ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜರು ಮಲೆ ಮತಗಟ್ಟೆಯಲ್ಲಿ ಶೇ.100 ಮತದಾನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಬಾಂಜರು ಮಲೆ ಮತಗಟ್ಟೆಯಲ್ಲಿ 4 ಗಂಟೆಯ ಸುಮಾರಿಗೆ ಶೇ.100 ಮತದಾನವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಗಿಯಲಿದೆ. ಇನ್ನೂ ಸಮಯವಿದ್ದು, ಎರಡು ಗಂಟೆ ಮೊದಲೇ ಈ ಮತಗಟ್ಟೆಯಲ್ಲಿ ಶೇ.100 ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರಿರುವ ಮತಗಟ್ಟೆ ಇದು. ಇಲ್ಲಿ 111 ಮತದಾರರಿದ್ದಾರೆ. ನೆರಿಯ ಗ್ರಾಮದ ಬಾಂಜರು ಸಮುದಾಯ ಭವನದಲ್ಲಿ ಈ ಮತಗಟ್ಟೆ ಇದೆ.