ಕರ್ನಾಟಕ

karnataka

ETV Bharat / health

ಮಹಿಳೆಯರನ್ನ ಕಾಡುವ ಅಂಡಾಶಯ ಕ್ಯಾನ್ಸರ್​​ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಅವಶ್ಯಕ; ತಜ್ಞರು - ovarian cancers are diagnosed

ಅಂಡಾಶಯ ಕ್ಯಾನ್ಸರ್​​ಗೆ ಪ್ರಮುಖ ಕಾರಣ ಎಂದರೆ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳದೇ ಇರುವುದೇ ಆಗಿದೆ.

ovarian cancers are diagnosed at a later stage
ovarian cancers are diagnosed at a later stage

By IANS

Published : Apr 1, 2024, 10:58 AM IST

ನವದೆಹಲಿ: ಮಹಿಳೆಯರಲ್ಲಿ ಸಾವಿಗೆ ಕಾರಣವಾಗುವ ಅಂಡಾಶಯದ ಕ್ಯಾನ್ಸರ್​​ ಅನ್ನು ನಿಯನಿತ ಪರೀಕ್ಷೆ ಮೂಲಕ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಅವಶ್ಯ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಅಂಡಾಶಯದ ಕ್ಯಾನ್ಸರ್​​ ಅಪಾಯಕಾರಿಯಾಗಿದೆ. ಇದು ಅಂಡಾಶಯಗಳ ಆಚೆಗೆ ಹರಡುವವರೆಗೆ ಸಾಮಾನ್ಯವಾಗಿ ಪತ್ತೆಯಾಗುವುದಿಲ್ಲ. ಇವುಗಳು ಇತರ ಪರಿಸ್ಥಿತಿಗಳಿಗೆ ಸಹ ಕಾರಣ ಆಗಬಹುದು. ಭಾರತದಲ್ಲಿ ಅಂಡಾಶಯದ ಕ್ಯಾನ್ಸರ್​​​ ಬಹುತೇಕ ಅಂಶಗಳಿಗೆ ಕಾರಣವಾಗುತ್ತದೆ.

ಅಂಡಾಶಯ ಕ್ಯಾನ್ಸರ್​​ಗೆ ಪ್ರಮುಖ ಕಾರಣ ಎಂದರೆ ನಿಯಮಿತ ಪರೀಕ್ಷಾ ವಿಧಾನ ನಡೆಸದೇ ಹೋಗುವುದು. ಅನೇಕ ಬಾರಿ ಅಂಡಾಶಯದ ಕ್ಯಾನ್ಸರ್​​ ಅಂತಿಮ ಹಂತದಲ್ಲಿ ಪತ್ತೆಯಾಗುತ್ತದೆ. ಆಗ ನಮ್ಮ ಬಳಿ ಕೆಲವೇ ಚಿಕಿತ್ಸೆಗಳ ಆಯ್ಕೆ ಇರುತ್ತದೆ ಎಂದು ಮುಂಬೈನ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​​ ಇನ್ಸಿಟಿಟ್ಯೂಟ್​ ಆಫ್​ ಇಂಡಿಯಾದ ಸರ್ಜಿಕಲ್​ ಆಂಕೊಲಾಜಿಸ್ಟ್​​​ ಡಾ ಕನವ್​ ಕುಮಾರ್​​ ತಿಳಿಸಿದ್ದಾರೆ.

ಅಂಡಾಶಯದ ಕ್ಯಾನ್ಸರ್​​ ಪತ್ತೆ ಮತ್ತು ಚಿಕಿತ್ಸೆ ಅನೇಕ ಬಾರಿ ಆರೋಗ್ಯ ಸೇವೆಯಲ್ಲಿ ನಿಯಮಿತ ಪಾತ್ರ ಹೊಂದಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದರ ಪತ್ತೆ ತುಸು ಕಷ್ಟಕರವಾಗಿದೆ. ಅಂತಿಮ ಹಂತದಲ್ಲಿ ಅಂಡಾಶಯದ ಕ್ಯಾನ್ಸರ್​ ಪತ್ತೆಯಾಗುವುದರಿಂದ ಮಹಿಳೆಯರ ಸಾವಿಗೆ ಕಾರಣವಾಗುತ್ತದೆ.

