ಮಹಿಳಾ ಏಷ್ಯಾಕಪ್: ಇಂದು ಭಾರತ vs ಹಾಂಗ್ ಕಾಂಗ್ ಮುಖಾಮುಖಿ; ಪಂದ್ಯ ಪ್ರಸಾರ ಎಲ್ಲಿ?
ಮಹಿಳಾ ಏಷ್ಯಾಕಪ್‌ನಲ್ಲಿ ಇಂದು ಭಾರತ ಮತ್ತು ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಈ ಕೆಳಗಿದೆ.

Published : September 3, 2026 at 12:00 PM IST
ಮಹಿಳಾ ಏಷ್ಯಾಕಪ್‌ನಲ್ಲಿ ಇಂದು ಭಾರತ ಮತ್ತು ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ರಾತ್ರಿ 8 ಗಂಟೆಗೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಹಾಂಗ್ ಕಾಂಗ್ ಮಹಿಳಾ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಭಾರತ ಗ್ರೂಪ್ ಎ ನಲ್ಲಿದ್ದು 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 94 ರನ್ ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಗೆದ್ದರೆ 4 ಅಂಕಗಳೊಂದಿಗೆ ಸೆಮಿಫೈನಲ್ಗೆ ಮುನ್ನಡೆಯುತ್ತದೆ. ಏಕೆಂದರೆ ಈ ಪಂದ್ಯದಲ್ಲಿ ಭಾರತ ಗೆದ್ದರೆ ಪಾಕಿಸ್ತಾನ ಹೊರತುಪಡಿಸಿ ಬೇರೆ ಯಾವುದೇ ತಂಡ 4 ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರತಿ ಗುಂಪಿನಿಂದ ಎರಡು ತಂಡಗಳು ಮಾತ್ರ ಸೆಮಿಫೈನಲ್ಗೆ ತಲುಪಲಿವೆ.
2026ರ ಅಂಕಿಅಂಶಗಳನ್ನು ನೋಡಿದರೆ, ಭಾರತ ಈ ವರ್ಷ 17 ಪಂದ್ಯಗಳನ್ನು ಆಡಿದೆ. ತಂಡವು 8 ಪಂದ್ಯಗಳನ್ನು ಗೆದ್ದು 9 ಪಂದ್ಯಗಳಲ್ಲಿ ಸೋತಿದೆ. ಮತ್ತೊಂದೆಡೆ, ಹಾಂಗ್ ಕಾಂಗ್ ಈ ವರ್ಷ ಆಡಿದ 26 ಪಂದ್ಯಗಳಲ್ಲಿ 16ರಲ್ಲಿ ಗೆದ್ದು 10 ರಲ್ಲಿ ಸೋತಿದೆ. ಆದಾಗ್ಯೂ, ಈ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಲಿದೆ.
ಶಫಾಲಿ, ಶ್ರೀಚರಣಿ ಅತ್ಯುತ್ತಮ ಫಾರ್ಮ್
ಭಾರತ ಪರ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತು ಬೌಲರ್ ಎನ್. ಶ್ರೀ ಚರಣಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಶಫಾಲಿ 2026 ರಲ್ಲಿ 17 ಇನ್ನಿಂಗ್ಸ್‌ಗಳಲ್ಲಿ 150.14 ಸ್ಟ್ರೈಕ್ ರೇಟ್‌ನಲ್ಲಿ 503 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 64 ಆಗಿದೆ. ಇದರಲ್ಲಿ ಐದು ಅರ್ಧಶತಕ ಸಹ ಸೇರಿವೆ. ಈ ವೇಳೆ 67 ಬೌಂಡರಿ ಮತ್ತು 16 ಸಿಕ್ಸರ್‌ಗಳನ್ನು ಸಹ ಸಿಡಿಸಿದ್ದಾರೆ. ಥಾಯ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೂ 36 ಎಸೆತಗಳಲ್ಲಿ 64 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇನ್ನು ಬೌಲಿಂಗ್‌ನಲ್ಲಿ, ಶ್ರೀ ಚರಣಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಅವರು 16 ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದು ಅವರು 6.71ರ ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 19 ರನ್‌ಗಳಿಗೆ 4 ವಿಕೆಟ್ ಪಡೆಿದಿರುವುದಾಗಿದೆ. ಮೊದಲ ಪಂದ್ಯದಲ್ಲಿ ಚರಣಿ ಎರಡು ವಿಕೆಟ್ ಪಡೆದಿದ್ದರು.
ಹಾಂಗ್ ಕಾಂಗ್ ಪರ, ಬ್ಯಾಟರ್ ನತಾಶಾ ಮೈಲ್ಸ್ ಮತ್ತು ಬೌಲರ್ ಕ್ಯಾರಿ ಚಾನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ ನತಾಶಾ 25 ಇನ್ನಿಂಗ್ಸ್‌ಗಳಲ್ಲಿ 39.28ರ ಸರಾಸರಿ ಮತ್ತು 97.14 ಸ್ಟ್ರೈಕ್ ರೇಟ್‌ನಲ್ಲಿ 784 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 100 ರನ್ ಆಗಿದೆ. ಬೌಲಿಂಗ್‌ನಲ್ಲಿ ಕ್ಯಾರಿ ಚಾನ್ 26 ಪಂದ್ಯಗಳಲ್ಲಿ 4.81ರ ಎಕಾನಮಿ ದರದಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 15 ರನ್‌ಗಳಿಗೆ 5 ವಿಕೆಟ್ ಆಗಿದೆ.
ಭಾರತ vs ಹಾಂಗ್ ಕಾಂಗ್ ಪಂದ್ಯ ಪ್ರಸಾರ ಎಲ್ಲಿ?
ಇಂದಿನ ಭಾರತ ಮತ್ತು ಹಾಂಗ್ ಕಾಂಗ್ ತಂಡಗಳ ನಡುವಿನ ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸೋನಿ ಲಿವ್ ಅಪ್ಲಿಕೇಶನ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ತಂಡಗಳು - ಭಾರತ:ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪ್ರತೀಕಾ ರಾವಲ್, ಭಾರತಿ ಫುಲ್ಮಾಲಿ, ರಿಚಾ ಘೋಷ್, ದೀಪ್ತಿ ಶರ್ಮಾ, ಪ್ರೇಮಾ ರಾವತ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದನಿ ಶರ್ಮಾ.
ಹಾಂಗ್ ಕಾಂಗ್:ಮರ್ಯಮ್ ಬೀಬಿ (ನಾಯಕಿ), ನತಾಶಾ ಮೈಲ್ಸ್, ಯಾಸ್ಮಿನ್ ದಾಸ್ವಾನಿ, ಮರೀನಾ ಲ್ಯಾಂಪ್ಲೋಫ್, ಕ್ಯಾರಿ ಚಾನ್, ಶಾಂಝೀನ್ ಶಹಜಾದ್, ಜಾಯ್ಲೀನ್ ಕೌರ್, ಶಿಂಗ್ ಚಾನ್ ಡೊರೊಥಿಯಾ, ಅಲಿಸನ್ ಸಿಯು, ಷಾರ್ಲೆಟ್ ಚಾನ್, ರುಚಿತಾ ವೆಂಕಟೇಶ್.
ಇದನ್ನೂ ಓದಿ:W,W,W,W,W,W,W: 5 ರನ್ಗೆ 7 ವಿಕೆಟ್ ಪಡೆದು ವಿಶ್ವದಾಖಲೆ ಬರೆದ ಆಲ್ರೌಂಡರ್!!