ETV Bharat / bharat

7 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ.. ಹುಡುಗಿ ಸ್ಥಿತಿ ಗಂಭೀರ..

author img

By

Published : Jan 9, 2023, 5:32 PM IST

ಸೂರತ್​ನಲ್ಲಿ 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ
a-stray-dog-attacked-a-7-year-old-girl-in-surat

ಸೂರತ್​​ನಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಳ - ಗಂಭೀರ ಸ್ಥಿತಿಯಲ್ಲಿ ಬಾಲಕಿ - ಘಟನೆ ಕುರಿತು ಗಂಭೀರ ಕ್ರಮಕ್ಕೆ ಮುಂದಾದ ಸೂರತ್​ ಮುನ್ಸಿಪಾಲಿಟಿ

ಸೂರತ್​​: 7 ವರ್ಷದ ಪುಟ್ಟ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ದಾರುಣ ಘಟನೆ ಗುಜರಾತ್​​ನ ಸೂರತ್​ನ ವಾಪೂಲ್​​ಪಡ ಅಶ್ವನಿ ಕುಮಾರ್​​ ಸೊಸೈಟಿಯಲ್ಲಿ ನಡೆದಿದೆ. ಬಾಲಕಿಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹುಡುಗಿಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಯ ಮುಖಕ್ಕೆ ಅನೇಕ ಹೊಲಿಗೆಗಳನ್ನು ಹಾಕಲಾಗಿದೆ. ಘಟನೆ ಬಳಿಕ ಸ್ಥಳೀಯರು ಈ ಕುರಿತು ವರದಿ ಮಾಡಿದ ಹಿನ್ನೆಲೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬೀದಿನಾಯಿಯನ್ನು ಹಿಡಿದು ಹೊತ್ತೊಯ್ಯಿದ್ದಾರೆ.

ಏನಿದು ಘಟನೆ: ಬಾಲಕಿ ಮನೆಯ ಮುಂದೆ ಗೇಟ್​ ಹೊರಗೆ ಆಟವಾಡುವಾಗ ನಾಯಿಯೊಂದು ಓಡಿ ಹೋಗಿದೆ. ಈ ವೇಳೆ ಬಾಲಕಿ ನಾಯಿಗೆ ಅಟ್ಟಾಡಿಸಿದ್ದಾಳೆ. ಇದರಿಂದ ಬಾಲಕಿ ಮೇಲೇರಗಿದ ನಾಯಿ ಆಕೆಯನ್ನು ಕಚ್ಚಲು ಆರಂಭಿಸಿದೆ. ಈ ಸಂದರ್ಭದಲ್ಲಿ ಬೈಕ್​ ಸವಾರನೊಬ್ಬ ಪಕ್ಕದಲ್ಲೇ ಹಾದು ಹೋಗುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಆತ ಬಾಲಕಿ ರಕ್ಷಣೆಗೆ ಬಾರದೇ, ಹಾಗೇ ಮುಂದೆ ಸಾಗಿದ್ದಾನೆ.

