ನವದೆಹಲಿ: ಬೆದರಿಕೆ (Bullying) ಒಳಗಾಗುವ ಹದಿಹರೆಯದವರಲ್ಲಿ ಆರಂಭಿಕ ಹಂತದ ಸೈಕೋಸಿಸ್ಕ್ಕೆ ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚಿದೆ. ಇದು ಪ್ರಾಥಮಿಕ ಹಂತದ ಮಾನಸಿಕ ಸಮಸ್ಯೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಜಪಾನ್ನ ಟೋಕಿಯೋ ಯುನಿವರ್ಸಿಟಿ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದು, ಈ ಸಂಬಂಧ ಬೆದರಿಕೆಗೆ ಒಳಗಾದ 500 ಹದಿಹರೆಯದವರ ಮಿದುಳಿನ ಸ್ಕ್ಯಾನ್ ನಡೆಸಿದ್ದಾರೆ. ಈ ವೇಳೆ ಅವರ ಆಂಟೀರಿಯರ್ ಸಿಂಗ್ಯುಲೇಟ್ ಕಾರ್ಟೆಕ್ಸ್ (ಎಸಿಸಿ)ನಲ್ಲಿ ಕಡಿಮೆ ಮಟ್ಟದ ಗ್ಲುಟಮೇಟ್ ಹೊಂದಿರುವುದು ಕಂಡು ಬಂದಿದೆ. ಇದು ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಪ್ರಮುಖ ಭಾಗವಾಗಿದೆ. ಹದಿಹರೆಯದವರಲ್ಲಿ ಗ್ಲುಟಮೇಟ್ ಕಡಿಮೆ ಮಟ್ಟದಲ್ಲಿ ಕಂಡು ಬಂದಿದ್ದು, ಇದು ಸೈಕೋಸಿಸ್ನ ಆರಂಭಿಕ ಹಂತದ ಅಪಾಯವನ್ನು ತೋರಿಸುತ್ತದೆ. ಆರಂಭಿಕ ಹಂತದ ಸೈಕೋಸಿಸ್ ಹಂತದಲ್ಲಿ ಅವರು ಬೆದರಿಕೆ ಅನುಭವಿಸಿರುವುದು ಕಂಡು ಬಂದಿದೆ.
ಈ ರೀತಿ ಸಂತ್ರಸ್ತರ ಪತ್ತೆಗಾಗಿ ಅವರು ಪ್ರಶ್ನಾವಳಿಗಳ ತಂತ್ರವನ್ನು ಬಳಕೆ ಮಾಡಿದ್ದಾರೆ. ಈ ವೇಳೆ, ಅವರ ಅನುಭವಗಳನ್ನು ನಿರ್ಣಯಿಸಲು ಔಪಚಾರಿಕ ಮನೋವೈದ್ಯಕೀಯ ಮಾಪನ ವಿಧಾನಗಳನ್ನು ಬಳಸಿದರು. ಈ ವೇಳೆ, ತಂಡವೂ ಈ ರೀತಿ ಬೆದರಿಕೆಯು ಹದಿಹರೆಯದವರ ಆರಂಭಿಕ ಹಂತದ ಸೈಕೋಸಿಸ್ನೊಂದಿಗೆ ಸಂಬಂಧ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ. ಈ ಲಕ್ಷಣಗಳು ಸೈಕೋಸಿಸ್ಗೆ ಹತ್ತಿರ ಬಂದಿದೆ ಎಂದು ವಿವರಿಸಿದ್ದಾರೆ. ಆದರೆ, ಅವರು ಕ್ಲಿನಿಕಲ್ ರೋಗನಿರ್ಣಯಕ್ಕೆ ಸಂಪೂರ್ಣ ಮಾನದಂಡಗಳನ್ನು ಪೂರೈಸಿಲ್ಲ. ಈ ಸಮಸ್ಯೆಯ ಸ್ಕಿಜೋಫ್ರೆನಿಯಾ ಮತ್ತು ಬೈಪೋಲಾರ್ ಸಮಸ್ಯೆಗಳನ್ನು ಒಳಗೊಂಡಿದೆ.