ಕರ್ನಾಟಕ

karnataka

ಗೌರವಧನ ಬಿಡುಗಡೆಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಶಿಕ್ಷಕ, ಬಿಇಒ - Lokayukta Raid

By ETV Bharat Karnataka Team

Published : Mar 29, 2024, 7:08 AM IST

Updated : Mar 29, 2024, 10:51 AM IST

ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗು ಬಿಇಒ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಶಿಕ್ಷಕ, ಬಿಇಒ ಲೋಕಾಯುಕ್ತ ಬಲೆಗೆ
ಶಿಕ್ಷಕ, ಬಿಇಒ ಲೋಕಾಯುಕ್ತ ಬಲೆಗೆ

ಮೈಸೂರು:ಗೌರವಧನ ಬಿಡುಗಡೆಗೆ ವ್ಯಕ್ತಿಯೊಬ್ಬರಿಂದ 5 ಸಾವಿರ ರೂ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಒ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಆರೋಪಿಗಳು.

ಇವರು ಮೈಸೂರಿನ ತಿಲಕ್ ನಗರ ನಿವಾಸಿ ನರಸಿಂಹಮೂರ್ತಿ ಎಂಬವರಿಂದ ಲಂಚದ ಹಣ ಪಡೆಯುತ್ತಿದ್ದರು. ಶಿವಲಿಂಗಯ್ಯ ಪರವಾಗಿ ಶಿಕ್ಷಕ ರಮೇಶ್ ಬಿಇಒ ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್​ಪಿ ವಿ.ಜೆ.ಸಜೀತ್ ನೇತೃತ್ವದಲ್ಲಿ‌ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ವಿ., ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್​ಗಳಾದ ರವಿಕುಮಾರ್, ಉಮೇಶ್, ಜಯರತ್ನ ಹಾಗೂ ಸಿಬ್ಬಂದಿಗಳಾದ ವೀರಭದ್ರ ಸ್ವಾಮಿ, ಗೋಪಿ, ಲೋಕೇಶ್, ಆಶಾ, ಕಾಂತರಾಜು, ಮೋಹನ, ಪ್ರದೀಪ್, ಮೋಹನ್ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ; ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಪರಿಶೀಲನೆ - Lokayukta Raid

Last Updated : Mar 29, 2024, 10:51 AM IST

ABOUT THE AUTHOR

...view details