ಕರ್ನಾಟಕ

karnataka

ಹುಬ್ಬಳ್ಳಿಯಲ್ಲಿ ಸಿಐಡಿ ಕ್ರೈಂ ಬ್ರ್ಯಾಂಚ್'ನ ಅಧಿಕಾರಿಗಳು ಎಂದು ಬಂದಿದ್ದ ಮೂವರು ನಕಲಿಗಳ ಬಂಧನ - fake CID officers

By ETV Bharat Karnataka Team

Published : Apr 23, 2024, 12:52 PM IST

Updated : Apr 23, 2024, 1:11 PM IST

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ವೆಂಕಟೇಶ ನೇತೃತ್ವದ ಸಿಐಡಿ ಟೀಂ ತನಿಖೆ ಮಾಡುತ್ತಿದೆ. ಇದರ ಮಧ್ಯೆ ಜಿಲ್ಲೆಯಲ್ಲಿ ನಕಲಿ ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಮೋಸ ಮಾಡಿರುವ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

accused
ಆರೋಪಿಗಳು

ಹುಬ್ಬಳ್ಳಿ:ಸಿಐಡಿ ಕ್ರೈಂ ಬ್ರ್ಯಾಂಚ್​ನ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ಮೂರು ಜನರು ಸಿಐಡಿ ಕ್ರೈಂ ಬ್ರ್ಯಾಂಚ್​​ ಪೊಲೀಸರು ಎಂದು ಸುಳ್ಳು ಹೇಳಿಕೊಂಡು ಕ್ಯಾಟರಿಂಗ್​ ಕೆಲಸ ಮಾಡುತ್ತಿದ್ದ ಚೈತನ್ಯ ನಗರದ ನಿವಾಸಿ ಯಶೋಧಾ ಮುದುಗಲ್ (30) ಎಂಬುವರಿಗೆ ಮೋಸ ಮಾಡಿ, ಹೆದರಿಸಿ ಹಣ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೋಸ ಹೋದ ಮಹಿಳೆ ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು‌.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್​ಪೆಕ್ಟರ್​ ಎಸ್.ಎಚ್. ಯಳ್ಳೂರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಹಳೇ ಹುಬ್ಬಳ್ಳಿಯ ಕೃಷ್ಣಾಪೂರ ಓಣಿಯ ನಿವಾಸಿ ಚೇತನ ಹಡಪದ (39), ಲಿಂಗಸೂರಿನ ಪರಶುರಾಮಗೌಡ ಪಾಟೀಲ್ (45), ಕಾರಟಗಿಯ ಮಧು ಎಮ್ (35) ಎಂಬ ಮೂವರು ನಕಲಿ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇವರಿಂದ ಎರಡು ಮೊಬೈಲ್, ಹಾಗೂ ಒಂದು ಬುಲೆಟ್ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರು ಶ್ಲಾಘಿಸಿದ್ದಾರೆ.

ಜಿಲ್ಲೆಯಲ್ಲಿ ಅಸಲಿ ಸಿಐಡಿ ಅಧಿಕಾರಿಗಳ ವಾಸ್ತವ್ಯ :ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಿದೆ.

ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ ಒಂದೇ ಸ್ವತ್ತಿನ ಮೇಲೆ 22 ಬ್ಯಾಂಕ್‌ಗಳಿಂದ ಸಾಲ: ಆರು ಜನರ ಬಂಧನ - creating fake documents

Last Updated : Apr 23, 2024, 1:11 PM IST

ABOUT THE AUTHOR

...view details