ಈ ವೇಳೆ ಮಗುವಿನ ತಾಯಿ ಮನೆಯಿಂದ ಹೊರ ಬಂದಿದ್ದು, ಮಗುವಿನ ರಕ್ಷಣೆಗೆ ಧಾವಿಸಿದ್ದಾಳೆ. ನಾಯಿ ಮುಖಕ್ಕೆ ನೀರೇರುಚುವ ಮೂಲಕ ನಾಯಿಯನ್ನು ಓಡಿಸುವ ಯತ್ನ ನಡೆಸಿದ್ದಾರೆ. ತಕ್ಷಣಕ್ಕೆ ಮಗುವನ್ನು ಬಿಟ್ಟರೂ ಮತ್ತೆ ಮಗುವನ್ನು ಕಚ್ಚಲು ನಾಯಿ ಧಾವಿಸಿದೆ. ಈ ವೇಳೆ ಮಹಿಳೆಯ ಮುಂಜಾಗ್ರತೆಯಿಂದ ಮಗುವನ್ನು ಎಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ರವಿ ಶರ್ಮಾ ಎಂದು ಗುರುತಿಸಲಾಗಿದ್ದು, ಈ ಬಾಲಕಿ ನರ್ಸರಿ ಓದುತ್ತಿದ್ದಾಳೆ. ತಮ್ಮ ಚಿಕ್ಕಪ್ಪನ ಮನೆಯಲ್ಲಿ ಆಕೆ ಇದ್ದಾಗ ಈ ಘಟನೆ ನಡೆದಿದೆ. ತಕ್ಷಣಕ್ಕೆ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ತಾಯಿ, ಸಂಜೆ ಕಾಫಿ ಕುಡಿಯುತ್ತಾ ನಾವು ಮನೆಯಲ್ಲಿ ಕುಳಿತಿದ್ದೆವು. ಈ ವೇಳೆ ಮನೆ ಹೊರಗಿನಿಂದ ಮಗುವಿನ ಕಿರುಚಾಟ ಕೇಳಿಸಿತು. ಆಕೆ ನೆರೆ ಮನೆ ಬಾಲಕನ ಜೊತೆ ಆಟವಾಡುತ್ತಿದ್ದಾಳೆ ಎಂದುಕೊಂಡೆವು. ಆದರೆ, ಆಕೆ ಚೀರಾಟ ಜೋರಾದ ಹಿನ್ನೆಲೆ ಹೊರಗೆ ಹೋದಾಗ ನಾಯಿ ದಾಳಿ ಮಾಡುತ್ತಿರುವುದು ಕಂಡು ಬಂತು ಎಂದಿದ್ದಾರೆ.

600 ನಾಯಿಗೆ ಚುಚ್ಚುಮದ್ದು: ಘಟನೆ ಕುರಿತು ಮಾತನಾಡಿರುವ ಸೂರತ್​ ಮುನ್ಸಿಪಲ್​ ಕಾರ್ಪೋರೇಷನ್​ ಮೇಯರ್​ ಹೇಮಲಿ ಬೊಘವಲಾ, ಬೀದಿ ನಾಯಿಗಳ ಹಾವಳಿ ತಡೆಗೆ ನಿಯಮಗಳನ್ನು ರೂಪಿಸಲಾಗಿದೆ. ಸೂರತ್​ ಮೆಟ್ರೋಪಾಲಿಟನ್​ ಮುನ್ಸಿಪಾಲಿಟಿ ಇದರ ಅಡಿ ಕಾರ್ಯ ನಿರ್ವಹಿಸಲಿದೆ. ಆಗಿರುವ ಘಟನೆ ನಿಜಕ್ಕೂ ದುಃಖದಾಯಕ ಮತ್ತು ಗಂಭೀರವಾದದ್ದು. ಕಳೆದೊಂದು ವರ್ಷದಿಂದ 7,521 ಬೀದಿನಾಯಿಗಳನ್ನು ಹಿಡಿಯಲಾಗಿದ್ದು, 6,000 ನಾಯಿಗಳಿಗೆ ಚುಚ್ಚು ಮದ್ದು ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದೆ ಈ ರೀತಿ ಘಟನೆ ನಡೆಯದಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಎಂದು ಅಲ್ಲಿನ ಜನರಿಗೆ ಭರವಸೆ ನೀಡಿದ್ದಾರೆ.

ದಿನೇ ದಿನೆ ಏರಿಕೆಯಾಗುತ್ತಿವೆ ಪ್ರಕರಣಗಳು: ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಾಯಿ ಕಡಿತದ ಪ್ರಕರಣಗಳು ಕೂಡ ಏರಿಕೆ ಕಾಣುತ್ತಿದೆ. ಇಲ್ಲಿನ ನ್ಯೂ ಸಿವಿಲ್​ ಆಸ್ಪತ್ರೆಯಲ್ಲಿ ದಿನಕ್ಕೆ 25ರಿಂದ 30 ನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿದೆ. ಅದರಲ್ಲೂ ಮಕ್ಕಳ ಮೇಲಿನ ಈ ಪ್ರಕರಣ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ: ವಿಮಾನದಲ್ಲಿ ಕುಡುಕರ ಹಾವಳಿ: ಗಗನಸಖಿಗೆ ಕಿರುಕುಳ, ಕ್ಯಾಪ್ಟನ್‌ ಮೇಲೆ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.