ಕರ್ನಾಟಕ

karnataka

ಬಳ್ಳಾರಿ: ಚಿನ್ನಾಭರಣ ಮಳಿಗೆಯಲ್ಲಿ ಎಸಿ ಬ್ಲಾಸ್ಟ್; ನಾಲ್ವರಿಗೆ ಗಂಭೀರ ಗಾಯ - AC Blast

By ETV Bharat Karnataka Team

Published : May 2, 2024, 10:45 PM IST

ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಎಸಿ ಬ್ಲಾಸ್ಟ್ ಆಗಿ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

blast-in-jewellery-shop-ballari
ಚಿನ್ನಾಭರಣ ಮಳಿಗೆಯಲ್ಲಿ ಸ್ಫೋಟ (Etv Bharat)

ಬಳ್ಳಾರಿ: ನಗರದ ತೇರು ಬೀದಿಯಲ್ಲಿರುವ ಕಲ್ಯಾಣ್​ ಜ್ಯುವೆಲರ್ಸ್​​​ನಲ್ಲಿ ಗುರುವಾರ ಸಂಜೆ ಎಸಿ ಬ್ಲಾಸ್ಟ್ ಆಗಿದ್ದು, ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಓರ್ವ ವ್ಯಕ್ತಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಜೋರಾದ ಶಬ್ದ ಹಾಗೂ ಹೊಗೆಯಿಂದಾಗಿ ಮಳಿಗೆಯಲ್ಲಿದ್ದ ಜನರು ಕೆಲಕಾಲ ಆತಂಕಗೊಂಡಿದ್ದರು. ಮಳಿಗೆಯ ಸಿಬ್ಬಂದಿಯೇ ಗಾಯಗೊಂಡವರನ್ನು ಹೊರಗಡೆ ಎತ್ತಿಕೊಂಡು ಬಂದಿರುವ ದೃಶ್ಯಗಳು ಘಟನೆಯ ತೀವ್ರತೆಗೆ ಸಾಕ್ಷಿಯಾಗಿವೆ. ಗಾಯಾಳುಗಳನ್ನು ನಗರದ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಳಿಗೆಯ ಕಿಟಕಿ ಗಾಜುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ನಗರ ಡಿವೈಎಸ್‌ಪಿ, ಬ್ರೂಸ್‌ಪೇಟೆ ಸರ್ಕಲ್‌ ಇನ್ಸ್​ಪೆಕ್ಟ‌ರ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನೋಡಲು ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು: ಜಾತ್ರೆಗೆಂದು ಊರಿಗೆ ಬಂದ ಪತ್ನಿಯನ್ನು ಹೊಡೆದು ಕೊಂದ ಪತಿ - Husband Kills Wife

ABOUT THE AUTHOR

...view details