ETV Bharat / bharat

ಮಹಾರಾಷ್ಟ್ರ ಗ್ರಾಪಂ ಚುನಾವಣೆಯಲ್ಲಿ ಬಿಆರ್​ಎಸ್​ ಹವಾ: ಗುಲಾಬಿ ಪಕ್ಷ ಗೆದ್ದ ಸ್ಥಾನಗಳೆಷ್ಟು ಗೊತ್ತಾ?

author img

By ETV Bharat Karnataka Team

Published : Nov 8, 2023, 7:04 PM IST

ಭಂಡಾರ ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳಲ್ಲಿ ಬಿಆರ್‌ಎಸ್ ವಿಜಯ ಪತಾಕೆ ಹಾರಿಸಿದೆ ಎಂದು ಬಿಆರ್​​ಎಸ್ ಮುಖಂಡ ಚರಣ್ ವಾಘ್ಮರೆ ತಿಳಿಸಿದ್ದಾರೆ.

brs-win-maharahstra-gram-panchayat-election-2023
ಮಹಾರಾಷ್ಟ್ರದಲ್ಲಿ ಗ್ರಾಪಂ ಚುನಾವಣೆಯಲ್ಲಿ ಬಿಆರ್​ಎಸ್​ ಹವಾ: ಗುಲಾಬಿ ಪಕ್ಷ ಗೆದ್ದ ಸ್ಥಾನಗಳೆಷ್ಟು ಗೊತ್ತಾ?

ಮುಂಬೈ(ಮಹಾರಾಷ್ಟ್ರ): ತೆಲಂಗಾಣದ ಭಾರತ ರಾಷ್ಟ್ರ ಸಮಿತಿ ಮಹಾರಾಷ್ಟ್ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದೆ. ಭಂಡಾರ ಮತ್ತು ನಾಂದೇಡ್ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಬಿಆರ್​ಎಸ್​ ನೆರೆ ರಾಜ್ಯದಲ್ಲೂ ರಾಜಕೀಯ ಅಸ್ತಿತ್ವವನ್ನು ಕಂಡುಕೊಂಡಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು. ವಿದರ್ಭದ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಆರ್​ಎಸ್ ಖಾತೆ ತೆರೆದಿದೆ. ಭಂಡಾರ ಜಿಲ್ಲೆಯೊಂದರಲ್ಲೇ 19 ಗ್ರಾಮ ಪಂಚಾಯಿತಿಗಳಲ್ಲಿ ಬಿಆರ್‌ಎಸ್ ವಿಜಯ ಪತಾಕೆಯನ್ನು ಹಾರಿಸಿದೆ ಎಂದು ಮಾಜಿ ಶಾಸಕ ಮತ್ತು ಬಿಆರ್​ಎಸ್ ಮುಖಂಡ ಚರಣ್ ವಾಘ್ಮರೆ ಹೇಳಿದ್ದಾರೆ. ನಾಂದೇಡ್ ನಲ್ಲಿಯೂ ಗುಲಾಬಿ ಪಕ್ಷ ಚಂಡಮಾರುತ ಸೃಷ್ಟಿಸಿದೆ ಎಂಬುದು ಈ ಚುನಾವಣೆಯಿಂದ ಸ್ಪಷ್ಟವಾಗಿದೆ. ಆದ್ದರಿಂದ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ, ಎಸ್​ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಎರಡೂ ಮೈತ್ರಿಕೂಟಗಳಿಗೆ ಪೈಪೋಟಿ ನೀಡುವುದಾಗಿ ಭಾರತ ರಾಷ್ಟ್ರ ಸಮಿತಿ ಸ್ಪಷ್ಟಪಡಿಸಿದೆ.

