ETV Bharat / bharat

ಆಸ್ಪತ್ರೆಯಲ್ಲಿ ನಿರ್ಮಾಣ ಹಂತದ ಲ್ಯಾಬ್​​ ಸ್ಕ್ಯಾಬ್​ ಬಡಿದು ಗರ್ಭಿಣಿ ಸಾವು!

author img

By

Published : Oct 5, 2020, 8:20 PM IST

pregent woman died
pregent woman died

ಆಸ್ಪತ್ರೆಯಲ್ಲಿ ನಿರ್ಮಾಣದ ಹಂತದ ಸ್ಕ್ಯಾಬ್​ ಬಡಿದು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಚಿತ್ತೂರು(ಆಂಧ್ರಪ್ರದೇಶ): ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಸಿಮ್ಸ್​ ಕೋವಿಡ್​ ಆಸ್ಪತ್ರೆಯಲ್ಲಿ ನಿರ್ಮಾಣ ಹಂತದ ಲ್ಯಾಬ್​​ ಸ್ಕ್ಯಾಬ್​​ ಬಡಿದು ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದಾರೆ.

ಭಾನುವಾರ ರಾತ್ರಿ ಕೆಲಸ ಮಾಡುತ್ತಿದ್ದ ವೇಳೆ ಸ್ಕ್ಯಾಬ್​ ಬಡಿದು ರಾಧಿಕಾ ಸಾವನ್ನಪ್ಪಿದ್ದು, ಇತರ ಇಬ್ಬರು ಕೋವಿಡ್​ ರೋಗಿಗಳು ಗಾಯಗೊಂಡಿದ್ದರು. ತುರ್ತು ಪರಿಸ್ಥಿತಿ ವಾರ್ಡ್​​ನಲ್ಲಿ ಹೊಸ ಕೊಠಡಿ ನಿರ್ಮಾಣ ಮಾಡಲಾಗುತ್ತಿತ್ತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕೋವಿಡ್​ ಭಯದ ನಡುವೆ ಕೂಡ ಗರ್ಭಿಣಿ ರಾಧಿಕಾ ಸ್ವಯಂ ಪ್ರೇರಣೆಯಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಜಂಟಿ ಕಲೆಕ್ಟರ್​ ವೀರಬ್ರಹ್ಮನ್​ ಮತ್ತು ಬಿಜೆಪಿ ರಾಜ್ಯ ವಕ್ತಾರ ಭಾನು ಪ್ರಕಾಶ್​ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.