ನವದೆಹಲಿ:ಅಪಾಯದ ಸಂದರ್ಭಗಳಲ್ಲಿ ಶೀಘ್ರ ನೆರವಿಗೆ ಬರುವ ಕ್ರಾಶ್ ಫೈರ್ ಟೆಂಡರ್ (ನೀರು ಚಿಮ್ಮಿಸುವ ಯಂತ್ರ) ಅನ್ನು ಭಾರತೀಯ ವಾಯುಪಡೆಯು ಬುಧವಾರ ಪಡೆದಿದೆ. ಇದೇ ಮೊದಲ ಬಾರಿಗೆ ಸಿಎಫ್ಟಿ ಯಂತ್ರ ಭಾರತೀಯ ಸೇನೆಗೆ ಸೇರಿದೆ. ಈ ಕ್ರಾಶ್ ಫೈರ್ ಟೆಂಡರ್ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ನೋಯ್ಡಾ ಮೂಲದ ಕಂಪನಿ ಇದನ್ನು ಒಪ್ಪಂದ ಮಾಡಿಕೊಂಡ 14 ತಿಂಗಳ ಒಳಗೆ ತಯಾರಿಸಿ ಕೊಟ್ಟಿದೆ.
"ಭಾರತೀಯ ವಾಯುಪಡೆಯು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಕ್ರ್ಯಾಶ್ ಫೈರ್ ಟೆಂಡರ್ ಅನ್ನು ಪಡೆದುಕೊಂಡಿದೆ. ನೋಯ್ಡಾ ಮೂಲದ ಭಾರತೀಯ ಎಂಎಸ್‌ಎಂಇ ಸಂಸ್ಥೆಯಿಂದ ಇದು ತಯಾರಿಸಲ್ಪಟ್ಟಿದೆ. 291 ಕೋಟಿ ಮೌಲ್ಯದ ಒಪ್ಪಂದವನ್ನು ನೋಯ್ಡಾ ಮೂಲದ ಭಾರತೀಯ ಕೈಗಾರಿಕಾ ಸಂಸ್ಥೆಯ ಜೊತೆ ಮಾಡಿಕೊಳ್ಳಲಾಗಿತ್ತು. ಮಾತುಕತೆ ನಡೆದ 14 ತಿಂಗಳ ಒಳಗೆ ಸಿಎಫ್‌ಟಿಯನ್ನು ತಯಾರಿಸಿ ಕೊಡಲಾಗಿದೆ ಎಂದು ಭಾರತೀಯ ವಾಯುಸೇನೆ ತನ್ನ ಎಕ್ಸ್ ಖಾತೆಯಲ್ಲಿ ಚಿತ್ರಗಳ ಸಮೇತ ಮಾಹಿತಿ ಹಂಚಿಕೊಂಡಿದೆ.
ಯಂತ್ರ ತಯಾರಿಕೆಗೆ ಜಾಗತಿಕ ಪೂರೈಕೆಯಲ್ಲಿ ವಿಳಂಬ, ಅಡ್ಡಿಗಳ ನಡುವೆಯೂ ಸಾಧಿಸಲಾಗಿದೆ. ಊಹಿಸಿದಂತೆ ಮತ್ತು ಭರವಸೆಯಂತೆ ವಾಯುಸೇನೆಯು ಫೈರ್ ಎಂಜಿನ್ ಅನ್ನು ಪಡೆದುಕೊಂಡಿದೆ. ದೇಶೀಯ ಉತ್ಪಾದನೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದಿದೆ.