ETV Bharat / bharat

ಪೋಷಕರೇ ಹುಷಾರ್​: ಗಂಟಲಿನಲ್ಲಿ ಕಡಲೆ ಬೀಜ ಸಿಲುಕಿ ದೇವಸ್ಥಾನದಲ್ಲೇ ಮಗು ಸಾವು!

author img

By

Published : Jan 17, 2022, 1:50 PM IST

Updated : Jan 17, 2022, 3:50 PM IST

boy died by stuck ground nut in his throat, a boy died by stuck ground nut in Telangana, Telangana news, ಗಂಟಲಲ್ಲಿ ಕಡಲೆ ಬೀಜ ಸಿಲುಕಿ ಬಾಲಕ ಸಾವು, ತೆಲಂಗಾಣದಲ್ಲಿ ಗಂಟಲಲ್ಲಿ ಕಡಲೆ ಬೀಜ ಸಿಲುಕಿ ಬಾಲಕ ಸಾವು, ತೆಲಂಗಾಣ ಸುದ್ದಿ,
ಬಾಲಕ ಸಾವು

ಸಂಬಂಧಿಕರ ಮನೆಗೆ ಹಬ್ಬಕ್ಕೆ ಮಗನೊಂದಿಗೆ ತೆರಳಿದ್ದ ದಂಪತಿ ಮಗನನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ..

ನಲ್ಗೊಂಡ : ಎರಡೂವರೆ ವರ್ಷದ ಮಗು ಕಡಲೆ ಬೀಜ ತಿನ್ನುತ್ತಿದ್ದಾಗ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೇತೇಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಗು ಸಾವನ್ನಪ್ಪಿದ ಮೇಲೆ ಪೋಷಕರು ಮೌನಕ್ಕೆ ಶರಣಾಗಿದ್ದಾರೆ.

ಚಿಕ್ಕತಿಗುಡೆಂ ಗ್ರಾಮದ ಕುಮ್ಮರಿಕುಂಟ್ಲ ಸೈದು ಮತ್ತು ಶೈಲಜಾ ಎಂಬ ದಂಪತಿ ಭಾನುವಾರ ಬಂಗಾರು ಮೈಸಮ್ಮ ದೇವಸ್ಥಾನದಲ್ಲಿ ಹಬ್ಬ ಆಚರಿಸಲು ಸಂಬಂಧಿಕರನ್ನು ಆಹ್ವಾನಿಸಿದ್ದರು.

ಈ ಅನುಕ್ರಮದಲ್ಲಿ ಯಾದಾದ್ರಿ ಭುವನೇಶ್ವರಿ ಜಿಲ್ಲೆಯ ರಾಮಣ್ಣಪೇಟ ಮಂಡಲದ ತುಮ್ಮಲಗುಡೆಮ್‌ ನಿವಾಸಿಯಾದ ರೇಣುಕಾ, ಮಲ್ಲೇಶ್ ಮತ್ತು ಅವರ ಎರಡೂವರೆ ವರ್ಷದ ಮಗ ಅದ್ವಿತ್ ಎಂಬುವರು ಸೇರಿ ಮೂವರು ಬಂಗಾರು ಮೈಸಮ್ಮ ದೇವಸ್ಥಾನಕ್ಕೆ ತೆರಳಿದ್ದರು. ರೇಣುಕಾ ಮತ್ತು ಶೈಲಜಾ ಸಹೋದರಿಯರಾಗಿದ್ದು, ಎಲ್ಲರೂ ಹಬ್ಬದ ವ್ಯವಸ್ಥೆಯಲ್ಲಿ ನಿರತರಾಗಿದ್ದರು.

ಓದಿ: ಹೋಂ ಐಸೊಲೇಷನ್ ಮುಕ್ತಾಯ : ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ ಸಿಎಂ ಬೊಮ್ಮಾಯಿ

ಈ ವೇಳೆ ರೇಣುಕಾ ಅವರ ಮಗು ಅದ್ವಿತ್​ ಕಡಲೆ ಬೀಜ ತಿನ್ನುತ್ತಿದ್ದ. ಪರಿಣಾಮ ಶ್ವಾಸನಾಳದಲ್ಲಿ ಕಡಲೆ ಬೀಜ ಸಿಲುಕಿದ್ದರಿಂದ ಮಗುವಿಗೆ ಉಸಿರಾಡಲು ತೊಂದರೆಯಾಗಿದೆ. ಕೂಡಲೇ ಗಮನಿಸಿದ ಪೋಷಕರು ಮತ್ತು ಕುಟುಂಬಸ್ಥರು ಸೂರ್ಯಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟು ಬಹಳ ಸಮಯವಾಗಿದೆ ಎಂದು ದೃಢಪಡಿಸಿದರು. ಇದನ್ನು ತಿಳಿದ ಪೋಷಕರು ಮತ್ತು ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.

Last Updated :Jan 17, 2022, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.