ETV Bharat / bharat

ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ ಗ್ಯಾಂಗ್‌ ಅರೆಸ್ಟ್​: 14 ವರ್ಷದ ಅಪ್ರಾಪ್ತೆಯನ್ನ 3 ಬಾರಿ ಮದುವೆ ಮಾಡಿಸಿದ ಕಿರಾತಕಿ

author img

By

Published : Aug 6, 2022, 7:58 AM IST

human trafficking
ವೇಶ್ಯಾವಾಟಿಕೆ ಗ್ಯಾಂಗ್‌

ಬಾಲಕಿಯನ್ನ ಬಲವಂತವಾಗಿ ಕರೆತಂದು ಅಕ್ರಮ ಮದ್ಯ ಮಾರಾಟ ಮಾಡಿಸುವ ಜೊತೆಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಅವಳನ್ನು ವಿವಾಹ ಮಾಡಿ, ಮದುವೆಯಾದವರಿಂದ ಹಣ ವಸೂಲಿ ಮಾಡಿದ ಘಟನೆ ಮಧ್ಯಪ್ರದೇಶದ ಜೈ ಸಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾಗರ್​/ ಮಧ್ಯಪ್ರದೇಶ: ಜೈ ಸಿ ನಗರ ಠಾಣೆ ಪೊಲೀಸರು ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಗ್ಯಾಂಗ್‌ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಂಧೆಯ ಕಿಂಗ್​ಪಿನ್​ ಮಹಿಳಾ ಆರೋಪಿಯನ್ನ ಬಂಧಿಸಲಾಗಿದೆ. ಈ ವೇಳೆ 14ರ ಹರೆಯದ ಬಾಲಕಿಯ ನೋವಿನ ಕಥೆ ಕೇಳಿದ ಮಹಿಳಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ದಿಗ್ಭ್ರಮೆಗೊಂಡಿದ್ದಾರೆ.

5 ವರ್ಷಗಳ ಹಿಂದೆ ಬಂಧಿತ ಮಹಿಳಾ ಆರೋಪಿ ಬಸಂತಿ ಅಹಿರ್ವಾರ್, ಬಾಲಕಿಯನ್ನ ಬಲವಂತವಾಗಿ ಕರೆತಂದು ಅಕ್ರಮ ಮದ್ಯ ಮಾರಾಟ ಮಾಡಿಸಿದ್ದಾಳೆ. ಜೊತೆಗೆ ಆಕೆಗೆ ಮದ್ಯ ಸೇವಿಸಿ ಮೂರು ವಿಭಿನ್ನ ಸ್ಥಳಗಳಲ್ಲಿ ವಿವಾಹ ಮಾಡಿ, ಮದುವೆಯಾದವರಿಂದ ಹಣ ವಸೂಲಿ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಬಾಲಕಿಗೆ ಬೆದರಿಕೆ ಹಾಕಿ ಮತ್ತೊಬ್ಬ ಬಾಲಕಿಯನ್ನು ಕರೆತರುವಂತೆ ಒತ್ತಡ ಹೇರಿದ್ದಾಳೆ.

ಇದರಿಂದ ಭಯಗೊಂಡ ಬಾಲಕಿ ತನ್ನ ಗ್ರಾಮದ ಎಂಟು ವರ್ಷದ ಬಾಲಕಿಯನ್ನು ಕರೆತಂದಿದ್ದು, ಈ ಎಂಟು ವರ್ಷದ ಬಾಲಕಿಯನ್ನು ಕೋಲ್ಕತ್ತಾದ 19 ವರ್ಷದ ಯುವಕನಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.

ಇಬ್ಬರು ಬಾಲಕಿಯರು ನಾಪತ್ತೆ: ಜುಲೈ 30 ರಂದು ಜೈ ಸಿ ನಗರ ಠಾಣಾ ವ್ಯಾಪ್ತಿಯ ವೀರಪುರದಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದರು. ಈ ಕುರಿತು ದೂರು ದಾಖಲಾದ ಹಿನ್ನೆಲೆ ಪೊಲೀಸರು ಬಾಲಕಿಯರಿಗಾಗಿ ಹುಡುಕಾಟ ನಡೆಸಿದರು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು, ವೇಶ್ಯಾವಾಟಿಕೆಗಾಗಿ ಮಾನವ ಕಳ್ಳಸಾಗಣೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಜೊತೆಗೆ ಆರೋಪಿ ಬಸಂತಿ ಅಹಿರ್ವಾರ್ ಬಂಧಿಸಿದ್ದು, ಈ ಇಬ್ಬರು ಬಾಲಕಿಯರನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ 8 ವರ್ಷದ ಬಾಲಕಿಯನ್ನ ಕೊಂಡುಕೊಳ್ಳಲು ಬಂದಿದ್ದ ಕೋಲ್ಕತ್ತಾದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಮಹಿಳಾ ಪೊಲೀಸ್ ಠಾಣೆ ಪ್ರಭಾರ ಅಧಿಕಾರಿ ಸಂಗೀತಾ ಸಿಂಗ್, ಜುಲೈ 30 ರಂದು ವೀರಪುರದ 8 ಮತ್ತು 14 ವರ್ಷದ ಅಪ್ರಾಪ್ತ ಬಾಲಕಿಯರು ಕಾಣೆಯಾದ ಬಗ್ಗೆ ಜೈಸಿನಗರ ಪೊಲೀಸ್ ಠಾಣೆಗೆ ಸಂಬಂಧಿಕರು ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರು ಬಾಲಕಿಯರಿಗಾಗಿ ಹುಡುಕಾಟ ಆರಂಭಿಸಿದ್ದರು.

ಸಾಗರದ ಮೋತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾ ಕರಿಲಾದಲ್ಲಿ ಪೊಲೀಸರು ಇಬ್ಬರೂ ಅಪ್ರಾಪ್ತ ಬಾಲಕಿಯರನ್ನ ಪತ್ತೆ ಮಾಡಿದ್ದಾರೆ. 14 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿಚಾರಣೆ ನಡೆಸಿದಾಗ ಬಸಂತಿಯ ಸಹೋದರಿ 5 ವರ್ಷಗಳ ಹಿಂದೆ ಆಕೆಯೊಂದಿಗೆ ಓದುತ್ತಿದ್ದಳು. ಈ ವೇಳೆ ಬಾಲಕಿಯನ್ನ ನಂಬಿಸಿ ಮೋಸದಿಂದ ಕರೆದೊಯ್ದ ಬಸಂತಿ, ಆಕೆಯ ಬಳಿ ಮದ್ಯ ಮಾರಾಟ ಆರಂಭಿಸಿದ್ದರು ಎಂದರು.

ಇದನ್ನೂ ಓದಿ: ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್​ ವಶ, ಐವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.