ETV Bharat / bharat

ಇಂದಿನಿಂದ ಅಮುಲ್ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಳ.. ಗ್ರಾಹಕರ ಜೇಬಿಗೆ ಕತ್ತರಿ

author img

By

Published : Apr 1, 2023, 12:29 PM IST

ಕಳೆದ ಆರು ತಿಂಗಳ ಅಲ್ಪಾವಧಿಯಲ್ಲಿ ಅಮುಲ್ ಎರಡನೇ ಬಾರಿಗೆ ಬೆಲೆಗಳನ್ನು ಹೆಚ್ಚಿಸಿದೆ. ಹೀಗಾಗಿ, ಅಮುಲ್ ಗೋಲ್ಡ್ ಪ್ರತಿ ಲೀಟರ್‌ಗೆ 64 ರೂ., ಅಮುಲ್ ಶಕ್ತಿ ಲೀಟರ್‌ಗೆ 58 ರೂ. ಮತ್ತು ಅಮುಲ್ ತಾಜಾ ಹಾಲು ಲೀಟರ್‌ಗೆ 52 ರೂ.ಗೆ ಏರಿಕೆಯಾಗಿದೆ.

Amul Milk
ಅಮುಲ್

ವಡೋದರಾ(ಗುಜರಾತ್​): ಕಳೆದ ಆರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಅಮುಲ್‌ ಹಾಲಿನ ದರದಲ್ಲಿ ಏರಿಕೆಯಾಗಿದೆ. ತಾಜ್, ಶಕ್ತಿ, ಟೀ ಸ್ಪೆಷಲ್, ಹಸುವಿನ ಹಾಲು, ಚಾ ಮಜಾ, ಸ್ಲಿಮ್ ಅಂಡ್​ ಸ್ಟ್ರೀಮ್, ಎ ಟೂನ್ ಹಸು ಹಾಲು, ಎಮ್ಮೆ ಹಾಲು ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳು ಲೀಟರ್‌ಗೆ 2 ರೂ. ನಂತೆ ಹೆಚ್ಚಳ ಮಾಡಲಾಗಿದೆ. ಇಂದಿನಿಂದಲೇ ( ಏಪ್ರಿಲ್ 1) ಈ ಆದೇಶ ಜಾರಿಗೆ ಬಂದಿದೆ.

ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಪಶುಪಾಲನೆ ಹಿತದೃಷ್ಟಿಯಿಂದ ಹಾಲಿನ ಖರೀದಿ ದರವನ್ನು ಹೆಚ್ಚಿಸಿದೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ ಮತ್ತು ಅಮುಲ್ ತಾಜಾ ಸೇರಿದಂತೆ ಎಲ್ಲಾ ಹಾಲಿನ ಬೆಲೆಯು ಲೀಟರ್‌ಗೆ ರೂ 2 ಏರಿಕೆಯಾಗಿದೆ. ಜಾನುವಾರುಗಳ ಮೇವಿನ ಬೆಲೆ, ಸಾಗಾಣಿಕೆ ವೆಚ್ಚ ಸೇರಿದಂತೆ ಇತರ ಖರ್ಚು ವೆಚ್ಚದಲ್ಲಿ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆ ಮಾಡಲಾಗಿದೆ. ಜೊತೆಗೆ, ಪ್ರತಿ ಜಾನುವಾರು ಸಾಕಣೆದಾರರಿಗೆ ಅಮುಲ್​ 2 ಲಕ್ಷ ರೂ.ಗಳ ಜೀವ ವಿಮೆಯನ್ನು ನೀಡಲು ಮುಂದಾಗಿದೆ ಎಂದು ಎಂದು ಫೆಡರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್​ ಹಾಲಿನ ದರದಲ್ಲಿ ಲೀಟರ್​ಗೆ 2 ರೂ. ಏರಿಕೆ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಮುಲ್ ಅಧ್ಯಕ್ಷ ವಿಪುಲ್ ಪಟೇಲ್, "ಏಪ್ರಿಲ್ 1 ರಿಂದ ಹಾಲಿನ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಜೊತೆಗೆ, ಹಾಲು ಉತ್ಪಾದಕರಿಗೆ ಜೀವ ವಿಮೆಯನ್ನು ಸಹ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಅಮೂಲ್​, ಮದರ್​ ಡೈರಿ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ

ಅರ್ಧ ಲೀಟರ್ ಅಮುಲ್ ಗೋಲ್ಡ್ ಪ್ಯಾಕೆಟ್​ನ ಹಳೆಯ ಬೆಲೆ 31 ರೂ. ಇದ್ದು, ಈಗ 32 ರೂ. ಗೆ ಏರಿಕೆಯಾಗಿದೆ. ಅಮುಲ್ ಶಕ್ತಿಯ ಹಿಂದಿನ ಬೆಲೆ 28 ರೂ. ಆಗಿದ್ದು ಈಗ 29 ರೂ.ಗೆ ಹೆಚ್ಚಳವಾಗಿದೆ. ಅಮುಲ್ ಎಮ್ಮೆ ಹಾಲಿನ ಹಳೆ ಬೆಲೆ 32 ಇದ್ದು ಈಗ 34 ಆಗಿದೆ. ಸ್ಲಿಮ್ ಮತ್ತು ಟ್ರಿಮ್ ಮೊದಲು 22 ರೂ.ಗೆ ಲಭ್ಯವಿತ್ತು. ಈಗ 23 ರೂ.ಗೆ ದೊರೆಯುತ್ತಿದೆ. ಅಮುಲ್ ಟೀ ಸ್ಪೆಷಲ್ 30 ರೂ.ಗೆ ಲಭ್ಯವಾಗಲಿದೆ. 25 ರೂಪಾಯಿಗೆ ಸಿಗುತ್ತಿದ್ದ ಅಮುಲ್ ತಾಜ್ ಈಗ 26 ರೂಪಾಯಿಗೆ ಸಿಗಲಿದೆ. ಹಸುವಿನ ಹಾಲು ಈ ಹಿಂದೆ 26 ರೂ.ಗೆ ಲಭ್ಯವಿದ್ದು, 27 ರೂ.ಗೆ ಏರಿಕೆಯಾಗಿದೆ. 25ಕ್ಕೆ ಸಿಗುತ್ತಿದ್ದ ಅಮುಲ್ ಚಾ ಮಜಾ ಬೆಲೆ ಏರಿಕೆ ನಂತರ 26 ರೂ.ಗೆ ದೊರೆಯುತ್ತಿದೆ.

ಇದನ್ನೂ ಓದಿ : ಬೆಳಂ ಬೆಳಗ್ಗೆ ಗ್ರಾಹರಿಕೆ ಅಮುಲ್​ ಶಾಕ್​: ಗುಜರಾತ್​ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಹಾಲಿನ ಬೆಲೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.