ETV Bharat / bharat

ಸ್ಪೇಸ್​ ಜೆಟ್ ವಿಮಾನಕ್ಕೆ ಬಾಂಬ್ ಸ್ಫೋಟ ಕರೆ.. ಶೋಧ ಕಾರ್ಯ ನಡೆಸಿದ ಪೊಲೀಸರು

author img

By

Published : Jan 12, 2023, 10:28 PM IST

ವಿಮಾನ ನಿಲ್ದಾಣ
ವಿಮಾನ ನಿಲ್ದಾಣ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಪುಣೆಗೆ ತೆರಳುತ್ತಿದ್ದ ಸ್ಪೆಸ್‌ಜೆಟ್‌ ವಿಮಾನದಲ್ಲಿ ಬಾಂಬ್‌ ಇರುವ ಕರೆ ಬಂದಿದ್ದರಿಂದ ಸಂಚಲನ ಉಂಟಾಗಿತ್ತು..

ನವದೆಹಲಿ: ದೆಹಲಿಯಿಂದ ಪುಣೆಗೆ ತೆರಳುತ್ತಿದ್ದ ಸ್ಪೆಸ್‌ಜೆಟ್‌ ವಿಮಾನದಲ್ಲಿ ಬಾಂಬ್‌ ಇರುವ ಬಗ್ಗೆ ಕರೆ ಬಂದಿದ್ದರಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾವರಣ ಉಂಟಾಯಿತು. ಇದಾದ ನಂತರ ಸಿಐಎಸ್‌ಎಫ್ ಮತ್ತು ದೆಹಲಿ ಪೊಲೀಸರು ಅಲರ್ಟ್ ಆಗಿದ್ದರು. ಸ್ಪೈಸ್‌ಜೆಟ್‌ನ ಈ ಹಾರಾಟದ ಬಗ್ಗೆ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

  • A call regarding a bomb in Pune-bound Spicejet flight from Delhi was received before the takeoff. CISF & Delhi Police are on alert. Flight being checked at Delhi Airport: Delhi Police pic.twitter.com/nQLrtSOqlv

    — ANI (@ANI) January 12, 2023 " class="align-text-top noRightClick twitterSection" data=" ">

ಟೇಕಾಫ್ ಆಗುವ ಮುನ್ನ ಮಾಹಿತಿ ಪಡೆದ ಬಾಂಬ್ ಸ್ಕ್ವಾಡ್, ದೆಹಲಿ ಪೊಲೀಸರು ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ವಿಮಾನವನ್ನು ಬೋರ್ಡಿಂಗ್​ನಲ್ಲಿ ನಿಲ್ಲಿಸಲಾಗಿದ್ದು, ನಂತರ ಅಲ್ಲಿಗೆ ಬಾಂಬ್ ಸ್ಕ್ವಾಡ್ ಆಗಮಿಸಿ ತನಿಖೆ ನಡೆಸಿದರು. ಮಾಹಿತಿ ಪ್ರಕಾರ, ವಿಮಾನ ದೆಹಲಿಯಿಂದ ಪುಣೆಗೆ ಸಂಜೆ 6:30ಕ್ಕೆ ಹಾರಬೇಕಿತ್ತು. ಸದ್ಯ ಪೊಲೀಸರು ಈ ಬಗ್ಗೆ ನಿರಂತರ ತನಿಖೆ ನಡೆಸುತ್ತಿದ್ದಾರೆ.

ಬಾಂಬ್​ ಕರೆ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಏರ್​ಪೋರ್ಟ್​​ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಷ್ಟೇ ಅಲ್ಲ ವಿಮಾನದಲ್ಲಿ ತಪಾಸಣೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್​ ಕರೆ ಎಂದು ತಿಳಿದು ಬಂತು. ಆ ಬಳಿಕ ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ದೂರವಾಯಿತು.

ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಎಸ್‌ಎಫ್ ಮತ್ತು ದೆಹಲಿ ಪೊಲೀಸರು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ’’ವಿಮಾನವನ್ನು ಪರಿಶೀಲಿಸಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತು ವಿಮಾನದಲ್ಲಿ ಕಂಡು ಬಂದಿಲ್ಲ. ಆದಾಗ್ಯೂ, ನಿಯಮದಂತೆ ಹಾಗೂ ಮುಂಜಾಗರೂತೆಯ ಭಾಗವಾಗಿ ನಮ್ಮ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚಗೆ ಗೋವಾದಲ್ಲೂ ಇಂತಹುದೇ ಘಟನೆಯ ವರದಿಯಾಗಿತ್ತು. ಬಾಂಬ್​ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಾಸ್ಕೋ ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸಲಾಗಿತ್ತು. ಆಗ ಅಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ವಿಮಾನವು ಗುಜರಾತ್‌ನ ಜಾಮ್​ನಗರದಿಂದ ಗೋವಾಕ್ಕೆ ನಿಗದಿಯಂತೆ ಪ್ರಯಾಣ ಬೆಳೆಸಿತ್ತು.

ಇದಕ್ಕೂ ಮೊದಲು ಬಾಂಬ್​ ಬೆದರಿಕೆ ಹಿನ್ನೆಲೆ ಮಾಸ್ಕೋ - ಗೋವಾ ಅಂತಾರಾಷ್ಟ್ರೀಯ ವಿಮಾನವನ್ನು ಸೋಮವಾರ ರಾತ್ರಿ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು. ಬಾಂಬ್ ಸ್ಕ್ವಾಡ್, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿ, ಜಾಮ್‌ನಗರ ವಿಮಾನ ನಿಲ್ದಾಣವನ್ನು ಎಲ್ಲ ದಿಕ್ಕುಗಳಿಂದಲೂ ಬಂದ್​ ಮಾಡಿ ಪರಿಶೀಲನೆ ನಡೆಸಿದ್ದರು. ಫ್ಲೈಟ್‌ನಲ್ಲಿ ಒಟ್ಟು 236 ಪ್ರಯಾಣಿಕರು ಮತ್ತು 8 ಸಿಬ್ಬಂದಿಗಳಿದ್ದರು. ಎಲ್ಲರನ್ನೂ ರಾತ್ರಿ 9.49ರ ಸುಮಾರಿಗೆ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿ, ತಪಾಸಣೆ ಕೈಗೊಳ್ಳಲಾಗಿತ್ತು. ಬಳಿಕ ಅವರನ್ನು ಟರ್ಮಿನಲ್​ ಕಟ್ಟಡದೊಳಗಿನ ವಿಶ್ರಾಂತಿ ಕೊಠಡಿಗೆ ಕರೆದೊಯ್ಯಲಾಗಿತ್ತು.

ಬಾಲಕಿ ಮೇಲೆ ಅತ್ಯಾಚಾರವೆಸಗಿದ 10 ವರ್ಷದ ಬಾಲಕ.. ಸ್ವಂತ ಮಗಳನ್ನೇ ಕೊಂದ ಪಾಪಿ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.