ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಕೇಸ್​.. ಮಹಿಳೆಯ ಹೊದಿಕೆ ಮೇಲೆ ಕುಡಿದ ನಶೆಯಲ್ಲಿ ಯೂರಿನ್

author img

By

Published : Jan 5, 2023, 6:22 PM IST

another-mid-air-peeing-incident-drunk-man-on-urinated-on-woman-blanket

ವಿಮಾನದಲ್ಲಿ ಪ್ರಯಾಣಿಕರ ದುರ್ವತನೆಯ ಮತ್ತೊಂದು ಪ್ರಕರಣ ಬಯಲು - ಮಹಿಳೆಯ ಹೊದಿಕೆ ಮೇಲೆ ಮೂತ್ರ ವಿಸರ್ಜನೆ - ಕುಡಿದ ನಶೆಯಲ್ಲಿ ವ್ಯಕ್ತಿಯಿಂದ ಕೃತ್ಯ - ತಪ್ಪಿನ ಅರಿವಾಗಿ ಕ್ಷಮೆಯಾಚನೆ

ನವದೆಹಲಿ: ವಿಮಾನದಲ್ಲಿ ಮಹಿಳೆಯ ಮೇಲೆ ಕುಡಿದ ನಶೆಯಲ್ಲಿದ್ದ ಪ್ರಯಾಣಿಕನೋರ್ವ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ವಿಲಕ್ಷಣ ಪ್ರಕರಣ ವರದಿಯಾಗಿದೆ. ಆದರೆ, ಈ ಪ್ರಕರಣದ ಆರೋಪಿಯು ತನ್ನ ತಪ್ಪಿನ ಅರಿವಾಗಿ ಮಹಿಳೆಯ ಬಳಿ ಲಿಖಿತ ಕ್ಷಮೆಯಾಚನೆ ಮಾಡಿದ್ದಾನೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಹೌದು, ಏರ್​ ಇಂಡಿಯಾ ವಿಮಾನದಲ್ಲಿ ಕಳೆದ ನವೆಂಬರ್​ 16ರಂದು ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಇದೇ ಏರ್​ ಇಂಡಿಯಾದ ಪ್ಯಾರಿಸ್​ ಮತ್ತು ದೆಹಲಿ ವಿಮಾನದಲ್ಲಿ ಡಿ.6ರಂದು ಕೂಡ ಇಂತಹದ್ದೇ ಘಟನೆ ನಡೆದಿರುವುದು ವರದಿಯಾಗಿದೆ.

ಹೊದಿಕೆ ಮೇಲೆ ಮೂತ್ರ ವಿಸರ್ಜನೆ: ಪ್ಯಾರಿಸ್​ ಮತ್ತು ದೆಹಲಿ ನಡುವಿನ ಏರ್ ಇಂಡಿಯಾ ವಿಮಾನ-142ರಲ್ಲಿ ಕುಡಿದ ಮತ್ತಿನಲ್ಲಿದ್ದ ಪುರುಷ ಪ್ರಯಾಣಿಕನು ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವಿಷಯವನ್ನು ವಿಮಾನದ ಪೈಲಟ್ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಗೆ ವರದಿ ಮಾಡಿದ್ದಾರೆ. ಇದರ ನಂತರ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನವು ಅಂದು ಬೆಳಗ್ಗೆ 9:40ರ ಸುಮಾರಿಗೆ ದೆಹಲಿಗೆ ಬಂದಿಳಿದಿತ್ತು. ಆಗ ಆರೋಪಿ ಪ್ರಯಾಣಿಕ ಕುಡಿತದ ಅಮಲಿನಲ್ಲಿದ್ದ. ಅಲ್ಲದೇ, ವಿಮಾನದ ಕ್ಯಾಬಿನ್ ಸಿಬ್ಬಂದಿಯ ಮಾತುಗಳನ್ನೂ ಕೇಳುತ್ತಿರಲಿಲ್ಲ. ಅಲ್ಲದೇ, ವಿಮಾನದಲ್ಲಿದ್ದ ಮಹಿಳೆಯ ಹೊದಿಕೆಯ ಮೇಲೆ ಆರೋಪಿಯು ಮೂತ್ರ ವಿಸರ್ಜಿಸಿದ್ದರು ಎಂಬುವುದಾಗಿ ವಿಮಾನ ನಿಲ್ದಾಣದ ಭದ್ರತೆಗೆ ಮಾಹಿತಿ ನೀಡಲಾಗಿತ್ತು.

