ETV Bharat / bharat

ಜಾಮೀನಿಗಾಗಿ ರೆಡ್ಡಿ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ... ಕೋರ್ಟ್​ನಲ್ಲಿ ನಿವೃತ್ತ ಜಡ್ಜ್​ ಸಾಕ್ಷಿ

author img

By

Published : Aug 28, 2019, 5:29 PM IST

ಜಾಮೀನಿಗಾಗಿ ರೆಡ್ಡಿ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ

ದೇಶದಾದ್ಯಂತ ಸಂಚಲನ ಮೂಡಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಬೇಲ್ ಡೀಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಜಾಮೀನಿಗಾಗಿ ರೆಡ್ಡಿ 40 ಕೋಟಿ ಆಫರ್ ನೀಡಿದ್ದು ನಿಜ ಎಂದು ನಿವೃತ್ತ ನ್ಯಾಯಾಧೀಶ ನಾಗಮಾರುತಿ ಶರ್ಮಾ ಒಪ್ಪಿಕೊಂಡಿದ್ದಾರೆ.

ಹೈದರಾಬಾದ್​: ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ತಮ್ಮ ಜಾಮೀನಿಗಾಗಿ ಹಣ ನೀಡಿದ್ದರು ಎನ್ನಲಾದ ಪ್ರಕರಣ ಸಂಬಂಧ ಕೋರ್ಟ್​ಗೆ ಹಾಜರಾದ ನಿವೃತ್ತ ನ್ಯಾಯಾಧೀಶ ನಾಗ ಮಾರುತಿ ಶರ್ಮಾ ಅವರು, ರೆಡ್ಡಿ ತಮಗೆ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

2012ರಲ್ಲಿ ತಾವು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ರೆಡ್ಡಿ ಜಾಮೀನಿಗಾಗಿ ಅಧಿಕಾರಿಯೊಬ್ಬರಿಂದ 40 ಕೋಟಿ ರೂಪಾಯಿ ಲಂಚದ ಆಫರ್​ ಕೊಡಿಸಿದ್ದರು, ಎಂದು ಸೋಮವಾರ ಇಲ್ಲಿನ ಸ್ಥಳೀಯ ಕೋರ್ಟ್​ಗೆ ಹಾಜರಾದ ಶರ್ಮಾ ಹೇಳಿದ್ದಾರೆ.

ಶರ್ಮಾ ಅವರು ಎಸಿಬಿ ಕೋರ್ಟ್​ನಲ್ಲಿ ಇದೇ ಹೇಳಿಕೆ ನೀಡಿದ್ದರು. ಲಂಚದ ಆಮಿಷವೊಡ್ಡಿದಾಗ ನಾನು ಸುತಾರಾಂ ಒಪ್ಪಲಿಲ್ಲ ಎಂದು ಅವರು ಕೋರ್ಟ್​ಗೆ ತಿಳಿಸಿದ್ದರು. ಜಾಮೀನಿಗಾಗಿ ಲಂಚ ಪ್ರಕರಣದ ವಿಚಾರಣೆಯು ಇಲ್ಲಿನ ಸ್ಥಳೀಯ ಎಸಿಬಿ ಕೋರ್ಟ್​ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್​ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿದೆ.

Intro:Body:

ಜಾಮೀನಿಗಾಗಿ ರೆಡ್ಡಿ 40 ಕೋಟಿ ರೂ. ಆಫರ್​ ಕೊಟ್ಟಿದ್ದು ನಿಜ... ಕೋರ್ಟ್​ನಲ್ಲಿ ನಿವೃತ್ತ ಜಡ್ಜ್​ ಸಾಕ್ಷಿ 



ಹೈದರಾಬಾದ್​: ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ತಮ್ಮ ಜಾಮೀನಿಗಾಗಿ ಹಣ ನೀಡಿದ್ದರು ಎನ್ನಲಾದ ಪ್ರಕರಣ ಸಂಬಂಧ ಕೋರ್ಟ್​ಗೆ ಹಾಜರಾದ ನಿವೃತ್ತ ನ್ಯಾಯಾಧೀಶ ನಾಗ ಮಾರುತಿ ಶರ್ಮಾ ಅವರು, ರೆಡ್ಡಿ ತಮಗೆ 40 ಕೋಟಿ ರೂ. ಆಫರ್​ ಕೊಟ್ಟಿದ್ದರು ಎಂದು ಒಪ್ಪಿಕೊಂಡಿದ್ದಾರೆ. 



2012ರಲ್ಲಿ ತಾವು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ ಅಕ್ರಮ ಗಣಿಗಾರಿಕೆ ಸಂಬಂಧ ಬಂಧಿತರಾಗಿದ್ದ ರೆಡ್ಡಿ  ಜಾಮೀನಿಗಾಗಿ ಅಧಿಕಾರಿಯೊಬ್ಬರಿಂದ 40 ಕೋಟಿ ರೂಪಾಯಿ ಲಂಚದ ಆಫರ್​ ಕೊಡಿಸಿದ್ದರು ಎಂದು ಸೋಮವಾರ ಇಲ್ಲಿನ ಸ್ಥಳೀಯ ಕೋರ್ಟ್​ಗೆ ಹಾಜರಾದ ಶರ್ಮಾ ಹೇಳಿದ್ದಾರೆ. 



ಶರ್ಮಾ ಅವರು ಎಸಿಬಿ ಕೋರ್ಟ್​ನಲ್ಲಿ ಇದೇ ಹೇಳಿಕೆ ನೀಡಿದ್ದರು. ಲಂಚದ ಆಮಿಷವೊಡ್ಡಿದಾಗ ನಾನು ಸುತಾರಾಂ ಒಪ್ಪಲಿಲ್ಲ ಎಂದು ಅವರು ಕೋರ್ಟ್​ಗೆ ತಿಳಿಸಿದ್ದರು. 



ಜಾಮೀನಿಗಾಗಿ ಲಂಚ ಪ್ರಕರಣದ ವಿಚಾರಣೆಯು ಇಲ್ಲಿನ ಸ್ಥಳೀಯ ಎಸಿಬಿ ಕೋರ್ಟ್​ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್​ 12ಕ್ಕೆ ಮುಂದಿನ ವಿಚಾರಣೆ ದಿನಾಂಕ ನಿಗದಿಪಡಿಸಲಾಗಿದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.