ETV Bharat / bharat

ಹೊಲದಲ್ಲಿ ಆನೆಯ ಮೃತದೇಹ ಪತ್ತೆ: ವಿದ್ಯುತ್ ತಂತಿ​ ತಗುಲಿ ಮೃತಪಟ್ಟಿರುವ ಶಂಕೆ

author img

By

Published : Jun 17, 2020, 11:58 AM IST

ಕೇರಳದಲ್ಲಿ ಗರ್ಭಿಣಿ ಆನೆಯ ಸಾವು ದೇಶಾದ್ಯಂತ ಸುದ್ದಿಯಾದ ಬಳಿಕ, ಆನೆಗಳ ಸಾವಿನ ಪ್ರಕರಣಗಳು ನಿತ್ಯ ವರದಿಯಾಗುತ್ತಲೇ ಇದ್ದು, ಇದೀಗ ಪಶ್ಮಿಮ ಬಂಗಾಳದ ರೈತರೊಬ್ಬರ ಹೊಲದಲ್ಲಿ ಆನೆಯ ಮೃತದೇಹವೊಂದು ಪತ್ತೆಯಾಗಿದೆ.

Elephant dies in West Bengal after coming contact with live wire
ಪಶ್ಚಿಮ ಬಂಗಾಳದಲ್ಲಿ ಹೊಲದಲ್ಲಿ ಆನೆಯ ಮೃತದೇಹ ಪತ್ತೆ

ಅಲಿಪುರ್ದಾರ್ (ಪಶ್ಚಿಮ ಬಂಗಾಳ) : ಕುರ್ಸಿಯಾಂಗ್ ಅರಣ್ಯ ವಿಭಾಗದ ಉತ್ತಮ್ ಚಾಂದ್​ ಚಾಟ್​ ಪ್ರದೇಶದ ಹೊಲದಲ್ಲಿ ಆನೆಯ ಮೃತದೇಹವೊಂದು ಪತ್ತೆಯಾಗಿದೆ.

ವಿದ್ಯುತ್​ ತಂತಿ ತಗುಲಿ ಆನೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿದ್ದು, ತನಿಖೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ದಕ್ಷಿಣ ರೇಡಾಕ್ ಶ್ರೇಣಿಯ ಮರಖಾಟ ಬೀಟ್‌ನ ಪಶ್ಚಿಮ ಚಾಂಗ್ಮರಿ ಗ್ರಾಮದ ನಿವಾಸಿ ರವೀಂದ್ರ ರೈ ಎಂಬುವವರ ಹೊಲದಲ್ಲಿ ಆನೆಯ ಮೃತದೇಹ ಪತ್ತೆಯಾಗಿದೆ. ರವೀಂದ್ರ ಅವರು ಬೆಳಗ್ಗೆ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಲಗಿದ ರೂಪದಲ್ಲಿ ಆನೆಯನ್ನು ಕಂಡಿದ್ದಾರೆ. ಆನೆ ಜೀವಂತ ಇದೆ ಎಂದು ತಿಳಿದು ಓಡಿ ಬಂದಿದ್ದರು. ಬಳಿಕ ಪಂಚಾಯತ್​ ಸದಸ್ಯರ ಮೂಲಕ ಕಸ್ಟಮ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಸ್ಟಮ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ವಿದ್ಯುತ್​ ತಗುಲಿ ಆನೆ ಸತ್ತಿರಬಹುದು ಎಂದು ಹೇಳಿದ್ದಾರೆ.

ಆನೆಯ ದೇಹದ ಮೇಲೆ ಸುಟ್ಟ ಗಾಯಗಳು ಕಂಡು ಬಂದಿರುವುದು ಅನುಮಾನ ಮೂಡಿಸುತ್ತಿದೆ. ವಿದ್ಯುತ್​ ತಂತಿ ಅಳವಡಿಸಿ ಆನೆಗಳನ್ನು ಸಾಯಿಸುವುದು ಅಪರಾಧ. ಪ್ರಕರಣದಲ್ಲಿ ತಪ್ಪಿತಸ್ಥರು ಕಂಡು ಬಂದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.