ಕರ್ನಾಟಕ

karnataka

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

By ETV Bharat Karnataka Team

Published : Feb 13, 2024, 9:46 PM IST

ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಅಸ್ಥಿಪಂಜರ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಸ್ಪತ್ರೆಯ ಮಹಿಳಾ ಹಾಸ್ಟೆಲ್ ಹಿಂಬದಿಯ ಚರಂಡಿ ಸ್ವಚ್ಛತೆ ಮಾಡುತ್ತಿದ್ದಾಗ ಸಿಬ್ಬಂದಿಗೆ ಅಸ್ಥಿಪಂಜರದ ಮೂಳೆ ಹಾಗೂ ತಲೆ ಬುರುಡೆ ಕಂಡುಬಂದಿದೆ.

ಕಳೆದ ಐದಾರು ತಿಂಗಳ ಹಿಂದೆಯೇ ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಧರಿಸಿರುವ ಬಟ್ಟೆಯಲ್ಲಿ ಪಿಒಪಿ ಫೌಡರ್ ಇದ್ದು, ಅದರಳೊಗೆ ಮೂಳೆಗಳಿದ್ದವು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಶವಾಗಾರದಲ್ಲಿ 3 ವರ್ಷಗಳಿಂದ ಅಸ್ಥಿಪಂಜರ: ಸತ್ತವರಿಗೆ ಕೊಡುವ ಗೌರವದಿಂದಲೂ ಕಾನೂನು, ಸುವ್ಯವಸ್ಥೆಯ ಮೌಲ್ಯಮಾಪನ ಅಗತ್ಯ - ಹೈಕೋರ್ಟ್​​​

ABOUT THE AUTHOR

...view details