ETV Bharat / bharat

ಇನ್ವೆಸ್ಟ್​ ರಾಜಸ್ಥಾನ: ಸಿಎಂ ಗೆಹ್ಲೋಟ್​ ಶ್ಲಾಘಿಸಿದ ಉದ್ಯಮಿ ಅದಾನಿ.. ಕಾರಣ ಏನು ಗೊತ್ತೇನು?

author img

By

Published : Oct 7, 2022, 4:02 PM IST

ರಾಜಸ್ಥಾನದಲ್ಲಿ ಇನ್ನೂ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದೇವೆ. ಇಲ್ಲಿ ನಮ್ಮ 10 ಸಾವಿರ ಮೆಗಾವ್ಯಾಟ್​​ನ ಸೋಲಾರ್ ಪಾರ್ಕ್ ಆರಂಭವಾಗಲಿದೆ. ಜೈಪುರ್ ಏರ್​ಪೋರ್ಟ್​ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೀನ್ ಹೈಡ್ರೊಜನ್ ಉತ್ಪಾದಿಸಲು ಅದಾನಿ ಗ್ರೂಪ್ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕೆಲಸ ಮಾಡಲಿದೆ ಎಂದು ಅದಾನಿ ತಿಳಿಸಿದರು.

ಇನ್ವೆಸ್ಟ್​ ರಾಜಸ್ಥಾನ್ ಹೂಡಿಕೆ ಸಮಾವೇಶ: ಸಿಎಂ ಗೆಹ್ಲೋಟ್​ರನ್ನು ಶ್ಲಾಘಿಸಿದ ಉದ್ಯಮಿ ಅದಾನಿ
chairman and founder of Adani Group Gautam Adani in Invest Rajasthan Summit 2022

ಜೈಪುರ್: ರಾಜಸ್ಥಾನದ ಹಲವಾರು ಕೈಗಾರಿಕಾ ರಂಗಗಳಲ್ಲಿ ತಮ್ಮ ಸಮೂಹ 35 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ದೇಶದ ಬೃಹತ್ ಕೈಗಾರಿಕಾ ಸಮೂಹ ಅದಾನಿ ಗ್ರೂಪ್ ಚೇರಮನ್ ಗೌತಮ್ ಅದಾನಿ ಹೇಳಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಆಕರ್ಷಣೆಗಾಗಿ ರಾಜ್ಯ ಸರ್ಕಾರ ಆಯೋಜಿಸಿರುವ ಇನ್ವೆಸ್ಟ್​ ರಾಜಸ್ಥಾನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಸ್ಥಾನದಲ್ಲಿ ಇನ್ನೂ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದೇವೆ. ಇಲ್ಲಿ ನಮ್ಮ 10 ಸಾವಿರ ಮೆಗಾವ್ಯಾಟ್​​ನ ಸೋಲಾರ್ ಪಾರ್ಕ್ ಆರಂಭವಾಗಲಿದೆ. ಜೈಪುರ್ ಏರ್​ಪೋರ್ಟ್​ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೀನ್ ಹೈಡ್ರೊಜನ್ ಉತ್ಪಾದಿಸಲು ಅದಾನಿ ಗ್ರೂಪ್ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕೆಲಸ ಮಾಡಲಿದೆ ಎಂದು ಅದಾನಿ ತಿಳಿಸಿದರು.

ಮುಖ್ಯಮಂತ್ರಿ ಗೆಹ್ಲೋಟ್ ಅವರ ಕಾರಣದಿಂದಲೇ ಇದೆಲ್ಲವೂ ಸಾಧ್ಯವಾಗುತ್ತಿದೆ. ಶಕ್ತಿ ಉಡಾನ್ ಯೋಜನಾ, ಕೋಚಿಂಗ್ ಅನುಕೃತಿ ಯೋಜನಾ ಮುಂತಾದುವು ಅತ್ಯುತ್ತಮವಾಗಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಸರ್ಕಾರವು ಅತಿಹೆಚ್ಚು ಸೌಲಭ್ಯಗಳನ್ನು ನೀಡಿದೆ. ಬಂಡವಾಳ ಹೂಡಿಕೆಗಾಗಿ ಸರ್ಕಾರದ ಉತ್ತೇಜನಾ ಕ್ರಮಗಳಿಂದ ಹೂಡಿಕೆಯು ಸುಲಭವಾಗುತ್ತಿದೆ ಎಂದು ಅವರು ಹೇಳಿದರು.

ಅದಾನಿ ಸಮೂಹವು 1320 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದೆ. ಸಿಎಂ ಗೆಹ್ಲೋಟ್ ಅವರ ಆರ್ಥಿಕ ಹೂಡಿಕೆಯ ದೂರ ದೃಷ್ಟಿಯಿಂದ ರಾಜಸ್ಥಾನವು ಸೌರಶಕ್ತಿ ಉತ್ಪಾದನೆಯ ಮುಂಚೂಣಿ ರಾಜ್ಯವಾಗಲಿದೆ. ಸಿಎಂ ಗೆಹ್ಲೋಟ್ ನೇತೃತ್ವದಲ್ಲಿ ಮರುಭೂಮಿಯನ್ನು ಕೈಗಾರಿಕಾ ಭೂಮಿಯಾಗಿ ಪರಿವರ್ತಿಸುವುದು ನಮ್ಮ ಗುರಿಯಾಗಿದೆ ಎಂದರು.

ಸಮಾವೇಶದ ಮೊದಲ ದಿನವೇ ಕುರ್ಚಿಗಳು ಖಾಲಿಯಾಗಿರುವುದು ಕಂಡು ಬಂದಿತು. ಸರ್ಕಾರವು ಹೊರಗಿನಿಂದ ಹೂಡಿಕೆದಾರರನ್ನು ಆಹ್ವಾನಿಸಿದೆ. ಆದರೆ, ರಾಜ್ಯದ ಕೈಗಾರಿಕೋದ್ಯಮಿಗಳೇ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ದೆಹಲಿ, ಮುಂಬೈ, ಗುಜರಾತ್, ದುಬೈ ಮತ್ತು ಇತರ ಸ್ಥಳಗಳಿಂದ ಜೈಪುರ್ ತಲುಪಲು ಚಾರ್ಟರ್ಡ್ ವಿಮಾನಗಳ ಹಾರಾಟ ನಡೆಯುತ್ತಿದೆ. ಇನ್ವೆಸ್ಟ್ ರಾಜಸ್ಥಾನ ಶೃಂಗಸಭೆಗೆ ಬರುವ ಅತಿಥಿಗಳಿಗಾಗಿ 30 ಕ್ಕೂ ಹೆಚ್ಚು ಚಾರ್ಟರ್ಡ್ ಮತ್ತು ಇತರ ವಿಮಾನಗಳ ಸೇವೆ ಚಾಲನೆಯಲ್ಲಿದೆ.

ಇದನ್ನೂ ಓದಿ: ಶರವೇಗದಲ್ಲಿ ಮುನ್ನುಗ್ಗುತ್ತಿರುವ ಅದಾನಿ ಗ್ರೂಪ್: ವಿಶ್ವದ 2ನೇ ಸಿರಿವಂತನಾದ ಗೌತಮ್​ ಅದಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.