ETV Bharat / bharat

34 ಗಂಟೆಯಲ್ಲಿ 472 KM ಸೈಕ್ಲಿಂಗ್... ಲೆಫ್ಟಿನೆಂಟ್ ಕರ್ನಲ್ ಗಿನ್ನಿಸ್ ದಾಖಲೆ

author img

By

Published : Sep 26, 2021, 8:15 PM IST

ಲೆಫ್ಟಿನೆಂಟ್ ಕರ್ನಲ್ ಶ್ರೀರಾಮ್ ಸೆಪ್ಟೆಂಬರ್ 26 ರಂದು ಲೇಹ್‌ನಿಂದ ಮನಾಲಿಗೆ (ಹಿಮಾಚಲ ಪ್ರದೇಶದಲ್ಲಿ) 'ವೇಗದ ಸೋಲೊ ಸೈಕ್ಲಿಂಗ್ - (ಪುರುಷರು)' ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 472 ಕಿಮೀ ದೂರವನ್ನು 34 ಗಂಟೆಗಳು ಮತ್ತು 54 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಈ ಸಾಧನೆಗೈದಿದ್ದಾರೆ.

ವೇಗದ ಸೊಲೊ ಸೈಕ್ಲಿಂಗ್​ನಲ್ಲಿ ಲೆಫ್ಟಿನೆಂಟ್ ಕರ್ನಲ್ ಗಿನ್ನಿಸ್ ವಿಶ್ವ ದಾಖಲೆ
ಲೆಫ್ಟಿನೆಂಟ್ ಕರ್ನಲ್ ಶ್ರೀರಾಮ್

ಜಮ್ಮು & ಕಾಶ್ಮೀರ: ಭಾರತೀಯ ಸೇನಾ ಅಧಿಕಾರಿಯು ಲೇಹ್‌ನಿಂದ ಮನಾಲಿಯವರೆಗೆ 472 ಕಿಮೀ ದೂರವನ್ನು 34 ಗಂಟೆಗಳು ಮತ್ತು 54 ನಿಮಿಷಗಳಲ್ಲಿ ಕ್ರಮಿಸುವ ಮೂಲಕ 'ವೇಗದ ಸೋಲೊ ಸೈಕ್ಲಿಂಗ್ - (ಪುರುಷರು)' ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ಭಾನುವಾರ ತಿಳಿಸಿದ್ದಾರೆ.

ಕಾರ್ಯತಂತ್ರದ ಸ್ಟ್ರೈಕರ್ಸ್ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಅವರು ಶನಿವಾರ ಬೆಳಿಗ್ಗೆ 4 ಗಂಟೆಗೆ ಲಡಾಖ್​ನ ಲೇಹ್​ನಿಂದ ಸೈಕ್ಲಿಂಗ್ ಆರಂಭಿಸಿದರು ಎಂದು ಹೇಳಿದರು.

ಲೆಫ್ಟಿನೆಂಟ್ ಕರ್ನಲ್ ಶ್ರೀರಾಮ್ ಸೆಪ್ಟೆಂಬರ್ 26 ರಂದು ಲೇಹ್‌ನಿಂದ ಮನಾಲಿಗೆ (ಹಿಮಾಚಲ ಪ್ರದೇಶದಲ್ಲಿ) 'ವೇಗದ ಸೋಲೊ ಸೈಕ್ಲಿಂಗ್ - (ಪುರುಷರು)' ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಎಂದು ವಕ್ತಾರರು ಮಾಹಿತಿ ನೀಡಿದರು.

ವೇಗದ ಸೊಲೊ ಸೈಕ್ಲಿಂಗ್​ನಲ್ಲಿ ಲೆಫ್ಟಿನೆಂಟ್ ಕರ್ನಲ್ ಗಿನ್ನಿಸ್ ವಿಶ್ವ ದಾಖಲೆ
ಲೆಫ್ಟಿನೆಂಟ್ ಕರ್ನಲ್ ಶ್ರೀರಾಮ್

ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಐದು ಪ್ರಮುಖ ಪಾಸ್‌ಗಳನ್ನು ದಾಟಿದ ಅಧಿಕಾರಿ 34 ಗಂಟೆ 54 ನಿಮಿಷಗಳಲ್ಲಿ 472 ಕಿಮೀ ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕಾರ್ಯಕ್ರಮವು 'ಸ್ವರ್ಣ ವಿಜಯ್ ವರ್ಷ'('Swarnim Vijay Varsh') ಆಚರಣೆಯ ಭಾಗವಾಗಿದೆ ಮತ್ತು 195 ನೇ ಗನ್ನರ್ಸ್​(Gunners) ದಿನವನ್ನು ಆಚರಿಸಲಾಗುತ್ತದೆ ಎಂದು ವಕ್ತಾರರು ತಿಳಿಸಿದರು.

1971 ರ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧದ ವಿಜಯದ 50 ನೇ ವಾರ್ಷಿಕೋತ್ಸವವನ್ನು ಭಾರತವು 'ಸ್ವರ್ಣ ವಿಜಯ್ ವರ್ಷ' ಎಂದು ಆಚರಿಸುತ್ತಿದೆ.

ಓದಿ: ಕೆಕೆಆರ್​ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್​ ಕಿಂಗ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.