ಕರ್ನಾಟಕ

karnataka

ದಾವಣಗೆರೆ: ಜೋಕಾಲಿ ಆಡುವಾಗ ಕೊರಳಿಗೆ ಉರುಳು ಬಿದ್ದು ಬಾಲಕ ಸಾವು

By ETV Bharat Karnataka Team

Published : Feb 23, 2024, 10:53 PM IST

ದಾವಣಗೆರೆಯಲ್ಲಿ ಜೋಕಾಲಿ ಕೊರಳಿಗೆ ಉರುಳು ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ.

ನ್ಯಾಮತಿ ಪೊಲೀಸ್​ ಠಾಣೆ
ನ್ಯಾಮತಿ ಪೊಲೀಸ್​ ಠಾಣೆ

ದಾವಣಗೆರೆ: ಜೋಕಾಲಿ ಆಡುವ ವೇಳೆ ಕೊರಳಿಗೆ ಉರುಳು ಬಿದ್ದು ಬಾಲಕ ಕೊನೆಯುಸಿರೆಳೆದಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ. ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಪಿ.ಜೆ. ಕೊಟ್ರೇಶಿ (13) ಮೃತ ಬಾಲಕ. ಮೃತ ಬಾಲಕ ಕೊಟ್ರೇಶಿ ಶಾಲೆಯಿಂದ ಮನೆಗೆ ಬಂದು, ತಮ್ಮ ಮನೆಯಲ್ಲಿ ಮಗು ಆಡಿಸಲು ಹಾಕಿದ್ದ ಜೋಕಾಲಿಯಲ್ಲಿ ಆಡಲು ಆರಂಭಿಸಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಬಾಲಕ ಕೊಟ್ರೇಶಿ ಸಾವನಪ್ಪಿದ್ದಾನೆ. ಮೃತ ಬಾಲಕ ಕೊಟ್ರೇಶಿ ಶಿವಮೊಗ್ಗ ಜಿಲ್ಲೆಯ ಜ್ಞಾನಸಾಗರ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ಬಾಲಕನ ತಂದೆ ಎನ್.ಜಿ. ಪ್ರವೀಣ್ ಅವರು ನೀಡಿದ ದೂರಿ ಬೆನ್ನಲ್ಲೇ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಕಲಬುರಗಿ: ಬಸ್​ ಅಡ್ಡಗಟ್ಟಿ ಬಾಲಕಿಯ ಕತ್ತು ಕೊಯ್ದ ಬಾಲಕ

ABOUT THE AUTHOR

...view details