ETV Bharat / bharat

ಅಮಿತಾಬ್ ಬಚ್ಚನ್ ಕೋವಿಡ್​ ರಿಪೋರ್ಟ್​ ನೆಗೆಟಿವ್​..ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ

author img

By

Published : Sep 1, 2022, 4:29 PM IST

Updated : Sep 1, 2022, 5:30 PM IST

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಕೋವಿಡ್​ ರಿಪೋರ್ಟ್​ ನೆಗೆಟಿವ್ ಬಂದಿದೆ. ಹೀಗಾಗಿ, ಅವರು ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಮುಂಬೈ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ ಅವರು ಪುನಃ ಕೆಲಸಕ್ಕೆ ಮರಳಿದ್ದಾರೆ ಎಂದು ಗುರುವಾರ ಹೇಳಿಕೊಂಡಿದ್ದಾರೆ. ಆಗಸ್ಟ್​ 24ರಂದು ನಟನಿಗೆ ಪಾಸಿಟಿವ್ ದೃಢಪಟ್ಟಿತ್ತು.

ಈ ಬಗ್ಗೆ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಅವರು, "ಬ್ಯಾಕ್ ಟು ವರ್ಕ್​..ಯುವರ್​ ಪ್ರೆಯರ್ಸ್​, ಗ್ರಾಟಿಟ್ಯೂಡ್​..ನೆಗೆಟಿವ್ ಲಾಸ್ಟ್​ ನೈಟ್​..ಅಂಡ್​ 9 ಡೇಸ್​ ಈಸೋಲೇಷನ್ ಓವರ್​.. ಮಾಂಡಿಡೇಟರಿ ಈಸ್​ 7 ಡೇಸ್​..'' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.

ಜುಲೈ 2020 ಆಗಸ್ಟ್​ 24ರಂದು ಬಚ್ಚನ್​ ಸೇರಿ ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ ಅವರೂ ಕೂಡಾ ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ಓದಿ: 2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ಶೇ 7.7ಕ್ಕೆ ಕಡಿತ

Last Updated :Sep 1, 2022, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.