ETV Bharat / bharat

25 ಮಂದಿ ಪಿಎಫ್​ಐ ಕಾರ್ಯಕರ್ತರ ಬಂಧನ: ಸಂಘಟನೆ ನಿಷೇಧಿಸುವಂತೆ​ ಗೃಹ ಇಲಾಖೆಗೆ ಪತ್ರ

author img

By

Published : Jan 2, 2020, 8:25 AM IST

25 persons affiliated with PFI arrested,25 ಪಿಎಫ್​ಐ ಕಾರ್ಯಕರ್ತರ ಬಂಧನ
ಪ್ರವೀಣ್ ಕುಮಾರ್

ಉತ್ತರ ಪ್ರದೇಶದಲ್ಲಿ ಹಲವು ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ 25 ಪಿಎಫ್​ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದು, ಸಂಘಟನೆಯನ್ನು ಬ್ಯಾನ್ ಮಾಡುವಂತೆ ಪೊಲೀಸರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.

ಲಖನೌ (ಉತ್ತರ ಪ್ರದೇಶ): ವಿಭಿನ್ನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಗುರುತಿಸಿಕೊಂಡಿದ್ದ 25 ಜನರನ್ನು ಉತ್ತರ ಪ್ರದೇಶದಾದ್ಯಂತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಐಜಿ

ಪಿಎಫ್​ಐ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಒಟ್ಟು 25 ಜನರನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಐಜಿ ಪ್ರವೀಣ್ ಕುಮಾರ್​ ತಿಳಿಸಿದ್ದಾರೆ. ಅಲ್ಲದೆ ಡಿಸೆಂಬರ್​ 31ರಂದು ಉತ್ತರ ಪ್ರದೇಶದ ಡಿಜಿಪಿ ಓಪಿ ಸಿಂಗ್ ಪಿಎಫ್​ಐ ಸಂಘಟನೆಯನ್ನ ಬ್ಯಾನ್ ಮಾಡುವಂತೆ ಗೃಹ ಕಚೇರಿಗೆ ಪತ್ರ ಬರೆದಿದ್ದಾರೆ.

25 persons affiliated with PFI arrested,25 ಪಿಎಫ್​ಐ ಕಾರ್ಯಕರ್ತರ ಬಂಧನ
ಪಿಎಫ್​ಐ ಸಂಘಟನೆ

ಡಿಸೆಂಬರ್​ 19ರಂದು ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ(ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪಿಎಫ್​ಐ ಸಂಘಟನೆ ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಸಂಘಟನೆಯನ್ನ ಬ್ಯಾನ್​ ಮಾಡುವಂತೆ ಪತ್ರ ಬರೆದಿದ್ದಾರೆ. ಇನ್ನೂ ಕೂಡ ತನಿಖೆ ನಡೆಯುತ್ತಿದೆ ಎಂದು ಪ್ರವೀಣ್​ ಕುಮಾರ್ ಮಾಹಿತಿ ನೀಡಿದ್ದಾರೆ. 2006 ನವೆಂಬರ್​ 22 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ನವದೆಹಲಿಯಲ್ಲಿ ಸ್ಥಾಪಿಸಲ್ಪಟ್ಟಿದೆ.

Intro:Body:

Praveen Kumar, IG (Law & Order), Uttar Pradesh: 25 persons affiliated with Popular Front of India (PFI) have been arrested across the state, for their involvement in different criminal activities.



Uttar Pradesh Minister Mohsin Raza: Those who were involved with Students Islamic Movement of India (SIMI), after its ban made a new organisation Popular Front of India (PFI). They want to radicalise youth and push them towards terrorism.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.