ಅಂಡಾಶಯದ ಕ್ಯಾನ್ಸರ್​​ ಅನ್ನು ಮುಂಚಿತವಾಗಿ ಕಂಡು ಹಿಡಿಯಲು ಯಾವುದೇ ಉತ್ತಮ ಮಾರ್ಗಗಳಿಲ್ಲ. ಆದರೆ, ಇದನ್ನು ಸಿ125 ಅಂದಾಜನ್ನು ಮಾಡಬಹುದು. ಹೆಚ್ಚಿನ ರೋಗಿಗಳಲ್ಲಿ ಇದು ಅಂತಿಮ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಸರ್​​ ಎಚ್​ಎನ್​ ರಿಲಯನ್ಸ್​​ ಫೌಂಡೇಶನ್​ ಆಸ್ಪತ್ರೆಯ ಕನ್ಸಲ್ಟಂಟ್​ ಮೆಡಿಕಲ್​ ಅಂಕೋಲಾಜಿಯ ಡಾ ಪ್ರಿತಂ ಕಟಾರಿಯಾ ತಿಳಿಸಿದ್ದಾರೆ.

ಈ ಕ್ಯಾನ್ಸರ್​​ ಅಂತಿಮ ಹಂತದಲ್ಲಿ ಪತ್ತೆಯಾಗುವ ಹಿನ್ನೆಲೆ ರೋಗಿಗಳು ಸಾವಿನ ಅಪಾಯ ಹೆಚ್ಚಿರುತ್ತದೆ. ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯ ಅಂಡಾಣು ಉತ್ಪತ್ತಿ ಮತ್ತು ಸಂತಾನೋತ್ಪತ್ತಿ ಹಾರ್ಮೋನ್‌ಗಳಿಗೆ ಹೆಚ್ಚಿನ ಮೆನೋಪಾಸ್​​ಗಳು ಅಂಡಾಶಯದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದೊಂದಿಗೆ ಸಂಬಂದ ಹೊಂದಿವೆ ಎಂದು ಡಾ ಕುಮಾರ್​ ತಿಳಿಸಿದ್ದಾರೆ.

ಅಂಡಾಶಯದ ಕ್ಯಾನ್ಸರ್​​ಗಳು ಸ್ಥೂಲಕಾಯತೆ, ಎಂಡೊಮೆಟ್ರಿಯೊಸಿಸ್ ಮತ್ತು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಬಳಕೆಯನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಎಚ್​ಆರ್​ಟಿಯನ್ನು ದೀರ್ಘಕಾಲದವರೆಗೆ ಬಳಸಿದರೆ ಈ ಸಮಸ್ಯೆ ಹೆಚ್ಚು. ಮೆನೋಪಾಸ್​ ಮಹಿಳೆಯರು ಹೊಟ್ಟೆ ಅಥವಾ ಸ್ತನದಲ್ಲಿನ ಗಡ್ಡೆ ಅಥವಾ ಋತುಬಂಧಕ್ಕೊಳಗಾದ ರಕ್ತಸ್ರಾವ ಕಂಡು ಬರುತ್ತದೆ. ಈ ರೋಗಲಕ್ಷಣಗಳು ಕಂಡು ಬಂದರೆ ಜಾಗರೂಕರಾಗಿರಬೇಕು. (ಐಎಎನ್​ಎಸ್​​)

ಇದನ್ನೂ ಓದಿ:ಸ್ಥೂಲಕಾಯ ನಿರ್ವಹಣೆಗೆ ಔಷಧಗಳು ಮಾತ್ರವೇ ಸಹಕಾರಿಯಲ್ಲ: ಮತ್ತೆ ಹೇಗೆ? - Help Treat Obesity

ABOUT THE AUTHOR

...view details