ETV Bharat / bharat

''ನನ್ನನ್ನು ಗಲ್ಲಿಗೇರಿಸಿ, ಆದ್ರೆ ಕುಸ್ತಿ ಚಟುವಟಿಕೆಗಳು ನಿಲ್ಲಬಾರದು..'': ಬ್ರಿಜ್ ಭೂಷಣ್

author img

By

Published : May 1, 2023, 9:52 PM IST

''ನನ್ನನ್ನು ಗಲ್ಲಿಗೇರಿಸಿ ಆದ್ರೆ, ಕುಸ್ತಿ ಚಟುವಟಿಕೆಗಳು ನಿಲ್ಲಬಾರದು'' ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಎಲ್ಲಾ ಕುಸ್ತಿ ಚಟುವಟಿಕೆಗಳು ಸ್ಥಗಿತವಾಗಿವೆ.

Brij Bhushan Sharan Singh
ಬ್ರಿಜ್ ಭೂಷಣ್ ಶರಣ್ ಸಿಂಗ್

ನವದೆಹಲಿ: ''ದೇಶದ ಅಗ್ರ ಕುಸ್ತಿಪಟುಗಳ ನಿರಂತರ ಪ್ರತಿಭಟನೆಯಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ'' ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೋಮವಾರ ಹೇಳಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರು ''ತಾವು ಗಲ್ಲಿಗೇರಲು ಸಿದ್ಧರಿದ್ದು, ಆದರೆ ಕುಸ್ತಿ ಚಟುವಟಿಕೆಗಳು ನಿಲ್ಲಬಾರದು. ಏಕೆಂದರೆ ಇದರಿಂದ ಕೆಡೆಟ್ ಮತ್ತು ಜೂನಿಯರ್ ಕುಸ್ತಿಪಟುಗಳಿಗೆ ನಷ್ಟ ಉಂಟಾಗುತ್ತದೆ'' ಎಂದು ಅವರು ಹೇಳಿದ್ದಾರೆ.

''ಕಳೆದ ನಾಲ್ಕು ತಿಂಗಳಿನಿಂದ ಎಲ್ಲ ಕುಸ್ತಿ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದರು. ನನ್ನನ್ನು ಗಲ್ಲಿಗೇರಿಸಿ ಎಂದು ನಾನು ಹೇಳುತ್ತೇನೆ. ಕುಸ್ತಿ ಚಟುವಟಿಕೆಗಳನ್ನು ಮಾತ್ರ ನಿಲ್ಲಿಸಬೇಡಿ. ಮಕ್ಕಳ ಭವಿಷ್ಯದ ಜೊತೆಗೆ ಆಟವಾಡಬೇಡಿ. ಕೆಡೆಟ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದನ್ನು ಯಾರೇ ಆಯೋಜಿಸಲಿ. ಮಹಾರಾಷ್ಟ್ರ, ತಮಿಳುನಾಡು ಅಥವಾ ತ್ರಿಪುರಾ ಆಗಿರಲಿ. ಆದರೆ, ಕುಸ್ತಿ ಚಟುವಟಿಕೆಗಳನ್ನು ಮಾತ್ರ ಸ್ಥಗಿತಗೊಳಿಸಬೇಡಿ'' ಎಂದು ಮನವಿ ಮಾಡಿದ್ರು.

ಬ್ರಿಜ್ ಭೂಷಣ್ ಎರಡು ಎಫ್ಐಆರ್ ದಾಖಲು: ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಭಟನಾನಿರತ ಮಹಿಳಾ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಮೊದಲನೆಯದು ಅಪ್ರಾಪ್ತ ವಯಸ್ಕರಿಂದ ಮಾಡಿದ ಆರೋಪಗಳಿಗೆ ಸಂಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುಗಳ ಸಮಗ್ರ ತನಿಖೆಗೆ ಸಂಬಂಧಿಸಿದಂತೆ ಎರಡನೇ ಎಫ್ಐಆರ್ ದಾಖಲಿಸಲಾಗಿದೆ.

