ETV Bharat / bharat

ಆರ್ಟಿಕಲ್​ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರ ಸುರಕ್ಷಿತ.. ಅಮಿತ್​ ಶಾ ಬಣ್ಣನೆ

author img

By

Published : Oct 4, 2022, 3:57 PM IST

ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ವರ್ಷದಲ್ಲಿ ವರದಿಯಾದ 4,767 ಉಗ್ರಗಾಮಿ ಸಂಬಂಧಿತ ಘಟನೆಗಳ ಹಿಂದಿನ ಅಂಕಿ - ಅಂಶಗಳಿಗೆ ಹೋಲಿಸಿದರೆ, 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈ ಸಂಖ್ಯೆ 721ಕ್ಕೆ ಇಳಿದಿದೆ ಎಂದು ಅಮಿತ್​ ಶಾ ಮಾಹಿತಿ ನೀಡಿದ್ದಾರೆ.

Union Home Minister Amit Shah
ಕೇಂದ್ರ ಗೃಹ ಸಚಿವ ಅಮಿತ್​ ಶಾ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 370ನೇ ವಿಧಿಯನ್ನು ರದ್ದುಪಡಿಸಿದ ನಂತರದಲ್ಲಿ ಉಗ್ರಗಾಮಿ ಸಂಬಂಧಿತ ಘಟನೆಗಳು ಕಡಿಮೆಯಾಗಿದೆ. ಇದರಿಂದಾಗಿ ಈಗ ಜಮ್ಮು ಮತ್ತು ಕಾಶ್ಮೀರವು ಅತ್ಯಂತ ಸುರಕ್ಷಿತ ಸ್ಥಳವಾಗಿದೆ. 370ನೇ ವಿಧಿಯನ್ನು ಹಿಂದಕ್ಕೆ ಪಡೆದರೆ ಜಮ್ಮು ಕಾಶ್ಮೀರದಲ್ಲಿ ರಕ್ತ ಹರಿಯುತ್ತದೆ ಎಂದು ಹೇಳಿದ್ದರು. ಹಾಗೆ ಹೇಳಿದವರು ಹಿಂದೆ ಹಾಗೂ ಆರ್ಟಿಕಲ್​ 370ನ್ನು ರದ್ದುಪಡಿಸಿದ ನಂತರದ ಘಟನೆಗಳ ಅಂಕಿ - ಅಂಶಗಳನ್ನು ಗಮನಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.

ಇಂದು ರಜೌರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ವರ್ಷದಲ್ಲಿ ವರದಿಯಾದ 4,767 ಉಗ್ರಗಾಮಿ ಸಂಬಂಧಿತ ಘಟನೆಗಳ ಹಿಂದಿನ ಅಂಕಿ - ಅಂಶಗಳಿಗೆ ಹೋಲಿಸಿದರೆ, 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈ ಸಂಖ್ಯೆ 721ಕ್ಕೆ ಇಳಿದಿದೆ. ಭದ್ರತಾ ಪಡೆಗಳ ಸಿಬ್ಬಂದಿ ಹತ್ಯೆಯು ವರ್ಷಕ್ಕೆ 137ಕ್ಕೆ ಇಳಿದಿದ್ದು, ಇದು ಅತ್ಯಂತ ಕಡಿಮೆಯಾಗಿದೆ ಎಂದು 370 ನೇ ವಿಧಿ ರದ್ಧತಿ ಸಮರ್ಥಿಸಿಕೊಂಡರು.

ಉಗ್ರವಾದ, ಪ್ರತ್ಯೇಕತಾವಾದ ಮತ್ತು ಹುರಿಯತ್ ಅನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ನಿರಂತರ ಅಭಿಯಾನವು ಉತ್ತಮ ಫಲಿತಾಂಶಗಳನ್ನು ನೀಡಿದೆ. ಜಮ್ಮು ಕಾಶ್ಮೀರದ ಯುವಕರನ್ನು ತಲುಪಿರುವ ಪ್ರಧಾನಿ ಮೋದಿ, ಕಲ್ಲುಗಳನ್ನು ಹಿಡಿದಿದ್ದ ಯುವಕರ ಕೈಗಳು ಲ್ಯಾಪ್​ಟಾಪ್ ಹಿಡಿಯುವಂತೆ ಮಾಡಿದ್ದಾರೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದ ಯುವಕರು ಇಂದು ದೇಶದ ಇತರ ಯುವಕರಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ.

