ಕರ್ನಾಟಕ

karnataka

ಐಪಿಎಲ್ 2024: ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲು ಉತ್ಸಾಹದಲ್ಲಿರುವ ಯುವ ಪ್ರತಿಭೆಗಳು: ಏನಂದ್ರು ಹೊಸಬರು?

By ETV Bharat Karnataka Team

Published : Mar 19, 2024, 4:15 PM IST

ಐಪಿಎಲ್ 2024ರ ಟೂರ್ನಿಯಲ್ಲಿ ಮೂರು ಯುವ ಪ್ರತಿಭೆಗಳು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌
ಡೆಲ್ಲಿ ಕ್ಯಾಪಿಟಲ್ಸ್‌

ವಿಶಾಖಪಟ್ಟಣಂ (ಆಂಧ್ರಪ್ರದೇಶ):2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಮಾರ್ಚ್ 22 ರಂದು ಆರಂಭವಾಗುತ್ತಿದ್ದು, ಈ ಮೆಗಾ ಟೂರ್ನಿಗಾಗಿ ಡೆಲ್ಲಿ ಕ್ಯಾಪಿಟಲ್ ಮಿನಿ ಹರಾಜಿನಲ್ಲಿ​ ಮೂರು ಅದ್ಭುತ ಯುವ ದೇಶೀಯ ಪ್ರತಿಭೆಗಳಾದ ಆಲ್ ರೌಂಡರ್ ಸುಮಿತ್ ಕುಮಾರ್, ವಿಕೆಟ್ ಕೀಪರ್ - ಬ್ಯಾಟರ್ ಕುಮಾರ್ ಕುಶಾಗ್ರಾ ಮತ್ತು ಬ್ಯಾಟರ್ ರಿಕಿ ಭುಯಿ ಬಿಡ್​ ಮಾಡಿದೆ. ಈಗಾಗಲೇ ಈ ಆಟಗಾರರು ಪ್ರಸ್ತುತ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪೂರ್ವ - ಋತುವಿನ ಶಿಬಿರದಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಕ್ರಿಕೆಟ್ ಡಿಸಿ ಡೈರೆಕ್ಟರ್ ಸೌರವ್ ಗಂಗೂಲಿ ಅವರ ಮಾರ್ಗ ದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

19 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,245 ರನ್​​​​​ಗಳಿಸಿರುವ ಯುವ ಬ್ಯಾಟರ್​ ಕುಮಾರ್ ಕುಶಾಗ್ರಾ, ಮೊದಲ ಬಾರಿಗೆ ಐಪಿಎಲ್ ತಂಡವೊಂದರ ಭಾಗವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ನಾನು ಮೊದಲ ಬಾರಿಗೆ ಐಪಿಎಲ್‌ನ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ. ನಾನು ಅನೇಕ ದೊಡ್ಡ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಆಡುವ ಅವಕಾಶ ಪಡೆಯುತ್ತೇನೆ. ಅವರನ್ನು ನೋಡುತ್ತಾ ಬೆಳೆದಿದ್ದೇನೆ. ಆದರೆ, ನನ್ನ ಮುಖ್ಯ ಗುರಿ ಡೆಲ್ಲಿ ಪರ ಉತ್ತಮವಾಗಿ ಆಡಿ ಪಂದ್ಯಗಳನ್ನು ಗೆಲ್ಲುವುದಾಗಿದೆ ಎಂದಿದ್ದಾರೆ.

