ETV Bharat / bharat

ಅರವಿಂದ್ ಕೇಜ್ರಿವಾಲ್​ ಪ್ರಧಾನಿಯಾಗ್ತಾರೆ, ಆಮ್​ ಆದ್ಮಿ ಪಕ್ಷ ಇದೀಗ ರಾಷ್ಟ್ರೀಯ ಶಕ್ತಿ ಎಂದ ಮುಖಂಡ

author img

By

Published : Mar 10, 2022, 11:40 AM IST

ಅತಿ ಕಡಿಮೆ ಅವಧಿಯಲ್ಲೇ ಪಂಜಾಬ್​​ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಆಮ್​ ಆದ್ಮಿ ಪಕ್ಷ ಯಶಸ್ವಿಯಾಗಿದ್ದು, ಇದೀಗ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

AAP Raghav Chadha
AAP Raghav Chadha

ನವದೆಹಲಿ: ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್​​ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಈ ಮೂಲಕ ಕಾಂಗ್ರೆಸ್ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಕೇಸರೆರಚಾಟದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವಿಚಾರವಾಗಿ ರಾಘವ್​ ಚಡ್ಡಾ ಮಾತನಾಡಿದ್ದಾರೆ.

  • #WATCH | "Had been saying from day 1 that AAP will form govt with absolute majority...Throne of people who ruled Punjab for decades is shaking. In future, Arvind Kejriwal will be BJP's principal challenger, AAP will be Congress' replacement," says Raghav Chadha#PunjabElections pic.twitter.com/RIUFlyNNef

    — ANI (@ANI) March 10, 2022 " class="align-text-top noRightClick twitterSection" data=" ">

ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಸ್ಥಾನವನ್ನ ಇದೀಗ ಎಎಪಿ ತುಂಬುತ್ತಿದ್ದು, ಬರುವ ದಿನಗಳಲ್ಲಿ ದೇಶದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದಿದ್ದಾರೆ. ಪಂಜಾಬ್​ನಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದ್ದು, ದಶಕಗಳಿಂದ ಇಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳ ಗದ್ದುಗೆ ಅಲಗಾಡುತ್ತಿದೆ ಎಂದರು. ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್​​ ಬಿಜೆಪಿಗೆ ಪ್ರಮುಖ ಸವಾಲು ಆಗಲಿದ್ದು, ಅವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು. ಎಎಪಿ ಇದೀಗ ಕಾಂಗ್ರೆಸ್​ ಸ್ಥಾನ ತುಂಬುತ್ತಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಯುಪಿಯಲ್ಲಿ ಸತತ 2ನೇ ಸಲ ಅಧಿಕಾರದತ್ತ BJP.. ನಾಲ್ಕು ದಾಖಲೆ ಬರೆಯಲಿರುವ ಫೈರ್​ ಬ್ರ್ಯಾಂಡ್ ಯೋಗಿ!

ಇದೇ ವೇಳೆ ಮಾತನಾಡಿರುವ ಎಎಪಿ ಮುಖಂಡ ಮನೀಶ್ ಸಿಸೋಡಿಯಾ, ಕೇಜ್ರಿವಾಲ್​ ಮಾದರಿ ಆಡಳಿತಕ್ಕೆ ಪಂಜಾಬ್​​ ಮನಸೋತಿದ್ದು, ಆಡಳಿತ ನಡೆಸಲು ಅವಕಾಶ ನೀಡಿದೆ. ಈ ಮಾದರಿ ಬರುವ ದಿನಗಳಲ್ಲಿ ರಾಷ್ಟ್ರದ ತುಂಬೆಲ್ಲ ವಿಸ್ತರಣೆಯಾಗಲಿದೆ ಎಂದರು.

  • Punjab has given chance to Kejriwal's model of governance. Today, his model of governance has been established at the national level. This is the victory of the 'Aam Aadmi' (common man): AAP leader Manish Sisodia as party sweeps Punjab pic.twitter.com/Fxdbxzd6Mg

    — ANI (@ANI) March 10, 2022 " class="align-text-top noRightClick twitterSection" data=" ">

2012ರಲ್ಲಿ ಹುಟ್ಟಿಕೊಂಡಿರುವ ಆಮ್​ ಆದ್ಮಿ ಪಕ್ಷ ಮೊದಲು ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಪಂಜಾಬ್​​ನಲ್ಲೂ ಕಮಾಲ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.