ETV Bharat / bharat

ನಕಲಿ ಟಿಆರ್​ಪಿ ರೇಟಿಂಗ್​​​ ಪ್ರಕರಣ: ಚಾರ್ಜ್​​​ಶೀಟ್​ ಸಲ್ಲಿಸಿದ ಸಿಐಯು

author img

By

Published : Nov 24, 2020, 3:45 PM IST

ನಕಲಿ ಟಿಆರ್​ಪಿ ರೇಟಿಂಗ್​​​ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಪರಾಧ ಗುಪ್ತಚರ ಘಟಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚಾರ್ಚ್​ಶೀಟ್​ ಸಲ್ಲಿಸಿದ ಸಿಐಯು
ಚಾರ್ಚ್​ಶೀಟ್​ ಸಲ್ಲಿಸಿದ ಸಿಐಯು

ಮುಂಬೈ: ನಕಲಿ ಟಿಆರ್​ಪಿ ರೇಟಿಂಗ್​​​ ಪ್ರಕರಣ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಗುಪ್ತಚರ ಘಟಕ (ಸಿಐಯು) ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗವು ಈವರೆಗೆ ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಮತ್ತು ಇತರ ಎರಡು ಚಾನೆಲ್‌ಗಳ ಮಾಲೀಕರು ಸೇರಿದಂತೆ 12 ಜನರನ್ನು ಬಂಧಿಸಿದೆ.

ಕಳೆದ ತಿಂಗಳು ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ದೂರು ನೀಡಿದಾಗ ನಕಲಿ ಟಿಆರ್‌ಪಿ ಹಗರಣ ಬೆಳಕಿಗೆ ಬಂದಿದ್ದು, ಕೆಲವು ಟೆಲಿವಿಷನ್ ಚಾನೆಲ್‌ಗಳು ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್ ಮಾಡುತ್ತಿವೆ ಎಂದು ಆರೋಪಿಸಿವೆ.

ಟಿಆರ್​ಪಿಯ ಮಾದರಿ ಮನೆಗಳಲ್ಲಿ ವೀಕ್ಷಕರ ಡೇಟಾವನ್ನು (ಯಾವ ಚಾನಲ್​​​ನಲ್ಲಿ ವೀಕ್ಷಿಸಲಾಗಿದೆ ಮತ್ತು ಎಷ್ಟು ಸಮಯದವರೆಗೆ)ದಾಖಲಿಸುವ ಬಾರೋಮೀಟರ್‌ಗಳನ್ನು ಸ್ಥಾಪಿಸುವ ಕಾರ್ಯವನ್ನು ಹನ್ಸಾಗೆ ವಹಿಸಲಾಗಿತ್ತು. ಚಾನೆಲ್‌ಗಳ ಜಾಹೀರಾತು ಆದಾಯವು ಅದರ ಮೇಲೆ ಅವಲಂಬಿತವಾಗಿರುವುದರಿಂದ ಟಿಆರ್‌ಪಿ ಟಿವಿ ಚಾನಲ್​​​​ಗಳಿಗೆ ಮುಖ್ಯವಾಗಿರುತ್ತದೆ.

ಇದನ್ನು ಓದಿ: ಆರು ತಿಂಗಳಿನಿಂದಲೂ ತಾಯಿ ಮೃತದೇಹದೊಂದಿಗೆ ಮಗಳ ಜೀವನ!

ಇನ್ನು ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್​ ಸಿಂಗ್, ಕಳೆದ ತಿಂಗಳು ರಿಪಬ್ಲಿಕ್ ಟಿವಿ ಮತ್ತು ಎರಡು ಮರಾಠಿ ಚಾನೆಲ್‌ಗಳಾದ ಬಾಕ್ಸ್ ಸಿನೆಮಾ ಮತ್ತು ಫ್ಯಾಕ್ಟ್ ಮರಾಠಿ ಟಿಆರ್‌ಪಿ ಸಂಖ್ಯೆಯನ್ನು ರಿಗ್ಗಿಂಗ್​ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಬಂಧಿತರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

ಈ ಹಿಂದೆ, ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಇಬ್ಬರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಒಒ) ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಅವರನ್ನು ನಕಲಿ ಟಿಆರ್‌ಪಿ ದಂಧೆ ಪ್ರಕರಣದಲ್ಲಿ ವಿಚಾರಣೆಗಾಗಿ ಪೊಲೀಸರು ಕರೆಯಿಸಿದ್ದರು.

ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.