ಕರ್ನಾಟಕ

karnataka

ಬೆಳಗಾವಿ: ಎಂಇಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಮೆರವಣಿಗೆಯಲ್ಲಿ ಆಕ್ಷೇಪಾರ್ಹ ಘೋಷಣೆ - MES Candidate Nomination

By ETV Bharat Karnataka Team

Published : Apr 19, 2024, 6:24 PM IST

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಎಂಇಎಸ್ ಅಭ್ಯರ್ಥಿಯಾಗಿ ಮಹಾದೇವ ಪಾಟೀಲ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು‌ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದಾರೆ.

MES candidate Mahadev Patil
ಎಂಇಎಸ್ ಅಭ್ಯರ್ಥಿ ಮಹಾದೇವ ಪಾಟೀಲ ನಾಮಪತ್ರ ಸಲ್ಲಿಕೆ‌ ಮೆರವಣಿಗೆ

ಬೆಳಗಾವಿ:ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಇಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. ಇದಕ್ಕೂ‌ ಮುನ್ನ ನಡೆದ ರ್ಯಾಲಿಯಲ್ಲಿ ಎಂಇಎಸ್ ಕಾರ್ಯಕರ್ತರು ಆಕ್ಷೇಪಾರ್ಹ ಘೋಷಣೆ ಕೂಗಿದ್ದು, ಮತ್ತೆ ಕನ್ನಡಿಗರನ್ನು ಕೆರಳಿಸಿದ್ದಾರೆ.

ಎಂಇಎಸ್ ಅಭ್ಯರ್ಥಿ ಮಹಾದೇವ ಪಾಟೀಲ ನಾಮಪತ್ರ ಸಲ್ಲಿಕೆ‌ಯ ಮೆರವಣಿಗೆಯಲ್ಲಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ 'ಸಂಯುಕ್ತ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿದ್ದಾರೆ. ಬೃಹತ್ ಮೆರವಣಿಗೆ ಮೂಲಕ ಚಕ್ಕಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮಹಾದೇವ ಪಾಟೀಲ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರು ಕೇಸರಿ ಪೇಟ ತೊಟ್ಟು ಪಾಲ್ಗೊಂಡಿದ್ದರು. ಎಲ್ಲೆಡೆ ಭಗವಾಧ್ವಜಗಳು ಕಂಡುಬಂದವು. ಮಹಿಳೆಯರು ಕೂಡ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಎಂಇಎಸ್ ಅಭ್ಯರ್ಥಿಯನ್ನು ಬೆಂಬಲಿಸಿದರು.

ಕಾಂಗ್ರೆಸ್-ಬಿಜೆಪಿಗೆ ಆತಂಕ:2021ರಲ್ಲಿ ನಡೆದ ಬೆಳಗಾವಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ 1.20 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಗೆಲುವಿನಲ್ಲಿ ಮರಾಠಿಗರ ಮತಗಳು ಪ್ರಮುಖ ಪಾತ್ರ ನಿರ್ವಹಿಸುವ ಹಿನ್ನೆಲೆಯಲ್ಲಿ ಈಗ ಮತ್ತೆ ಎಂಇಎಸ್ ಒಗ್ಗಟ್ಟಾಗಿ ಚುನಾವಣಾ ಕಣಕ್ಕೆ ಧುಮುಕಿರುವುದು ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಗೆ ಸವಾಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಮತ ವಿಭಜನೆಯ ಭೀತಿ ಶುರುವಾಗಿದೆ.

ಇದನ್ನೂಓದಿ:ಭ್ರಷ್ಟ ಸುಧಾಕರ್ ತನಿಖೆಯ ನಂತರ ಜೈಲಿಗೆ ಹೋಗಲಿದ್ದಾರೆ: ಸಿಎಂ‌ ಸಿದ್ದರಾಮಯ್ಯ - CM Siddaramaiah campaign

ABOUT THE AUTHOR

...view details