ETV Bharat / bharat

ತಂಗಿ ಮೇಲೆ ಅತ್ಯಾಚಾರ, ಅಕ್ಕನೊಂದಿಗೆ ಮದುವೆ, ತಂದೆಗೆ ಕಟ್ಟು ಕಥೆ...ಒಂದೇ ಕುಟುಂಬಕ್ಕೆ ಮೂರು ನಾಮ ಎಳೆದ ಪಾಪಿ!

author img

By

Published : Jul 19, 2021, 12:24 PM IST

Updated : Jul 19, 2021, 1:00 PM IST

ತಂಗಿ ಮೇಲೆ ಅತ್ಯಾಚಾರ ನಡೆಸಿ ಅಕ್ಕನೊಂದಿಗೆ ಸಪ್ತಪದಿ ತುಳಿದು ಹೆಣ್ಣುಮಕ್ಕಳ ತಂದೆಗೆ ಕಟ್ಟು ಕಥೆ ಕಟ್ಟಿದ ವ್ಯಕ್ತಿಯೊಬ್ಬ ಒಂದೇ ಕುಟುಂಬಕ್ಕೆ ತನ್ನ ಮೂರು ರೂಪಗಳನ್ನು ತೋರಿಸಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

A Person ruined girls life, A Person ruined girls life and married her elder sister, A Person ruined girls life and married her elder sister in guntur, guntur crime news, ಬಾಲಕಿ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿ ಅಕ್ಕನೊಂದಿಗೆ ಮದುವೆ ಮಾಡಿಕೊಂಡ ವ್ಯಕ್ತಿ, ಗುಂಟೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಅಕ್ಕನೊಂದಿಗೆ ಮದುವೆ ಮಾಡಿಕೊಂಡ ವ್ಯಕ್ತಿ, ಗುಂಟೂರು ಅಪರಾಧ ಸುದ್ದಿ,
ಒಂದೇ ಕುಟುಂಬಕ್ಕೆ ಮೂರು ರೂಪ ತೋರಿಸಿದ ಭೂಪ

ಗುಂಟೂರು(ಆಂಧ್ರ ಪ್ರದೇಶ): ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಆಕೆಯ ನಗ್ನ ಚಿತ್ರಗಳನ್ನಿಟ್ಟುಕೊಂಡು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಬಾಲಕಿ ಅಕ್ಕನ ಜೊತೆ ಪ್ರೇಮ ವಿವಾಹ ಮಾಡಿಕೊಂಡು ಬಂಗಾರವನ್ನು ದೋಚಿದ್ದಾನೆ. ಇವರ ತಂದೆಗೆ ಕಟ್ಟು ಕಥೆ ಕಟ್ಟಿ ಲಕ್ಷಾಂತರ ರೂಪಾಯಿ ನಗದನ್ನೂ ಲಪಾಟಿಯಿಸಿದ್ದಾನೆ.

ಸರ್ಕಾರಿ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಕೆಲಸಗಾರ: ಜಿಲ್ಲೆಯ ಚೆಬ್ರೋಲಿನ ನಿವಾಸಿ ವೇಮುಲಪಲ್ಲಿ ಜೋಶಿಬಾಬು ಇಂಜಿನಿಯರಿಂಗ್​ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಕೆಲಸಗಾರನ ವೃತ್ತಿ ಮಾಡುತ್ತಿದ್ದಾನೆ. ಚಿಲಕಲೂರಿ ಪೇಟೆ ನಿವಾಸಿ ಬಾಲಕಿ 2019ರಲ್ಲಿ ರಜೆ ನಿಮಿತ್ತ ತಮ್ಮ ಅಜ್ಜಿ ಮನೆಗೆ ಚೆಬ್ರೋಲು ಗ್ರಾಮಕ್ಕೆ ಬಂದಿದ್ದಾಳೆ. ಈ ವೇಳೆ ಜೋಶಿಬಾಬು ಆಕೆ ಬೆನ್ನಿಗೆ ಬಿದ್ದು ನಂಬರ್​ ಕೋಡುವಂತೆ ಪೀಡಿಸಿದ್ದಾನೆ.

