ಕರ್ನಾಟಕ

karnataka

ಗ್ರಾಹಕರಿಗೆ ಗುಡ್ ನ್ಯೂಸ್; ಭಾರಿ ಇಳಿಕೆ ಕಂಡ ಚಿನ್ನದ ದರ, ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯೂ ಇಳಿಕೆ! - Gold Price Today

By PTI

Published : May 1, 2024, 1:04 PM IST

Gold Rate Today April 30th 2024: ದೇಶದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ಪ್ರಸ್ತುತ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ ಓದಿ.

Reduced gas cylinder price  Good news  Reduced gold price  Gold Rate
ಗ್ರಾಹಕರಿಗೆ ಗುಡ್ ನ್ಯೂಸ್.. ಭಾರಿ ಇಳಿಕೆ ಕಂಡ ಹಳದಿ ಲೋಹದ ದರ, ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯೂ ಇಳಿಕೆ!

ದೇಶದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ 950 ರೂ. ಇಳಿಕೆಯಾಗಿದ್ದು, ಪ್ರಸ್ತುತ ರೂ.73,390 ಆಗಿದೆ. ಬೆಳ್ಳಿ ಬೆಲೆ ಕೆಜಿಗೆ 400 ರೂ. ಏರಿಕೆಯಾಗಿ 83,480 ರೂ.ಗೆ ತಲುಪಿದೆ.

  • ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 71,510 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 83,400 ರೂ. ಇದೆ.
  • ಮೈಸೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 71,510 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 83,400 ರೂ. ಇದೆ.
  • ಬೆಳಗಾವಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 71,510 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 83,400 ರೂ. ಇದೆ.
  • ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 83,480 ರೂ. ಇದೆ.
  • ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 83,480 ರೂ. ಇದೆ.
  • ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 83,480 ರೂ. ಇದೆ.
  • ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 83,480 ರೂ. ಇದೆ.

ಗಮನಿಸಿ: ಈ ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತಿರುತ್ತವೆ.

ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿವೆ. ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,330 ಡಾಲರ್. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 26.96 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ದರಗಳು ಹೇಗಿವೆ?: ಕ್ರಿಪ್ಟೋ ಕರೆನ್ಸಿ ವಹಿವಾಟು ಭಾರಿ ಲಾಭದೊಂದಿಗೆ ಮುಂದುವರಿದಿದೆ.

ಕ್ರಿಪ್ಟೋ ಕರೆನ್ಸಿಯ ಪ್ರಸ್ತುತ ಬೆಲೆಗಳು:

  • ಬಿಟ್ ಕಾಯಿನ್- 55,30,000 ರೂ.
  • ಎಥೆರಿಯಂ- 2,56,968 ರೂ.
  • ಟೆಥರ್- 81.1 ರೂ.
  • ಬಿನಾನ್ಸ್ ನಾಣ್ಯ- 49,100 ರೂ.
  • ಸೊಲೊನಾ- 12,027 ರೂ.

ಪೆಟ್ರೋಲ್, ಡೀಸೆಲ್ ಬೆಲೆ!: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಹಾಗೂ ಡೀಸೆಲ್ ಬೆಲೆ 95.63 ರೂ. ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ.

ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ದರ ಇಳಿಕೆ:ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಸರಿಯಾಗಿ ಒಂದು ವಾರ ಇರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಇಳಿಕೆ ಮಾಡಿವೆ. ಈ ನಿರ್ಧಾರದಿಂದ ಜನರಿಗೆ ಕೊಂಚ ನೆಮ್ಮದಿ ಲಭಿಸಿದೆ.

ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 19 ರೂಪಾಯಿ ಇಳಿಕೆಯಾಗಿದೆ. ಮೇ 1 (ಇಂದಿನಿಂದ) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 19 ರೂ. ಕಡಿತಗೊಳಿಸುತ್ತಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರಮುಖ ನಗರಗಳಲ್ಲಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ?:ಮೇ 1 ರಿಂದ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,764.50 ರೂ.ಗಳಷ್ಟಿತ್ತು. ಆದರೆ, ಇತ್ತೀಚಿನ 19 ರೂ. ಕಡಿತವು 1,745.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,879 ರೂ. ಆಗಿದ್ದರೆ, ಇತ್ತೀಚಿನ ಇಳಿಕೆಯೊಂದಿಗೆ 1859 ರೂ.ಗೆ ಇಳಿದಿದೆ. ಹೈದರಾಬಾದ್‌ನಲ್ಲಿ 19 ಕೆಜಿಯ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2013.50 ರೂ. ಇದ್ದ ದರ, ಇದೀಗ 1994.50 ರೂ.ಗೆ ಇಳಿಕೆ ಕಂಡಿದೆ.

ಇದನ್ನೂ ಓದಿ:Good news; 'ಆ ಬಡ್ಡಿ ಹಿಂತಿರುಗಿಸಿ', ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ; ಸಾಲಗಾರರಿಗೆ ಸಂತಸದ ಸುದ್ದಿ - RBI ON INTEREST CHARGES

ABOUT THE AUTHOR

...view details