ಕರ್ನಾಟಕ

karnataka

ದಾವಣಗೆರೆ: ಸರ್ಕಾರಿ ಆಸ್ತಿಗಳ ಕಬಳಿಕೆಗೆ ಕಡಿವಾಣ ಹಾಕಲು ಬಂತು ಲ್ಯಾಂಡ್ ಬೀಟ್ ಆ್ಯಪ್ ​

By ETV Bharat Karnataka Team

Published : Feb 29, 2024, 1:42 PM IST

ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ ಆ್ಯಪ್​ ತಂತ್ರಾಂಶ ಬಳಕೆ ಮಾಡುವ ಮೂಲಕ ಕಡಿವಾಣ ಹಾಕಲಾಗುತ್ತಿದೆ.

ಲ್ಯಾಂಡ್ ಬೀಟ್ ಆ್ಯಪ್ ಬಳಕೆ​
ಲ್ಯಾಂಡ್ ಬೀಟ್ ಆ್ಯಪ್ ಬಳಕೆ​

ದಾವಣಗೆರೆ :ಸರ್ಕಾರಿ ಆಸ್ತಿಗಳ ಕಾವಲಿಗೆ ತಂತ್ರಜ್ಞಾನ ಬಳಕೆ ಮಾಡಲು ಸರ್ಕಾರ ಮುಂದಾಗಿದೆ. ಲ್ಯಾಂಡ್ ಬೀಟ್ ಆ್ಯಪ್​ಮೂಲಕ ಸರ್ವೇ ಮಾಡಿ ಜಿಯೋ ಫೆನ್ಸಿಂಗ್ ಮಾಡುವ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಲ್ಯಾಂಡ್ ಬೀಟ್ ಆ್ಯಪ್​ಕಾಂತ್ರಿಕಾರಿಯಾಗಿ ಕೆಲಸ ಮಾಡುತ್ತದೆಯೇ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ ಪ್ರಾಯೋಗಿಕವಾಗಿ ಸರ್ವೇ ನಡೆಸಿದ್ದಾರೆ.

ಸರ್ಕಾರಿ ಆಸ್ತಿಗಳೆಂದರೆ ಯಾರು ಬೇಕಾದರೂ ಒತ್ತುವರಿ ಮಾಡಬಹುದು ಮತ್ತು ಯಾರು ಕೇಳುವವರಿಲ್ಲ ಎಂಬ ಭಾವನೆ ಜನರಲ್ಲಿತ್ತು. ಅದರೆ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ ಆ್ಯಪ್​ ವ್ಯವಸ್ಥೆ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳನ್ನು ಜೋಪಾನ ಮಾಡಲು ಈ ಲ್ಯಾಂಡ್ ಬೀಟ್ ಕಾವಲಾಗಿ ಕಾಯುತ್ತದೆ. ಯಾರೇ ಸರ್ಕಾರದ ಆಸ್ತಿಯನ್ನು ಕಬಳಿಸಿದರೆ ತಕ್ಷಣ ಈ ಲ್ಯಾಡ್ ಬೀಟ್ ಜಿಯೋ ಫೆನ್ಸಿಂಗ್ ತಿಳಿಸುತ್ತದೆ.

ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ ಅವರು ಅಲ್ಲಿನ ಸರ್ವೆ ನಂಬರ್ 34 ರಲ್ಲಿನ ಸರ್ಕಾರಿ ಸ್ಮಶಾನದ ಜಮೀನನ್ನು ಸ್ವತಃ ಈ ಆ್ಯಪ್ ಮೂಲಕ ಸರ್ವೆ ಮಾಡಿ ಪರಿಶೀಲನೆ ನಡೆಸಿದರು. ಆಗ ಸರ್ಕಾರಿ ಭೂಮಿ ಒತ್ತುವರಿ ಆಗಿಲ್ಲ ಎಂದು ಜಿಯೋ ಫೆನ್ಸಿಂಗ್ ಮೂಲಕ ಜಿಲ್ಲಾಡಳಿತ ಖಚಿತಪಡಿಸಿಕೊಂಡಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋ ಫೆನ್ಸಿಂಗ್ ಮಾಡುತ್ತಾರೆ. ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಬ್ಯವಾಗುತ್ತದೆ. ಈ ಸ್ಥಳಗಳಿಗೆ ನಿಗದಿತ ಅವಧಿಯಲ್ಲಿ ಭೇಟಿ ನೀಡಲು ಯಾವ ರೀತಿ ಪೊಲೀಸ್ ಬೀಟಿಂಗ್ ವ್ಯವಸ್ಥೆ ಇರುತ್ತದೆ. ಅದೇ ರೀತಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಬೀಟಿಂಗ್ ವ್ಯವಸ್ಥೆಯನ್ನು ಆಪ್‍ನಲ್ಲಿ ಕಲ್ಪಿಸಲಾಗಿದೆ.

ಇದನ್ನೂ ಓದಿ :ಶೇ.60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಲು 3,044 ವ್ಯಾಪಾರಿಗಳ ನಿರ್ಲಕ್ಷ್ಯ

ABOUT THE AUTHOR

...view details