ಮೂರು ಕುಟುಂಬಗಳ ಆಡಳಿತದಿಂದ ಬಿಡುಗಡೆ: ಗುಜ್ಜರ್‌ಗಳು, ಬಕರ್‌ವಾಲ್‌ಗಳು ಮತ್ತು ಪಹಾರಿ, ಈ ಮೂರು ಕುಟುಂಬಗಳು 70 ವರ್ಷಗಳ ಕಾಲ ಕುಟುಂಬ ಆಡಳಿತ ನಡೆಸಿ ಪ್ರಜಾಪ್ರಭುತ್ವಕ್ಕಾಗಿ ಜನಸಾಮಾನ್ಯರನ್ನು ಹಾತೊರೆಯುವಂತೆ ಮಾಡಿದೆ. ಇಂದು, ಜನರು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ತಹಸಿಲ್ ಪಂಚಾಯತ್​ಗಳನ್ನು ಹೊಂದಿದ್ದಾರೆ.

ಕಳೆದ 70 ವರ್ಷಗಳಲ್ಲಿ ಇದು ಸಂಭವಿಸಲಿಲ್ಲ. ಕಳೆದ 70 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 87 ಶಾಸಕರು ಮತ್ತು ಆರು ಸಂಸದರಷ್ಟೇ ಇದ್ದರು. ಆದರೆ ಈ ಬಾರಿ ಗುಜರ್‌ಗಳು, ಬಕರ್‌ವಾಲ್‌ಗಳು ಮತ್ತು ಪಹಾರಿಗಳನ್ನು ಹೊರಗಿಡಲಾಗಿದ್ದು, ಗುಲಾಂ ನಬಿ ಖತಾನಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಮೋದಿಜಿ ಅವರು ಎಲ್ಲ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಬದ್ಧರಾಗಿರುವುದಾಗಿ ಸಾಬೀತುಪಡಿಸಿದ್ದಾರೆ ಎಂದರು.

ಆರ್ಟಿಕಲ್ 370 ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರಕ್ಕೆ 56,000 ಕೋಟಿ ರೂಪಾಯಿ ಹೊರಗಿನಿಂದ ಹೂಡಿಕೆ ಬಂದಿದೆ. ಮೂರು ಕುಟುಂಬಗಳ ಕುಟುಂಬ ಆಡಳಿತದಿಂದಾಗಿ ಕಳೆದ 70 ವರ್ಷಗಳಲ್ಲಿ ಅಗ್ರಸ್ಥಾನದಲ್ಲಿರುವ ಭ್ರಷ್ಟಾಚಾರ ಕೊನೆಗೊಳಿಸಲು ನಾವು ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿದ್ದೇವೆ ಎಂದು ಹೇಳಿದರು.

ಶಾರ್ಜಾಗೆ ನೇರ ವಿಮಾನಯಾನ: ಮಹಾರಾಜ ಹರಿ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದ ಘೋಷಣೆಗಾಗಿ ಷಾ ಎಲ್‌ಜಿ ಸಿನ್ಹಾ ಅವರನ್ನು ಶ್ಲಾಘಿಸಿದರು. ಮೊದಲ ಬಾರಿಗೆ ಶ್ರೀನಗರದಿಂದ ಶಾರ್ಜಾಕ್ಕೆ ನೇರ ವಿಮಾನಯಾನ ಪ್ರಾರಂಭಿಸಲಾಗಿದೆ. ಶ್ರೀನಗರದಲ್ಲಿ ರಾತ್ರಿಯ ವಿಮಾನ ಕಾರ್ಯಾಚರಣೆಯನ್ನೂ ತಿಳಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, 2022 ಜನವರಿಯಿಂದ 1.62 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಶಾ ಹೇಳಿದರು.

ಗುಜ್ಜರ್‌ಗಳು, ಬಕರ್‌ವಾಲ್‌ಗಳು ಮತ್ತು ಪಹಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಡಿಲಿಮಿಟೇಶನ್ ಆಯೋಗವನ್ನು ರಚಿಸಲಾಗಿದೆ. ಪಿಎಂ ಮೋದಿ ನೇತೃತ್ವದ ಸರ್ಕಾರವು ಗುಜರ್‌ಗಳು, ಬಕರ್‌ವಾಲ್‌ಗಳು ಮತ್ತು ಪಹಾರಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳೊಂದಿಗೆ ಜಮ್ಮು ಮತ್ತು ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ ಎಂದು ಹೇಳಿದರು.

ಶಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ ಮತ್ತು ಪಿಎಂಒ ಡಾ.ಜಿತೇಂದ್ರ ಸಿಂಗ್, ಸಂಸದ ಜುಗಲ್ ಕಿಶೋರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಭಯೋತ್ಪಾದನೆ ಮೇಲೆ ಜಮ್ಮು ಕಾಶ್ಮೀರ ನಿರ್ಣಾಯಕ ಪ್ರಾಬಲ್ಯ ಸ್ಥಾಪಿಸಿದೆ: ಅಮಿತ್​ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.