ಕರ್ನಾಟಕ

karnataka

IPL: ಪಂಜಾಬ್ ವಿರುದ್ಧ 21 ರನ್‌ಗಳ ಜಯ ಸಾಧಿಸಿದ ಲಕ್ನೋ; ಗಮನ ಸೆಳೆದ ಮಯಾಂಕ್ ಯಾದವ್ ಬೌಲಿಂಗ್ - Lucknow Super Giants

By PTI

Published : Mar 31, 2024, 7:10 AM IST

Updated : Mar 31, 2024, 8:59 AM IST

IPL 2024 LSG vs PBKS: ನಿನ್ನೆ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು 21 ರನ್‌ಗಳ ಅಂತರದಿಂದ ಮಣಿಸಿತು.

IPL 2024  LSG vs PBKS  Lucknow Super Giants  Punjab Kings
21 ರನ್‌ಗಳ ಅಂತರದಿಂದ ಪಂಜಾಬ್​ ಮಣಿಸಿದ ಲಕ್ನೋ

ಲಕ್ನೋ(ಉತ್ತರ ಪ್ರದೇಶ):ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 2024ರ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು 21 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ 200 ರನ್​ಗಳ ಟಾರ್ಗೆಟ್​ ನೀಡಿತು. ಇದಕ್ಕುತ್ತರವಾಗಿ ಪಂಜಾಬ್ 178 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

ಲಕ್ನೋ ತಂಡದ ಪರವಾಗಿ ಕ್ವಿಂಟನ್ ಡಿ ಕಾಕ್ ಅರ್ಧಶತಕ ಗಳಿಸಿದರು. ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಮಹತ್ವದ ಇನ್ನಿಂಗ್ಸ್ ಆಡಿದರು.

ಮಯಾಂಕ್ ಯಾದವ್ ಬಿಗು ಬೌಲಿಂಗ್: ಪಂಜಾಬ್ ಉತ್ತಮ ಆರಂಭ ಪಡೆಯಿತು. ಆದರೆ, ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ನಿರಂತರವಾಗಿ ವಿಕೆಟ್‌ಗಳು ಪತನಗೊಂಡವು. ತಂಡ ಮೊದಲ 11 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 101 ರನ್ ಗಳಿಸಿತ್ತು. ಆದರೆ, ಲಕ್ನೋ ತಂಡದ ಮಯಾಂಕ್ ಯಾದವ್ ಬಿಗು ಬೌಲಿಂಗ್​ ಮಾಡಿದರು. ಇವರು ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಲಕ್ನೋ ಬ್ಯಾಟಿಂಗ್:ಲಕ್ನೋ ಪರ ಕೆ.ಎಲ್.ರಾಹುಲ್ ಕೇವಲ 15 ರನ್ ಗಳಿಸಿ ಔಟಾದರು. ದೇವದತ್ ಪಡಿಕ್ಕಲ್ ಈ ಬಾರಿಯೂ ಅಭಿಮಾನಿಗಳ ನಿರೀಕ್ಷೆ ತಲುಪಲಿಲ್ಲ. ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕ್ವಿಂಟನ್ ಡಿ ಕಾಕ್ 38 ಎಸೆತಗಳಲ್ಲಿ 54 ರನ್ ಗಳಿಸಿ ಮಹತ್ವದ ಇನ್ನಿಂಗ್ಸ್ ಕಟ್ಟಿದರು. ನಿಕೋಲಸ್ ಪೂರನ್ ಬಿರುಸಿನ ಇನಿಂಗ್ಸ್‌ ಗಮನ ಸೆಳೆಯಿತು. 11ನೇ ಓವರ್‌ವರೆಗೆ ತಂಡದ ಸ್ಕೋರ್ 95 ರನ್ ಆಗಿತ್ತು. ಇಲ್ಲಿಂದ ತಂಡದ ತಂತ್ರಗಾರಿಕೆ ಬದಲಾಯಿತು. ಪೂರನ್ 21 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 42 ರನ್ ಕಲೆ ಹಾಕಿದರು. ಕೃನಾಲ್ ಪಾಂಡ್ಯ 22 ಎಸೆತಗಳಲ್ಲಿ 43 ರನ್‌ ಪೇರಿಸಿದರು.

ಪಂಜಾಬ್‌ ಬ್ಯಾಟಿಂಗ್:ಪಂಜಾಬ್ ಕಿಂಗ್ಸ್‌ಗೆ ನಾಯಕ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋ ಉತ್ತಮ ಆರಂಭ ನೀಡಿದರು. ಇಬ್ಬರು 102 ರನ್‌ಗಳ ಜೊತೆಯಾಟವಾಡಿದರು. 12ನೇ ಓವರ್‌ನಲ್ಲಿ ಬೈರ್‌ಸ್ಟೋವ್ 29 ಎಸೆತಗಳಲ್ಲಿ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಇನಿಂಗ್ಸ್‌ನಲ್ಲಿ ಅವರು 3 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಬೈರ್‌ಸ್ಟೋವ್ ಬಳಿಕ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಿತೇಶ್ ಶರ್ಮಾ ಕೂಡ ಬೇಗನೆ ಪೆವಿಲಿಯನ್‌ಗೆ ಮರಳಿದರು. ಆದರೆ, ಶಿಖರ್ ಧವನ್ ಕ್ರೀಸ್‌ನಲ್ಲಿ ದೃಢವಾಗಿ ನಿಂತರು. 50 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 70 ರನ್ ಗಳಿಸಿದರು. ಕೊನೆಯ 6 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿತ್ತು. ನವೀನ್ ಉಲ್-ಹಕ್ ಅವರ ಕೊನೆಯ ಓವರ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರೊಂದಿಗೆ ಲಕ್ನೋ ಐಪಿಎಲ್ 2024ರಲ್ಲಿ ತನ್ನ ಮೊದಲ ಜಯ ದಾಖಲಿಸಿತು.

ಇದನ್ನೂ ಓದಿ:ಟಿ20 ವಿಶ್ವಕಪ್​ಗೂ ಮುನ್ನ ಬಾಬರ್​ ಅಜಂಗೆ ಮತ್ತೆ ಪಾಕಿಸ್ತಾನ ತಂಡದ ನಾಯಕತ್ವದ ಹೊಣೆ? - Babar back as captain

Last Updated : Mar 31, 2024, 8:59 AM IST

ABOUT THE AUTHOR

...view details