ಮೂರು ಸದಸ್ಯರ ಸಮಿತಿ ರಚನೆ: ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್‌ನ ಮೇ 7ರ ಚುನಾವಣೆಯನ್ನು ಸ್ಥಗಿತಗೊಳಿಸಿದೆ. ಕ್ರೀಡಾ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು 45 ದಿನಗಳಲ್ಲಿ ಚುನಾವಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಗೆ ಕೇಳಿದೆ. ಐಒಎ ಮಾಜಿ ಶೂಟರ್ ಸುಮಾ ಶಿರೂರ್ ಮತ್ತು ಭಾರತೀಯ ವುಶು ಫೆಡರೇಶನ್ ಅಧ್ಯಕ್ಷ ಭೂಪೇಂದ್ರ ಸಿಂಗ್ ಬಾಜ್ವಾ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ಅಧ್ಯಕ್ಷರು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದು, ಅವರ ಹೆಸರನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಹೇಳಿದ್ದೇನು?: ''ರಾಷ್ಟ್ರೀಯ ಕೆಡೆಟ್ ಚಾಂಪಿಯನ್‌ಶಿಪ್ ಅನ್ನು ಯಾರು ಬೇಕಾದರೂ ಆಯೋಜಿಸಬಹುದು ಮತ್ತು ಡಬ್ಲ್ಯುಎಫ್‌ಐ ಇದಕ್ಕೆ ಯಾವುದೇ ಅಭ್ಯಂತರವಿಲ್ಲ'' ಎಂದು ಬ್ರಿಜ್ ಭೂಷಣ್ ಹೇಳಿದರು. ''ಪಂದ್ಯಾವಳಿಗೆ ಸಂಬಂಧಿಸಿದಂತೆ, ಪ್ರತಿಭಟಿಸುವ ಕುಸ್ತಿಪಟುಗಳು, ಐಒಎ ಅಥವಾ ಸರ್ಕಾರದ ಅವರು ಏನು ಬೇಕಾದರೂ ಆಯೋಜಿಸಬಹುದು. ರಾಷ್ಟ್ರೀಯ ಕೆಡೆಟ್ ಚಾಂಪಿಯನ್‌ಶಿಪ್, ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಶಿಪ್ ಮತ್ತು ಇತರ ಪಂದ್ಯಾವಳಿಗಳನ್ನು ಆಯೋಜಿಸಲು ಪ್ರತಿಭಟನಾ ನಿರತ ಕುಸ್ತಿಪಟುಗಳು, ಐಒಎ ಮತ್ತು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ'' ಎಂದು ಅವರು, ನಿಮಗೆ ಸಾಧ್ಯವಾಗದಿದ್ದರೆ, ಫೆಡರೇಶನ್ ಅವರನ್ನು ಸಂಘಟಿಸಬಹುದು'' ಎಂದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ- ಬ್ರಿಜ್ ಭೂಷಣ್: ''ಈಗ 14 ವರ್ಷ ಒಂಬತ್ತು ತಿಂಗಳಾಗಿರುವ ಮಗುವಿಗೆ ಮೂರು ತಿಂಗಳಲ್ಲಿ 15 ವರ್ಷ ತುಂಬುತ್ತದೆ. 15 ವರ್ಷ ತುಂಬಿದರೆ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ'' ಎಂದು ಬ್ರಿಜ್ ಭೂಷಣ್ ಹೇಳಿದರು. (ಪ್ರತಿಭಟಿಸುವ ಕುಸ್ತಿಪಟುಗಳು, IOA ಮತ್ತು ಸರ್ಕಾರ) ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ನನ್ನನ್ನು ಗಲ್ಲಿಗೇರಿಸಿ ಆದರೆ, ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಇರಲಿ, ತರಬೇತಿ ಶಿಬಿರಗಳು ಇರಲಿ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ'' ಎಂದು ಬ್ರಿಜ್ ಭೂಷಣ್ ಖಚಿತಪಡಿಸಿದರು.

ಆದರೆ, ಅವರು ಇತರ ಪಾತ್ರದಲ್ಲಿ ಫೆಡರೇಶನ್‌ನೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಬಹುದು. ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ 12 ವರ್ಷ ಪೂರೈಸಿರುವ ಅವರು, ಕ್ರೀಡಾ ಸಂಹಿತೆಯ ಪ್ರಕಾರ ಇನ್ಮುಂದೆ ಈ ಹುದ್ದೆಗೆ ಸ್ಪರ್ಧಿಸುವಂತಿಲ್ಲ.

ಇದನ್ನೂ ಓದಿ: ಗೋರಿಗೆ ಬೀಗ ಹಾಕಿದ ಚಿತ್ರ ಪಾಕಿಸ್ತಾನದ್ದಲ್ಲ, ಅದಿರೋದು ಹೈದರಾಬಾದ್​​ನ ಸ್ಮಶಾನದಲ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.