ಕರ್ನಾಟಕ

karnataka

ಜಾರ್ಖಂಡ್‌: ರೈಲು ಡಿಕ್ಕಿ ಹೊಡೆದು ಇಬ್ಬರು ಸಾವು

By ETV Bharat Karnataka Team

Published : Feb 28, 2024, 9:43 PM IST

ಜಾರ್ಖಂಡ್‌ನ ಜಮ್ತಾರಾ ಎಂಬಲ್ಲಿ ರೈಲು ಡಿಕ್ಕಿ ಹೊಡೆದು ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ಜಮ್ತಾರಾ
ಜಮ್ತಾರಾ

ಜಮ್ತಾರಾ(ಜಾರ್ಖಂಡ್‌): ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯಲ್ಲಿ ಇಂದು ಸಂಜೆ ನಡೆದ ರೈಲು ಅವಘಡದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಜಮ್ತಾರಾದ ಕಲ್ಜಾರಿಯಾ ಪ್ರದೇಶದ ಸಮೀಪ ಕೆಲವು ಪ್ರಯಾಣಿಕರು ರೈಲಿನಿಂದ ರಾಂಗ್ ಸೈಡ್‌ನಿಂದ ಕೆಳಗಿಳಿದ ಕಾರಣ ಅಪಘಾತ ಸಂಭವಿಸಿದೆ ಎಂದು ಜಮ್ತಾರಾ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಎಂ.ರೆಹಮಾನ್ ತಿಳಿಸಿದರು.

ಪ್ರಯಾಣಿಕರು ರೈಲಿನಿಂದ ಕೆಳಗಿಳಿದಾಗ ಇನ್ನೊಂದು ಮಾರ್ಗದಿಂದ ಬರುತ್ತಿದ್ದ ಲೋಕಲ್ ರೈಲು ಡಿಕ್ಕಿ ಹೊಡೆದಿದೆ. ಇಲ್ಲಿಯವರೆಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೃತರ ಸಂಖ್ಯೆ ಹೆಚ್ಚಾಗಬಹುದು" ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಶಹದೋಲ್​​​​​ನಲ್ಲಿ ಹಳಿತಪ್ಪಿದ ಆರು ರೈಲ್ವೆ ಬೋಗಿಗಳು.. ಪರದಾಡಿದ ಪ್ರಯಾಣಿಕರು

ABOUT THE AUTHOR

...view details