ETV Bharat / bharat

ಬಾಲಕಿ ಮೇಲೆ ಆತ್ಯಾಚಾರ ಎಸಗಿದ ದುರುಳ.. ಪ್ರಕರಣ ದಾಖಲು

author img

By

Published : Jan 3, 2023, 11:50 AM IST

9 ವರ್ಷದ ಬಾಲಕಿ ಮೇಲೆ ಅಪರಿಚಿತನಿಂದ ಕೊಲೆ - ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

A 9-year-old girl was raped in a village in Veeraghattam mandal
ವೀರಘಟ್ಟಂ ಮಂಡಲದ ಹಳ್ಳಿಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ವೀರಘಟ್ಟಂ(ಆಂಧ್ರಪ್ರದೇಶ) : 9 ವರ್ಷದ ಬಾಲಕಿ ಮೇಲೆ ವಿವಾಹಿತ ವ್ಯಕ್ತಿ ಅತ್ಯಾಚಾರ ಎಸಗಿರುವ ಘಟನೆ ವೀರಘಟ್ಟಂ ಮಂಡಲದ ಹಳ್ಳಿಯಲ್ಲಿ ನಡೆದಿದೆ.

ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ವೀರಘಟ್ಟಂ ಮಂಡಲದ ಹಳ್ಳಿಯೊಂದರ ಬಾಲಕಿ ಬಾನುವಾರ ರಾತ್ರಿ 7 ಗಂಟೆಗೆ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅದೇ ಗ್ರಾಮದ ಗೌರುನಾಯ್ಡು (48) ಎಂಬಾತ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ. ಅವಳು ಕಿರುಚಲು ಯತ್ನಿಸಿದಾಗ ಬಾಯಿ ಮುಚ್ಚಿಸಿ ಆಕೆಯನ್ನು ಸಮೀಪದ ಸ್ಮಶಾನಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಇದರಿಂದ ಗಲಾಟೆ ಕೇಳಿ ಬಂದ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದಾಗ ಆರೋಪಿ ಓಡಿ ಹೋಗುತ್ತಿರುವುದನ್ನು ನೋಡಿದ್ದಾರೆ. ನಂತರ ಆತ ಪಕ್ಕದ ಊರಲ್ಲಿ ಇದ್ದಾನೆ ಎಂಬ ಮಾಹಿತಿ ತಿಳಿದು ಆತನನ್ನು ಹಿಡಿದು ಥಳಿಸಿದ್ದಾರೆ.

ಬಾಲಕಿಯನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಆಕೆಯನ್ನು ಪಾಲಕೊಂಡ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಎಸ್​​​​​ಪಿ ಜಿ.ವಿ.ಕೃಷ್ಣರಾವ್ ತಿಳಿಸಿದ್ದಾರೆ. ಹಾಗೆ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ಹರಿಕೃಷ್ಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೈಲ್ವೇ ಸೇತುವೆ ಮೇಲೆ ರೀಲ್ಸ್​ ಶೂಟ್​ ಮಾಡಲು ಹೋಗಿ ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.