ETV Bharat / bharat

ಅಯೋಧ್ಯೆ ಮಸೀದಿಯ ವಿನ್ಯಾಸದ ಹೊಣೆ ಜೆಎಂಐ ಪ್ರೊಫೆಸರ್ ಎಸ್‌ಎಂ ಅಖ್ತರ್ ಹೆಗಲಿಗೆ

author img

By

Published : Sep 2, 2020, 2:36 PM IST

JMI Professor of Architect SM Akhtar as appointed as Consultant Architect of Ayodhya Mosque
ಅಯೋಧ್ಯೆ ಮಸೀದಿಯ ಸಲಹೆಗಾರ ವಾಸ್ತುಶಿಲ್ಪಿಯಾಗಿ ಜೆಎಂಐ ವಾಸ್ತುಶಿಲ್ಪ ಪ್ರೊಫೆಸರ್ ಎಸ್‌ಎಂ ಅಖ್ತರ್ ನೇಮಕ

ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ ಸಲಹೆಗಾರ ವಾಸ್ತುಶಿಲ್ಪಿಯಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥ ಪ್ರೊ. ಎಸ್‌ ಎಂ ಅಖ್ತರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ.

ನವದೆಹಲಿ: ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ ಸಲಹೆಗಾರ ವಾಸ್ತುಶಿಲ್ಪಿಯಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಎಸ್‌ಎಂ ಅಖ್ತರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ಮಂಜೂರು ಮಾಡಿದ ಭೂಮಿಯಲ್ಲಿ ಮಸೀದಿ ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಲು ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ 15 ಸದಸ್ಯರ ಟ್ರಸ್ಟ್ ಐಐಸಿಎಫ್ ಅನ್ನು ರಚಿಸಿತ್ತು.

ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ಕಳೆದ ವರ್ಷ ನವೆಂಬರ್ 9 ರಂದು, ದೇವಾಲಯದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಮತ್ತು ಅದಕ್ಕಾಗಿ ಒಂದು ಟ್ರಸ್ಟ್ ಅನ್ನು ಸ್ಥಾಪಿಸಿತ್ತು.

ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಪರ್ಯಾಯ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.

ಫೆಬ್ರವರಿಯಲ್ಲಿ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಒದಗಿಸಿದ ಐದು ಎಕರೆ ಭೂಮಿಯನ್ನು ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸ್ವೀಕರಿಸಿ ಈ ಮಹತ್ವದ ತೀರ್ಮಾನವನ್ನು ಒಪ್ಪಿಕೊಂಡಿತು.

ಇಲ್ಲಿ ಟ್ರಸ್ಟ್ ಚಾರಿಟಬಲ್ ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ ಮತ್ತು ಇಂಡೋ-ಇಸ್ಲಾಮಿಕ್ ನಾಗರಿಕತೆಯ ಪರಂಪರೆಯನ್ನು ಪ್ರದರ್ಶಿಸುವ ಕೇಂದ್ರವನ್ನು ಸಹ ನಿರ್ಮಿಸಲಿದ್ದು, ಇವುಗಳ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.