ETV Bharat / bharat

ಬೆಳಂ ಬೆಳಗ್ಗೆ ಗ್ರಾಹರಿಕೆ ಅಮುಲ್​ ಶಾಕ್​: ಗುಜರಾತ್​ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಹಾಲಿನ ಬೆಲೆ ಏರಿಕೆ

author img

By

Published : Feb 3, 2023, 12:34 PM IST

ಅಮುಲ್​ ಹೊಸ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದ್ದು, ಬೆಳಂಬೆಳಗ್ಗೆ ಹಾಲು ಖರೀದಿಸಲು ಹೋದವರಿಗೆ ಬಿಗ್​ ಶಾಕ್​ ನೀಡಿದೆ.

Amul hike milk prices in all the states except Gujarath
ಬೆಳಂ ಬೆಳಗ್ಗೆ ಗ್ರಾಹರಿಕೆ ಶಾಕ್​ ನೀಡಿದ ಅಮುಲ್

ಗುಜರಾತ್: ಬುಧವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಸಾರ್ವತ್ರಿಕ ಬಜೆಟ್‌ ಎಫೆಕ್ಟ್​ ಒಂದೊಂದೇ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದ್ದು, ಇಂದು ಬೆಳಗ್ಗೆ ಬೆಳಗ್ಗೆ ಅಮುಲ್​ ಕಂಪನಿ ತನ್ನ ಗ್ರಾಹಕರಿಗೆ ಬಿಗ್​ ಶಾಕ್​ ಒಂದನ್ನು ನೀಡಿದೆ.

ಅಮುಲ್ ಬ್ರಾಂಡ್ ಹೆಸರಿನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಶುಕ್ರವಾರ ಗುಜರಾತ್ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್​ಗೆ 2 ರೂಪಾಯಿ ಏರಿಕೆ ಮಾಡಿದೆ. ಈ ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದೆ.

  • Amul has increased prices of Amul pouch milk (All variants) by Rs 3 per litre: Gujarat Cooperative Milk Marketing Federation Limited pic.twitter.com/At3bxoGNPW

    — ANI (@ANI) February 3, 2023 " class="align-text-top noRightClick twitterSection" data=" ">

ಆನಂದ್ ಪ್ರಧಾನ ಕಛೇರಿಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಮಾತನಾಡಿ, ಹಾಲಿನ ಬೆಲೆ ಏರಿಕೆ ಗುಜರಾತ್‌ಗೆ ಅನ್ವಯಿಸುವುದಿಲ್ಲ. ನಾವು ಗುಜರಾತ್ ಹೊರತುಪಡಿಸಿ ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ಇತರ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದ್ದೇವೆ. ಸದ್ಯಕ್ಕೆ ಗುಜರಾತ್‌ನಲ್ಲಿ ಹಾಲಿನ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ತಿಳಿಸಿದ್ದಾರೆ.

ಹೊಸ ಬೆಲೆಗಳು ಶುಕ್ರವಾರ ಬೆಳಗ್ಗೆಯಿಂದಲೇ ಅಂದರೆ ಇಂದಿನಿಂದಲೇ ಜಾರಿಗೆ ಬರುತ್ತವೆ. ಬೆಲೆ ಏರಿಕೆಯೊಂದಿಗೆ ಇಂದಿನಿಂದ ಅಮುಲ್ ತಾಜಾ ಹಾಲಿನ ಒಂದು ಲೀಟರ್ ಪೌಚ್ ಬೆಲೆ 54 ರೂ ಆಗಿದ್ದರೆ, ಒಂದು ಲೀಟರ್ ಅಮುಲ್ ಗೋಲ್ಡ್ ರೂ 66 ಕ್ಕೆ ಮಾರಾಟವಾಗಲಿದೆ. ಒಂದು ಲೀಟರ್ ಹಸುವಿನ ಹಾಲಿನ ಬೆಲೆ ರೂ 56, ಅಮುಲ್ ಎ2 ಎಮ್ಮೆಯ ಹಾಲಿನ ಪೌಚ್ ರೂ 70ಕ್ಕೆ ಮಾರಾಟವಾಗುತ್ತಿದೆ. ಎಂದು ಜಿಸಿಎಂಎಂಎಫ್ ತನ್ನ ಮುಂಬೈ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಅಮೂಲ್​ ಹಾಲಿನ ಉತ್ಪನ್ನಗಳ ಹೊಸ ಬೆಲೆ ಇಂತಿದೆ

ಅಮೂಲ್ ತಾಜಾ ಹಾಲು : ಲೀಟಟರ್​ಗೆ 54 ರೂ

ಅಮೂಲ್ ಗೋಲ್ಡ್ : 66 ರೂ

ಅಮೂಲ್ ಹಸು ಹಾಲು : 56 ರೂ

ಅಮೂಲ್ ಎ2 ಎಮ್ಮೆ ಹಾಲು: 70 ರೂ

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಆದ್ದರಿಂದ ರೈತರಿಗೆ ಹೆಚ್ಚಿನ ದರ ನೀಡಬೇಕಾಗಿದೆ. ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ಇನ್ನು ಹಾಲಿನ ದರದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಸಹಜವಾಗಿ ಬೆಸಿಗೆಯಲ್ಲಿ ಹಾಲು ಉತ್ಪಾದಕ ಕಂಪನಿಗಳು, ರೈತರಿಗೆ ಹೆಚ್ಚಿನ ಬೆಲೆ ನೀಡುತ್ತವೆ.

ಕಳೆದ ವರ್ಷವೂ ಹಾಲಿನ ಬೆಲೆ ಏರಿಕೆ ​: ಮಾರ್ಚ್ 5 ಮತ್ತು ಡಿಸೆಂಬರ್ 27, 2022 ರ ನಡುವೆ ಮದರ್ ಡೈರಿಯ ಬೆಲೆ ಪ್ರತಿ ಲೀಟರ್‌ಗೆ 57 ರೂಪಾಯಿಯಿಂದ 66 ರೂಪಾಯಿಗೆ ಏರಿಕೆ ಮಾಡಿತ್ತು. 2022 ರಲ್ಲಿ ಪಶು ಆಹಾರದ ಬೆಲೆಯಲ್ಲೂ ಕೂಡಾ ಗಮನಾರ್ಹವಾಗಿ ಹೆಚ್ಚಳವಾಗಿದೆ. ಮತ್ತೊಂದು ಕಡೆ ದೇಶದ ಹಲವಾರು ಸ್ಥಳಗಳಿಗೆ ಹರಡಿರುವ ಚರ್ಮ ಗಂಟು ಕಾಯಿಲೆಯು ಜಾನುವಾರುಗಳನ್ನು ಸಾಕಷ್ಟು ಬಾಧಿಸಿದೆ. ಈ ರೋಗವು ಸಾವಿರಾರು ಹಸುಗಳ ಪ್ರಾಣ ಹಿಂಡಿದೆ. ಇದರಿಂದಲೂ ಹಾಲಿನ ಉತ್ಪಾದನೆ ಕಡಿಮೆಯಾಗಿದೆ.

ಇದನ್ನೂ ಓದಿ: ಅಮುಲ್ ಜೊತೆ ನಂದಿನಿ ವಿಲೀನವಿಲ್ಲ, 100 ವರ್ಷವಾದರೂ ನಂದಿನಿ ಅಸ್ತಿತ್ವ ಇರಲಿದೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.