ಅಭ್ಯಾಸದ ವೇಳೆ ಟೀಮ್​ ಇಂಡಿಯಾ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್​​ ಪಂತ್ ಅವರೊಂದಿಗೆ ಕುಶಾಗ್ರ ಬ್ಯಾಟಿಂಗ್ ನಡೆಸಿರುವ ಕುರಿತು ಕೂಡಾ ಅನುಭವ ಹಂಚಿಕೊಂಡಿದ್ದಾರೆ. ರಿಷಭ್ ಪಂತ್ ಅವರೊಂದಿಗೆ ಮೊದಲ ಬಾರಿಗೆ ಬ್ಯಾಟಿಂಗ್​ ಮಾಡಿರುವುದು ಖುಷಿ ತಂದಿದೆ. ಅವರು ನನ್ನ ಆಟ ಬಗ್ಗೆ ಸಾಕಷ್ಟು ವಿಶ್ಲೇಕ್ಷಣೆ ಮಾಡಿ ಹೇಳಿದ್ದಾರೆ. ರಿಷಭ್​​ ಪಂತ್​ ಒಬ್ಬರೇ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಂತು ಏಕಾಂಗಿಯಾಗಿ ಸಿಕ್ಸರ್​ಗಳನ್ನು ಬಾರಿಸುತ್ತಿದ್ದರು. ಇದನ್ನು ನೋಡಿದ ಮೇಲೆ ನಾವು ಒಟ್ಟಾಗಿ ಡೆಲ್ಲಿ ಪರ ಅಡಿ ಎಲ್ಲ ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಅನಿಸುತ್ತಿದೆ ಎಂದು ಕುಮಾರ್ ಕುಶಾಗ್ರ ಹೇಳಿದರು.

ಮತ್ತೊಮ್ಮ ಆಲ್‌ರೌಂಡರ್ ಸುಮಿತ್ ಕುಮಾರ್, ಈವರೆಗೆ ಟಿ-20ಯಲ್ಲಿ 574 ರನ್ ಮತ್ತು 43 ವಿಕೆಟ್‌ಗಳನ್ನು ಪಡೆದಿದ್ದಾರೆ. ತಮ್ಮ ಮೊದಲ ಐಪಿಎಲ್​ ಪ್ರಯಾಣದ ಆರಂಭಕ್ಕೂ ಮುನ್ನ ಮಾತನಾಡಿರುವ ಸುಮಿತ್​ ಕುಮಾರ್​, ನಾನು ಏಳನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಇದು ನನಗೆ ದೀರ್ಘ ಪ್ರಯಾಣವಾಗಿದೆ. ನಾನು ಕಳೆದ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದೇನೆ. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಇದು ಅದ್ಭುತವಾದ ವರ್ಷ ಎಂದು ಅವರು ತಿಳಿಸಿದರು.

ಯುವ ಬ್ಯಾಟರ್​ 62 ಟಿ-20 ಗಳಲ್ಲಿ 1497 ರನ್ ಗಳಿಸಿರುವ ರಿಕಿ ಭುಯಿ ಅವರು ಕೂಡ ಡೆಲ್ಲಿ ತಂಡದ ಪರ ಆಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಸರಿಯಾದ ಸಮಯದಲ್ಲಿ ಉತ್ತುಂಗಕ್ಕೆ ಏರುತ್ತಿದ್ದೇನೆ ಎಂದು ಭಾವಿಸುತ್ತೇನೆ. ನಾನು ಮನೆಯಲ್ಲಿ ಐಪಿಎಲ್ ಆಡುತ್ತೇನೆ ಎಂದು ಊಹಿಸಿರಲಿಲ್ಲ. ನನಗೆ ಪರಿಸ್ಥಿತಿಗಳ ಬಗ್ಗೆ ತುಂಬಾ ತಿಳಿದಿದೆ. ವಿಶಾಖಪಟ್ಟಣಂ ನಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರ ಮುಂದೆ ಆಡುವುದು ಉತ್ತಮವಾಗಿರುತ್ತದೆ. ನಾನು ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇನೆ ಎಂದು ಭರವಸೆ ನೀಡಿದರು.

ಮಾರ್ಚ್ 23 ರಂದು ಚಂಡೀಗಢದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಆರಂಭಿಕ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಎದುರು ಆಡಲಿದೆ. ಡೆಲ್ಲಿ ಪರ ರಿಷಭ್​​​ ಪಂತ್​ ಪುನರಾಗಮನ ಐಪಿಎಲ್​ ನಲ್ಲಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ :ಒಂದು ವರ್ಷದ ಸಿದ್ಧತೆ, ಆಟಗಾರರ ಬದ್ಧತೆ ಆರ್‌ಸಿಬಿ ಯಶಸ್ಸಿಗೆ ಕಾರಣ: ಸ್ಮೃತಿ ಮಂಧಾನ

ABOUT THE AUTHOR

...view details