ETV Bharat / assembly-elections

ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಏಳು ಶಾಸಕರ ಕೈ ತಪ್ಪಿದ ಟಿಕೆಟ್

author img

By

Published : Apr 12, 2023, 11:57 PM IST

Updated : Apr 13, 2023, 4:23 PM IST

ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಒಟ್ಟು 212 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ್ದು, 12 ಕ್ಷೇತ್ರಗಳು ಮಾತ್ರ ಬಾಕಿ ಇವೆ‌.

http://10.10.50.85:6060/reg-lowres/12-April-2023/1200-675-18228977-thumbnail-16x9-sanju_1204newsroom_1681323141_160.jpg
http://10.10.50.85:6060/reg-lowres/12-April-2023/1200-675-18228977-thumbnail-16x9-sanju_1204newsroom_1681323141_160.jpg

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಂಗಳವಾರ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕೇಸರಿ ಪಡೆ ಇಂದು 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಏಳು ಹಾಲಿ ಶಾಸಕರ ಟಿಕೆಟ್​ ಕೈ ತಪ್ಪಿದೆ. ಹಿರಿಯ ನಾಯಕರಾದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಪ್ರತಿನಿಧಿನಿಸುವ​ ಹುಬ್ಬಳ್ಳಿ - ಧಾರವಾಡ ಕೇಂದ್ರ ಮತ್ತು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಕೆಎಸ್ ಈಶ್ವರಪ್ಪ ಅವರ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಟಿಕೆಟ್​ ಘೋಷಣೆ ಬಾಕಿ ಇದೆ.

  • ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ.

    ಹಳೆ ಬೇರು ಹೊಸ‌ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ‌. #BJPYeBharavase #DoubleEngineSarkara pic.twitter.com/0VWUhULkm1

    — BJP Karnataka (@BJP4Karnataka) April 12, 2023 " class="align-text-top noRightClick twitterSection" data=" ">

2ನೇ ಪಟ್ಟಿಯಲ್ಲಿ ಪ್ರಮುಖವಾಗಿ ಜೈಲು ಶಿಕ್ಷೆಗೆ ಗುರಿಯಾಗಿ ಕಾನೂನು ಹೋರಾಟ ನಡೆಸುತ್ತಿರುವ ಹಾವೇರಿ ಶಾಸಕ ನೆಹರೂ ಓಲೆಕಾರ್, ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಕಲಘಟಗಿಯ ನಿಂಬಣ್ಣನವರ್, ವಿವಾದದಿಂದಾಗಿ ಕ್ಷೇತ್ರದ ಕಾರ್ಯಕರ್ತರ ಅಸಮಧಾನಕ್ಕೊಳಗಾಗಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರಿನ ಸುಕುಮಾರಶೆಟ್ಟಿ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಕಟಿಸಿದ್ದ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್, ಮಾಯಕೊಂಡ ಕ್ಷೇತ್ರದ ಶಾಸಕ ಲಿಂಗಣ್ಣಗೆ ಈ ಬಾರಿ ಕೊಕ್ ನೀಡಲಾಗಿದೆ. ಅಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ.

ಈ ಪಟ್ಟಿಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೂ ಮಣೆ ಹಾಕಲಾಗಿದೆ. ಗುರುಮಿಠಕಲ್ ಕ್ಷೇತ್ರದಿಂದ ಲಲಿತಾ ಅನಪುರ್ ಹಾಗೂ ಕೆಜಿಎಫ್​ನಿಂದ ಅಶ್ವಿನಿ ಸಂಪಂಗಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರಿದ್ದ ನಾಗರಾಜ್ ಛಬ್ಬಿಗೆ ಕಲಘಟಗಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 189 ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು ಸೇರಿ ಒಟ್ಟು 212 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದ್ದು 12 ಕ್ಷೇತ್ರಗಳು ಮಾತ್ರ ಬಾಕಿ ಇವೆ‌. ಮೊದಲ ಪಟ್ಟಿಯಲ್ಲಿ 8 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದ್ದರೆ, ಎರಡನೇ ಪಟ್ಟಿಯಲ್ಲಿ 7 ಹಾಲಿಗಳಿಗೆ ಕೊಕ್ ನೀಡಲಾಗಿದೆ. ಒಟ್ಟು ಈ ಬಾರಿ 212 ಕ್ಷೇತ್ರಗಳಲ್ಲಿ 15 ಶಾಸಕರಿಗೆ ಟಿಕೆಟ್ ಮಿಸ್ ಆದಂತಾಗಿದೆ.

ಇದನ್ನೂ ಓದಿ: ಫ್ಯಾಮಿಲಿ ಪಾಲಿಟಿಕ್ಸ್: 20ಕ್ಕೂ ಹೆಚ್ಚು ರಕ್ತ ಸಂಬಂಧಿ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

Last Updated : Apr 13, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.