ETV Bharat / bharat

37 ವರ್ಷಗಳ ಹಿಂದೆ 2 ರೂ. ಲಂಚ ಪಡೆದಿದ್ದ ಐವರು ಪೊಲೀಸರನ್ನು ಖುಲಾಸೆಗೊಳಿಸಿದ ಕೋರ್ಟ್​

author img

By

Published : Aug 3, 2023, 12:08 PM IST

ಅಕ್ರಮ ಹಣ ವಸೂಲಿಗೆ ಸಂಬಂಧಿಸಿದಂತೆ 37 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಿಹಾರದ ಭಾಗಲ್ಪುರ ನ್ಯಾಯಾಲಯವು ಐವರು ಪೊಲೀಸರನ್ನು ಖುಲಾಸೆಗೊಳಿಸಿದೆ. 1986 ರಲ್ಲಿ ಐವರು ಪೊಲೀಸರ ವಿರುದ್ಧ ಅಕ್ರಮ ಸುಲಿಗೆ ಪ್ರಕರಣ ದಾಖಲಾಗಿತ್ತು.

court
ಕೋರ್ಟ್​

ಭಾಗಲ್ಪುರ (ಬಿಹಾರ) : ಇದು 10 ಜೂನ್ 1986 ರ ರಾತ್ರಿ ಸಂಭವಿಸಿದ ಘಟನೆ. ಬೇಗುಸರಾಯ್ ಜಿಲ್ಲೆಯಲ್ಲಿ ಅಧಿಕಾರಿಗಳು ಸೇರಿದಂತೆ ಐವರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಎಸ್​ಪಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ಎಸ್​ಪಿ ಸ್ಥಳಕ್ಕೆ ಆಗಮಿಸಿದಾಗ ಅಕ್ರಮವಾಗಿ ಎರಡು ರೂಪಾಯಿ ವಸೂಲಿ ಮಾಡುತ್ತಿದ್ದ ಕಾನ್ಸ್​ಟೇಬಲ್​ಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಭಾಗಲ್ಪುರ ನ್ಯಾಯಾಲಯ ಬರೋಬ್ಬರಿ 37 ವರ್ಷಗಳ ನಂತರ ಕೇಸ್​ ಖುಲಾಸೆಗೊಳಿಸಿದೆ.

37 ವರ್ಷಗಳ ಬಳಿಕ ಬಿಡುಗಡೆ : ಘಟನೆ ಬಳಿಕ ಎಲ್ಲ ಪೊಲೀಸರ ವಿರುದ್ಧ ಮುಫಸ್ಸಿಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಷಯ ಕೆಳ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದಾದ ಬಳಿಕ ಹಲವು ಬಾರಿ ವಿಚಾರಣೆ ನಡೆದು 37 ವರ್ಷಗಳ ಬಳಿಕ ಐವರು ಪೊಲೀಸರನ್ನು ಬಿಡುಗಡೆಗೊಳಿಸಲಾಗಿದೆ. ರಾಮ್ ರತನ್ ಶರ್ಮಾ, ಕೈಲಾಶ್ ಶರ್ಮಾ, ಜ್ಞಾನಿ ಶಂಕರ್, ಯುಗೇಶ್ವರ್ ಮಹ್ತೋ ಮತ್ತು ರಾಮ್ ಬಾಲಕ್ ರಾಯ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಇದನ್ನೂ ಓದಿ : ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ !

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಲ್ಲರನ್ನು ಕೇಸ್​ನಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಷನ್ ಕಡೆಯಿಂದ ನ್ಯಾಯಾಲಯಕ್ಕೆ ಆರೋಪಿಗಳು ಭಾಗಿಯಾಗಿರುವುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಎಲ್ಲರನ್ನೂ ಖುಲಾಸೆಗೊಳಿಸಿದೆ.

ಇದನ್ನೂ ಓದಿ : ವರ್ಗಾವಣೆಯಲ್ಲಿ ಲಂಚ ಪಡೆದಿದ್ದೇನೆ ಎಂದು ಯಾರಾದ್ರು ಹೇಳಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ : ಸಿಎಂ ಸಿದ್ದರಾಮಯ್ಯ

ಪ್ರಕರಣದ ಹಿನ್ನೆಲೆ : ಬೇಗುಸರಾಯ್‌ನ ಅಂದಿನ ನಗರ ವೃತ್ತ ನಿರೀಕ್ಷಕ ಸರಯೂ ಬೈಠಾ ಅವರು ಅಕ್ರಮ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಬೇಗುಸರಾಯ್ ಎಸ್​ಪಿ ಅರವಿಂದ್ ವರ್ಮಾ ಅವರು ಲಾಖೋ ಪೋಸ್ಟ್‌ ಬಳಿ ನಿಯೋಜಿಸಿದ ಅಧಿಕಾರಿಗಳು ಮತ್ತು ಕಾನ್ಸ್​ಟೇಬಲ್​ಗಳು ವಾಹನಗಳಿಂದ ಅಕ್ರಮ ವಸೂಲಿ ಮಾಡುತ್ತಿದ್ದಾರೆ ಎಂದು ಬೈಠಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು. ಜೊತೆಗೆ, ಎಸ್‌ಪಿ ಸ್ಥಳಕ್ಕೆ ತೆರಳಿ ತನಿಖೆ ನಡೆಸುವಂತೆ ಸೂಚಿಸಿದ್ದರು.

ಕೂಡಲೇ ಬೇಗುಸರಾಯ್‌ನ ಅಂದಿನ ಎಸ್‌ಪಿ ಅರವಿಂದ್‌ ವರ್ಮಾ ಟ್ರಕ್‌ ತಡೆದು ಅದರಲ್ಲಿ ತೆರಳಿದ್ದರು. ಟ್ರಕ್ ಪೋಸ್ಟ್ ಬಳಿ ತಲುಪಿದಾಗ ಅಲ್ಲಿ ನಿಯೋಜಿಸಲಾದ ಸಿಬ್ಬಂದಿ ವಾಹನ ತಡೆದಿದ್ದು, ಬಳಿಕ ಎರಡು ರೂಪಾಯಿ ನೋಟು ವಸೂಲಿ ಮಾಡಿಕೊಂಡಿದ್ದರು. ಸಿಬ್ಬಂದಿ ತನ್ನ ಜೇಬಿನಲ್ಲಿ ನೋಟು ಇಟ್ಟುಕೊಂಡಿದ್ದನ್ನು ಎಸ್​ಪಿ ಪತ್ತೆಹಚ್ಚಿದ್ದರು.

ಇದನ್ನೂ ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ವಿಲೇಜ್ ಫೀಲ್ಡ್ ಅಸಿಸ್ಟೆಂಟ್ ​​: ಬಾಡಿಗೆ ಮನೆಯಲ್ಲಿ ಪತ್ತೆಯಾಯ್ತು 17 ಕೆಜಿ ಚಿನ್ನಾಭರಣ, ಕೋಟಿ ಹಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.