ಬಾಲಕಿ ನಂಬರ್​ ಕೊಡಲು ನಿರಾಕರಿಸಿದಕ್ಕೆ ಆ್ಯಸಿಡ್​ ದಾಳಿ ಮಾಡುತ್ತೇನೆ, ಇಲ್ಲವಾದಲ್ಲಿ ನಿಮ್ಮ ಅಜ್ಜಿಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಹೀಗೆ ಬಾಲಕಿಗೆ ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋ ಕಾಲ್​ ಮಾಡಿ ಆಕೆಯೊಂದಿಗೆ ನಗ್ನವಾಗಿ ಮಾತನಾಡಿಸಿದ್ದಾನೆ. ಬಳಿಕ ಹಣ ನೀಡದೇ ಇದ್ದಲ್ಲಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಹೆದರಿಸಿ ಬಾಲಕಿ ಕಡೆಯಿಂದ ಬಂಗಾರದ ಸರ​ ದೋಚಿದ್ದಾನೆ.

ಬಾಲಕಿ ತಂದೆಗೆ ಕಟ್ಟು ಕಥೆ: ಇಷ್ಟೇ ಅಲ್ಲದೆ ಬಾಲಕಿ ತಂದೆಗೆ ಕರೆ ಮಾಡಿ ನಿಮ್ಮ ಮಗಳ ನಗ್ನ ವಿಡಿಯೋ ಮತ್ತು ಫೋಟೊಗಳು ಬೇರೆಯವರ ಬಳಿ ಇರುವುದನ್ನು ನಾನು ನೋಡಿದ್ದೇನೆ. ಅವನ್ನು ತೆಗೆದು ಹಾಕಲು ಖರ್ಚಾಗುತ್ತೆ ಎಂದು ಹೇಳಿ 3.30 ಲಕ್ಷ ರೂ. ಸಹ ದೋಚಿದ್ದಾನೆ.

ಬಾಲಕಿ ಅಕ್ಕನೊಂದಿಗೆ ಪ್ರೇಮ ವಿವಾಹ: ನಿಮ್ಮ ಸಹೋದರಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿಸ್ತೀನಿ ಎಂದು ಹೇಳಿ ಬಾಲಕಿ ಸಹೋದರಿಗೆ ನಂಬಿಸಿದ್ದಾನೆ. ಜೊತೆಗೆ ಆಕೆ ಬಳಿಯಿದ್ದ ಬಂಗಾರದ ಸರ ಸಹ ದೋಚಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಅವನು ತನ್ನ ಮಾಯಾಜಾಲದಲ್ಲಿ ಬಿಳಿಸಿ ಆಕೆಯೊಂದಿಗೆ ಪ್ರೇಮ ಪುರಾಣ ಆರಂಭಿಸಿದ್ದಾನೆ. ಈ ತಿಂಗಳು 13ನೇ ದಿನಾಂಕದಂದು ಇಬ್ಬರೂ ರಹಸ್ಯವಾಗಿ ಮದುವೆ ಸಹ ಆಗಿದ್ದಾರೆ.

ಆರೋಪಿ ಅಂದರ್​: ಜೋಶಿಬಾಬು ಮೇಲೆ ಕುಟುಂಬಸ್ಥರಿಗೆ ಅನುಮಾನ ಮೂಡಿದೆ. ಕೂಡಲೇ ಬಾಲಕಿ ಪೋಷಕರು ಆರೋಪಿ ಜೋಶಿಬಾಬು ಮೇಲೆ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ಎರಡು ಬಂಗಾರದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ತನಿಖೆ ಮುಂದುವರಿದಿದೆ.

Last Updated : Jul 19, 2021, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.