ಭಂಡಾರ ಜಿಲ್ಲೆಯ 66 ಗ್ರಾಪಂಗಳ ಫಲಿತಾಂಶವನ್ನು ಸೋಮವಾರ ಪ್ರಕಟಿಕೊಂಡಿದೆ. ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಆರ್‌ಎಸ್​, 11 ಗ್ರಾಪಂಗಳನ್ನು ವಶಪಡಿಸಿಕೊಂಡಿದೆ. ಆಡಳಿತಾರೂಢ ಬಿಜೆಪಿಗೆ ಸೆಡ್ಡು ಹೊಡೆದಿರುವುದರ ಜೊತೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಳೆಗೆ ಅವರದೇ ಜಿಲ್ಲೆಯಲ್ಲಿ ಕಾಂಗ್ರೆಸ್​ ಅನ್ನು ಬಿಟ್ಟು ಮುಂಬರುವ ಚುನಾವಣೆಯಲ್ಲಿ ನಾವು ಸ್ಪರ್ಧಿಸಲು ಸಿದ್ಧ ಎಂಬ ಸಂದೇಶ ರವಾನಿಸಿದೆ.

ಭಂಡಾರ ಜಿಲ್ಲೆಯ 66 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಇವರಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾದರು. ಹಾಗಾಗಿ ಉಳಿದ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಪೈಕಿ ಮೊಹದಿ ತಾಲೂಕು ಅತಿ ಹೆಚ್ಚು 57 ಗ್ರಾಪಂ ಗಳನ್ನು ಹೊಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಆರ್‌ಎಸ್‌ ನಿಂದ 50 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ 19 ಕಡೆ ಬಿಆರ್​ಎಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಆರ್​ಎಸ್ ಪಕ್ಷ ತನ್ನ ಪ್ರಾಬಲ್ಯ ತೋರಲಿದೆ ಎಂದು ಮಾಜಿ ಶಾಸಕ ಚರಣ್ ವಾಘ್ಮರೆ ಭವಿಷ್ಯ ನುಡಿದಿದ್ದಾರೆ.

ಬಿಆರ್‌ಎಸ್‌ನ ವಿಜೇತ ಅಭ್ಯರ್ಥಿಗಳು: ಅಂಶಬಾಯಿ ಗೋವಿಂದ ಅಡೆ, ಶಾಂತಾಬಾಯಿ ಶಿವಾಜಿ ರಾಠೋಡ್, ವಿನಯ್ ಮರೋಟಿ ಚವ್ಹಾಣ್, ತುಳಸಾಬಾಯಿ ಶಂಕರ ಚವ್ಹಾಣ್, ರಾಮರಾವ್ ವಸ್ರಾಮ್ ಚವ್ಹಾಣ್, ಮೋತಿರಾಮ್ ಠಾಕರ ಚವ್ಹಾಣ್.

ನಾಂದೇಡ್ ಜಿಲ್ಲೆಯ ಒಟ್ಟು 64 ಗ್ರಾಪಂ ಸ್ಥಾನಗಳ ಫಲಿತಾಂಶ: ಬಿಜೆಪಿ 10, ಶಿವಸೇನೆಯ ಶಿಂಧೆ ಗುಂಪು 0, ಠಾಕ್ರೆ ಗುಂಪು 0, ಅಜಿತ್ ಪವಾರ್ ಗುಂಪು 25 (2 ಅವಿರೋಧ), ಶರದ್ ಪವಾರ್ ಗುಂಪು 03, ಕಾಂಗ್ರೆಸ್ 9, ಬಿಆರ್​ಎಸ್​ 11 ಗ್ರಾಮ ಪಂಚಾಯಿತಿಗಳಲ್ಲಿ ಗೆಲುವ ಸಾಧಿಸಿದೆ.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವದ 3ನೇ ಆರ್ಥಿಕ ಶಕ್ತಿ.. ಕಾಂಗ್ರೆಸ್​ ಬಂದ್ರೆ ಶೇ '85ರಷ್ಟು ಕಮಿಷನ್​' ಜಾರಿ: ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.