ಕರ್ನಾಟಕ

karnataka

ದರ್ಶನ್​​ ವೃತ್ತಿಜೀವನಕ್ಕೆ 25 ವರ್ಷದ ಸಂಭ್ರಮ: ಮಂಡ್ಯದಲ್ಲಿಂದು ಅದ್ಧೂರಿ 'D25 ಬೆಳ್ಳಿ ವರ್ವ' ಸಮಾರಂಭ

By ETV Bharat Karnataka Team

Published : Feb 17, 2024, 2:48 PM IST

ಮಂಡ್ಯದಲ್ಲಿಂದು ಅದ್ಧೂರಿ 'D25 ಬೆಳ್ಳಿ ವರ್ವ' ಸಮಾರಂಭ

ಮಂಡ್ಯ: ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಪಯಣಕ್ಕೆ 25 ವರ್ಷಗಳ ಸಂಭ್ರಮ. ಈ ಹಿನ್ನೆಲೆ, ಮಂಡ್ಯದಲ್ಲಿ 'D25 ಬೆಳ್ಳಿ ವರ್ವ' ಶೀರ್ಷಿಕೆಯಡಿ ಬೃಹತ್ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಸ್ಥಾನದ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಜರುಗಲಿದೆ.

ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಚಿತ್ರರಂಗದ ನಟ-ನಟಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಭಾಗಿ ಆಗಲಿದ್ದಾರೆ. ಸುಮಾರು 25 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ನಿರ್ದೇಶಕ ಮಹೇಶ್ ಸುಖಧರೆ ಮಾರ್ಗದರ್ಶನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. 

ಇದನ್ನೂ ಓದಿ: ದರ್ಶನ್ ಬರ್ತ್​ಡೇ ಸಂಭ್ರಮ​ದ ಫೋಟೋಗಳು: ಮುಂದಿನ ಸಿನಿಮಾ 'ಡೆವಿಲ್‌' ಗ್ಲಿಂಪ್ಸ್‌ ರಿಲೀಸ್

ABOUT THE AUTHOR

...view details