ETV Bharat / bharat

ಅಖಿಲೇಶ್​ ಯಾದವ್​ಗೆ ಮುಂದಿನ ಚುನಾವಣೆ ದೊಡ್ಡ ಸವಾಲು.. ಮುಲಾಯಂ ಸಿಂಗ್​ ಅನುಪಸ್ಥಿತಿಯಲ್ಲಿ ಏಕಾಂಗಿ ಹೋರಾಟ

author img

By

Published : Dec 30, 2021, 3:49 PM IST

2 ದಶಕಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸಮಾಜವಾದಿ ಪಕ್ಷದ ಅಧಿಕನಾಯಕ ಅಖಿಲೇಶ್ ಯಾದವ್​ ಅವರ ತಂದೆ ಮುಲಾಯಂ ಸಿಂಗ್​ ಯಾದವ್​ರ ಅನುಪಸ್ಥಿತಿಯಲ್ಲಿ ಚುನಾವಣೆಗೆ ದುಮುಕಲಿದ್ದಾರೆ. ಇದಲ್ಲದೇ ಪಕ್ಷದ ಹಿರಿಯ ನಾಯಕರು ಕೂಡ ಅಖಿಲೇಶ್​ ಯಾದವ್​ಗೆ ಎಷ್ಟರ ಮಟ್ಟಿಗೆ ನೆರವಾಗಲಿದ್ದಾರೆ ಎಂಬುದು ಚುನಾವಣೆಯಲ್ಲಿ ಗೋಚರಿಸಲಿದೆ.

Akhilesh
ಅಖಿಲೇಶ್​ ಯಾದವ್​

ಲಖನೌ(ಉತ್ತರಪ್ರದೇಶ): ಸಮಾಜವಾದಿ ಪಕ್ಷ ಮತ್ತು ಅದರ ನಾಯಕ ಅಖಿಲೇಶ್​ ಯಾದವ್​ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯು ಭಾರಿ ಸವಾಲಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಕಾರಣ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ಅವರ ಅನುಪಸ್ಥಿತಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಚುನಾವಣೆ ಭರದ ಸಿದ್ಧತೆಯಲ್ಲಿರುವ ಅಖಿಲೇಶ್​ ಯಾದವ್​ ಏಕಾಂಗಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಅವರ ತಂದೆ ಮುಲಾಯಂ ಸಿಂಗ್​ ಯಾದವ್​ ಅವರು ಚುನಾವಣಾ ಪ್ರಚಾರದಲ್ಲಿ ಅನಾರೋಗ್ಯದ ಕಾರಣ ಭಾಗಿಯಾಗುತ್ತಿಲ್ಲ. ಅಲ್ಲದೇ, ಪಕ್ಷದ ಹಿರಿಯರು ನಾಯಕರೂ ಕೂಡ ಸಕ್ರಿಯ ರಾಜಕಾರಣದಿಂದ ತೆರೆಮರೆಗೆ ಸರಿದಿದ್ದಾರೆ. ಇದು ಅಖಿಲೇಶ್​ ಯಾದವ್​ ಅವರನ್ನು ಚಿಂತೆಗೀಡು ಮಾಡಿದೆ.

2012 ರಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಅದಕ್ಕೆ ಮೂಲ ಕಾರಣವಾಗಿದ್ದು, ಮುಲಾಯಂ ಸಿಂಗ್​ ಅವರ ಚಾಣಾಕ್ಷತನ. ಅವರು ರೂಪಿಸಿದ ತಂತ್ರಗಳು ಯಶಸ್ವಿಯಾಗಿ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ಮುಲಾಯಂ ಅವರು ವಯೋಸಹಜ ಅನಾರೋಗ್ಯದಿಂದ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವಂತಾಗಿದೆ.

ಇನ್ನು ಪಕ್ಷದ ಚುಕ್ಕಾಣಿ ಹಿಡಿದಿರುವ ಅಖಿಲೇಶ್​ ಯಾದವ್​ ಸ್ಟಾರ್​ ಪ್ರಚಾರಕರಾಗಿದ್ದಾರೆ. ಇದು ಅವರ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದೆ. ಅಲ್ಲದೇ ಅಖಿಲೇಶ್​ ಯಾದವ್​ 2017 ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸಲಿಲ್ಲ. ಇದಲ್ಲದೇ ಅವರ ಸಹೋದರರೂ ಕೂಡ ರಾಜಕೀಯ ಶಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗಿದ್ದು, ಅಖಿಲೇಶ್​ ಏಕಶಕ್ತಿಯಾಗಿ ಹೋರಾಡಬೇಕಿದೆ.

ಇದಲ್ಲದೇ, ಪಕ್ಷದ ದಿಗ್ಗಜರಾದ ಬೇನಿ ಪ್ರಸಾದ್ ವರ್ಮಾ, ಭಗವತಿ ಸಿಂಗ್ ಅಂತವರು ಪಕ್ಷದಲ್ಲಿ ಮೂಲೆ ಗುಂಪಾಗಿದ್ದಾರೆ. ಅಖಿಲೇಶ್ ಅನುಪಸ್ಥಿತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಬುದ್ಧ ನಾಯಕರ ಕೊರತೆಯೂ ಸಮಾಜವಾದಿ ಪಕ್ಷದಲ್ಲಿ ಎದ್ದು ಕಾಣುತ್ತಿದೆ.

ಮತ್ತೊಂದೆಡೆ, ಬಿಜೆಪಿ ಉತ್ತರಪ್ರದೇಶದಲ್ಲಿ ತನ್ನ ಕೋಟೆ ಭದ್ರಪಡಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಹಲವಾರು ಬಿಜೆಪಿ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕನಿಷ್ಠ 6 ಬಿಜೆಪಿ ನಾಯಕರು ನಿರಂತರ ಸಭೆ, ಸಮಾರಂಭಗಳನ್ನು ಉದ್ದೇಶಿಸಿ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಅಖಿಲೇಶ್​ ಅವರನ್ನು ಚಿಂತೆಗೀಡು ಮಾಡಿದೆ.

ಕಂಟಕವಾದ ಕಾರ್ಯಕರ್ತರ ಅತ್ಯುತ್ಸಾಹ

ಅಖಿಲೇಶ್ ಎದುರಿಸುತ್ತಿರುವ ಮತ್ತೊಂದು ಸವಾಲು ಎಂದರೆ ಅತ್ಯುತ್ಸಾಹದಲ್ಲಿರುವ ಕಾರ್ಯಕರ್ತರನ್ನು ನಿಭಾಯಿಸುವುದು. ಅಖಿಲೇಶ್​ ನಡೆಸುವ ರ‍್ಯಾಲಿಗಳಲ್ಲಿ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದನ್ನು ಕಂಡ ಪಕ್ಷದ ಕಾರ್ಯಕರ್ತರು ಆಗಾಗ್ಗೆ ಮಿತಿಮೀರಿ ನಡೆದುಕೊಳ್ಳುವುದು ಅಖಿಲೇಶ್​, ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದೆ.

ಇದನ್ನೂ ಓದಿ: ನಿತ್ಯ 633 ಕೆಜಿ ಅಕ್ರಮ ಗಾಂಜಾ ವಶ.. 2021ರಲ್ಲಿ ₹231.17 ಕೋಟಿ ಮೌಲ್ಯದ ಮಾದಕ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.