ETV Bharat / bharat

ಎನ್​ಡಿಎ 'ಘಟಬಂಧನ್​​': ನಿತೀಶ್​ ಕುಮಾರ್​ ನೇತೃತ್ವದಲ್ಲೇ ಬಿಹಾರ ಚುನಾವಣೆ ಎಂದ ಬಿಜೆಪಿ!

author img

By

Published : Sep 30, 2020, 5:13 PM IST

ಬಿಹಾರ ಚುನಾವಣೆಗೆ ಇನ್ನಿಲ್ಲದ ಕಸರತ್ತು ನಡೆಯುತ್ತಿದ್ದು, ಭಾರತೀಯ ಜನತಾ ಪಾರ್ಟಿ ಇದೀಗ ಸಿಎಂ ನಿತೀಶ್​​​ ಕುಮಾರ್​ ಯಾದವ್​ ನೇತೃತ್ವದಲ್ಲೇ ಎಲೆಕ್ಷನ್​ ಎದುರಿಸಲು ನಿರ್ಧರಿಸಿದೆ.

Bihar Elections
Bihar Elections

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಖಾಡಕ್ಕೆ ಇಳಿಯಲು ವಿವಿಧ ಪಕ್ಷಗಳು ರಣತಂತ್ರ ರೂಪಿಸಿಕೊಳ್ಳುತ್ತಿದ್ದು, ಇದೀಗ ಎನ್​ಡಿಎ ಘಟಬಂಧನ್​​​ ಕೂಡ ಮೈತ್ರಿ ಪಕ್ಷಗಳೊಂದಿಗೆ ಸ್ಪರ್ಧೆ ನಡೆಸಲಿದೆ.

ಮಾಹಿತಿ ನೀಡಿದ ಬಿಜೆಪಿ ಮುಖಂಡ ಭೂಪೇಂದ್ರ

ಇದೇ ವಿಚಾರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್​, ಎನ್​ಡಿಎ ಘಟಬಂಧನ್​​ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಸಾರಥ್ಯದಲ್ಲೇ ಚುನಾವಣೆ ನಡೆಸಲು ನಿರ್ಧರಿಸಿದ್ದು, ಬಿಜೆಪಿ, ಜೆಡಿಯು ಮತ್ತು ಲೋಕ ಜನಶಕ್ತಿ ಪಾರ್ಟಿ ಒಗ್ಗಟ್ಟಿನಿಂದ ಸ್ಪರ್ಧೆ ಮಾಡಲಿವೆ. ಇದರ ಜತೆಗೆ ಜಿತಿನ್​​ ಮಾಝಿ ಪಕ್ಷ ಕೂಡ ಜೆಡಿಯುಗೆ ಸಪೋರ್ಟ್​​ ಮಾಡಲಿದೆ ಎಂದು ತಿಳಿಸಿದ್ದಾರೆ.

ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಇದರಲ್ಲಿ ಗೃಹ ಸಚಿವ ಅಮಿತ್​ ಶಾ, ಸಂತೋಷ್​ ಜೀ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ವೇಳೆ ಸೀಟು ಹಂಚಿಕೆ ವಿಚಾರವಾಗಿ ಮಹತ್ವದ ಮಾತುಕತೆ ನಡೆಸಲಾಗಿದೆ. ಇನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ಮುಖಂಡ ದೇವೇಂದ್ರ ಫಡ್ನವೀಸ್​​​ ಬಿಹಾರ ಇನ್​​ ಚಾರ್ಜ್​​ ಆಗಿ ನೇಮಕಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.