್ದರು..

ರಮೇಶ್ ಪೋಖ್ರಿಯಾಲ್ ನಿಶಾಂಕ್
ರಮೇಶ್ ಪೋಖ್ರಿಯಾಲ್ ನಿಶಾಂಕ್

ನವದೆಹಲಿ : ಸಿಬಿಎಸ್‌ಇ ಬೋರ್ಡ್​ ಪರೀಕ್ಷೆಯ ವೇಳಾ ಪಟ್ಟಿಯನ್ನು ಡಿಸೆಂಬರ್ 31ರಂದು ಪ್ರಕಟಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 2021ರ ಬೋರ್ಡ್ ಪರೀಕ್ಷೆಗಳು ಯಾವ ದಿನಾಂಕದಿಂದ ಪ್ರಾರಂಭವಾಗಲಿವೆ ಎಂದು ಇದೇ ಡಿ. 31ರಂದು ಸ್ಪಷ್ಟಪಡಿಸಲಾಗುವುದು. ಬೋರ್ಡ್ ಪರೀಕ್ಷೆಯ ದಿನಾಂಕಗಳ ಪ್ರಕಟಣೆಗಾಗಿ ವಿದ್ಯಾರ್ಥಿಗಳು ದೀರ್ಘ ಕಾಲದಿಂದ ಕಾಯುತ್ತಿದ್ದಾರೆ.

ಹೀಗಾಗಿ ಅವರ ನಿರೀಕ್ಷೆ ಶೀಘ್ರದಲ್ಲಿಯೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ಕೋವಿಡ್-‌19 ಕಾರಣದಿಂದಾಗಿ ಮುಂದಿನ ವರ್ಷದ ಫೆಬ್ರುವರಿಯವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ನಡೆಸುವುದಿಲ್ಲ.

ಪರಿಸ್ಥಿತಿಯನ್ನು ನೋಡಿಕೊಂಡು ಹಾಗೂ ತಜ್ಞರ ಜೊತೆ ಚರ್ಚೆ ನಡೆಸಿ, ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಳೆದ ಮಂಗಳವಾರ ನಿಶಾಂಕ್‌ ತಿಳಿಸಿದ್ದರು. ಆದರೆ, ಇದೀಗ ಈ ವರ್ಷದ ಕೊನೆಯ ದಿನದಂದು ಪರೀಕ್ಷಾ ವೇಳಾಪಟ್ಟಿ ಘೋಷಣೆ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.