ಹೀಗಾಗಿಯೇ ಆರೋಪಿ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿದ ಕೂಡಲೇ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಸಿಬ್ಬಂದಿ ಬಂಧಿಸಿದ್ದರು. ಆದರೆ, ಇಬ್ಬರು ಪ್ರಯಾಣಿಕರು ಪರಸ್ಪರ ರಾಜಿ ಮಾಡಿಕೊಂಡರು. ಇದಾದ ನಂತರ ಆರೋಪಿಯು ಲಿಖಿತ ಕ್ಷಮೆಯಾಚನೆಯನ್ನೂ ಸಲ್ಲಿಸಿದೆ. ಆದ್ದರಿಂದ ಆತನನ್ನು ಬಿಡುಗಡೆ ಮಾಡಲು ಅನುಮತಿಸಲಾಯಿತು. ಇದಕ್ಕೂ ಮುನ್ನ ಎಂದರೆ ಆರಂಭದಲ್ಲಿ ಲಿಖಿತ ದೂರು ನೀಡಿದ ಮಹಿಳೆಯು ನಂತರ ಪೊಲೀಸ್ ಕೇಸ್ ದಾಖಲಿಸಲು ಸಹ ನಿರಾಕರಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ನವೆಂಬರ್ 26ರಂದು ನ್ಯೂಯಾರ್ಕ್ ಮತ್ತು ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆಯೇ ಸಹ ಪ್ರಯಾಣಿಕನೋರ್ವ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ಸಂತ್ರಸ್ತೆ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ನೀಡಿದ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ದೆಹಲಿ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಮಾನ ಸಿಬ್ಬಂದಿ ಕ್ರಮ ಜರುಗಿದ ಆರೋಪ: ಈ ಘಟನೆಯಲ್ಲಿ ವಿಮಾನ ಸಿಬ್ಬಂದಿ ಕ್ರಮ ಜರುಗಿಸಿದ ಆರೋಪವನ್ನೂ ಮಹಿಳೆ ಮಾಡಿದ್ದರು. ಅಂದು ಊಟದ ಬಳಿಕ ವಿಮಾನದಲ್ಲಿ ಲೈಟ್​ಗಳನ್ನು ತೆಗೆಯಲಾಗಿತ್ತು. ಆಗ ಪುರುಷ ಪ್ರಯಾಣಿಕರೊಬ್ಬರು ಬಂದು ಪ್ಯಾಂಟ್​ ಜಿಪ್​ ತೆಗೆದು ಮೂತ್ರ ವಿಸರ್ಜನೆಗೆ ಮಾಡಿದ್ದರು. ಈತನ ವರ್ತನೆ ಬಗ್ಗೆ ಮೊದಲೇ ನಾನು ವಿಮಾನ ಸಿಬ್ಬಂದಿಗೆ ತಿಳಿಸಿದ್ದೆ. ಆದರೆ, ಆತನನ್ನು ತಡೆಯಲು ಸಿಬ್ಬಂದಿ ಮುಂದಾಗಲಿಲ್ಲ. ಇದರ ಪರಿಣಾಮ ಆರೋಪಿಯು ದುರ್ವತನೆ ತೋರಿದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಆರೋಪಿಯು ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ ಪುರುಷ ಪ್ರಯಾಣಿಕ; ಏರ್​ ಇಂಡಿಯಾದಲ್ಲಿ ಘಟನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.